ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುನಗರದ ಸುತ್ತೂರು ಮಠಕ್ಕೆ ಅಂತಾರಾಷ್ಟ್ರೀಯ ಬೂಕರ್‌ಪ್ರಶಸ್ತಿ ವಿಜೇತ ಲೇಖಕಿ ಬಾನು ಮುಷ್ತಾಕ್‌ಅವರನ್ನು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅಭಿನಂದಿಸಿದರು.ಬಾನು ಮುಷ್ತಾಕ್‌ಅವರಿಗೆ ಫಲ ತಾಂಬೂಲ, ಹಾರ, ಮೈಸೂರು ಪೇಟ ತೊಡಿಸಿ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.ಈ ವೇಳೆ ಹಿರಿಯ ಸಾಹಿತಿ ಡಾ. ಸಿಪಿಕೆ, ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ, ನಗರ ಪಾಲಿಕೆ ಆಯುಕ್ತ ಶೇಖ್‌ತನ್ವೀರ್‌ಆಸಿಫ್, ಎಡಿಸಿ ಡಾ.ಪಿ. ಶಿವರಾಜ್, ಜೆಎಸ್‌ಎಸ್‌ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ. ಬೆಟಸೂರಮಠ್, ವಿಶ್ರಾಂತ ಕುಲಪತಿ ಡಾ. ಪದ್ಮಾಶೇಖರ್, ಪ್ರೊ.ಎನ್. ಉಷಾ ರಾಣಿ, ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್, ಮಾಜಿ ಅಧ್ಯಕ್ಷರಾದ ಡಾ.ವೈ.ಡಿ. ರಾಜಣ್ಣ, ಡಾ.ಎಸ್. ಶಿವರಾಜಕುಮಾರ್, ಡಾ.ಎಸ್. ದತ್ತೇಸ್‌ಕುಮಾರ್, ಚಿನ್ನಸ್ವಾಮಿ ವಡ್ಡಗೆರೆ, ಎಂ. ಚಂದ್ರಶೇಖರ್, ಪ್ರಾಧ್ಯಾಪಕಿ ಲೋಲಾಕ್ಷಿ, ರೇಖಾ ಶ್ರೀನಿವಾಸ್, ಮೈ.ನಾ. ಲೋಕೇಶ್, ಶಾರದಾ ಶಿವಲಿಂಗಸ್ವಾಮಿ, ಮೀನಾ ಮೈಸೂರು, ಹೇಮಾ ನಂದೀಶ್, ರಾಜಶೇಖರ ಕದಂಬ. ಮ.ನ, ಲತಾ ಮೋಹನ್‌ಮೊದಲಾದವರು ಇದ್ದರು.