ಗುರುಗಳನ್ನು ಸತ್ಕರಿಸುವ ಕಾರ್ಯ ಶ್ಲಾಘನೀಯ: ಶಿಕ್ಷಕ ಎಸ್‌.ಕೆ. ಘೋಡೆವಾಲೆ

| Published : Oct 30 2024, 01:42 AM IST

ಸಾರಾಂಶ

ಗುರುಗಳು ಕಲಿಸಿದ ಜ್ಞಾನ ಸಮಾಜದಲ್ಲಿ ಕಾರ್ಯರೂಪಕ್ಕೆ ಬರಬೇಕು ಎಸ್.ಎಸ್.ಎಲ್.ಸಿ ನಂತರ ದೂರಾದ ಸಹಪಾಠಿಗಳು ಮತ್ತೆ ಒಂದಡೆ ಸೇರಿ ಸಂಭ್ರಮಿಸುವ ಈ ಕ್ಷಣ ಮರೆಯಲಾಗದು

ಕನ್ನಡಪ್ರಭ ವಾರ್ತೆ ಯಮಕನಮರಡಿ

ಜ್ಞಾನಧಾರೆ ಎರೆದ ಗುರುಗಳನ್ನು ಸತ್ಕರಿಸಿ ಗೌರವಿಸುವ ಶಿಷ್ಯರ ಈ ಕಾರ್ಯ ನಿಜಕ್ಕೂ ಅವಿಸ್ಮರಣೀಯವಾದದು ಎಂದು ನಿವೃತ್ತ ಕನ್ನಡ ಶಿಕ್ಷಕ ಎಸ್‌.ಕೆ. ಘೋಡೆವಾಲೆ ಹೇಳಿದರು.ಯಮಕನಮರಡಿ ಗುರುಸಿದ್ಧ ಮಹಾಸ್ವಾಮಿಗಳ ಸಭಾಭವನದಲ್ಲಿ ಸಿ.ಇ.ಎಸ್. ಪ್ರೌಢಶಾಲೆಯ 1985ನೇ ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಗುರುವಂದನೆ ಹಾಗೂ ಸಹಪಾಠಿಗಳ ಪುನರ್‌ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿ, ಗುರುಗಳು ಕಲಿಸಿದ ಜ್ಞಾನ ಸಮಾಜದಲ್ಲಿ ಕಾರ್ಯರೂಪಕ್ಕೆ ಬರಬೇಕು ಎಸ್.ಎಸ್.ಎಲ್.ಸಿ ನಂತರ ದೂರಾದ ಸಹಪಾಠಿಗಳು ಮತ್ತೆ ಒಂದಡೆ ಸೇರಿ ಸಂಭ್ರಮಿಸುವ ಈ ಕ್ಷಣ ಮರೆಯಲಾಗದು. ಶಿಷ್ಯರು ವಿವಿಧ ಕ್ಷೇತ್ರಗಳಲ್ಲಿ ಕಾರ್ಯ ಮಾಡುತ್ತಿರುವುದು ತಂದೆ-ತಾಯಿ, ಗುರುಗಳು ಹೆಮ್ಮೆ ಪಡುವಂತಾಗಿದೆ ಎಂದರು.ನಿವೃತ್ತ ಶಿಕ್ಷಕ ಎಸ್.ಜಿ. ಕುಂಬಾರ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ಆಗುತ್ತಿದ್ದರೂ ಸಹ ಕಲಿಕೆಯ ಗುಣಮಟ್ಟ ಕುಸಿಯುತ್ತಿದೆ. ಹಳೆಯ ವಿದ್ಯಾರ್ಥಿಗಳು ತಾವು ಕಲಿತ ಸಂಸ್ಕಾರ, ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೂ ಧಾರೆ ಎರೆದು ಮಾರ್ಗದರ್ಶನ ಮಾಡಬೇಕು. ಹಿಂದಿನ ನೆನಪುಗಳ ಮೆಲಕು ಹಾಕುವ ಈ ಗುರುವಂದನೆ ಕಾರ್ಯಕ್ರಮ ನಿಜಕ್ಕೂ ಸಂತಸ ತಂದಿದೆ. ನಿವೃತ್ತ ಶಿಕ್ಷಕ ಆರ್.ಬಿ. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಹಳೆಯ ವಿದ್ಯಾರ್ಥಿಗಳಾದ ಜೆ.ವಿ. ಹನಮಂತಗಡ, ಬಾಬು ಜಿಂಡ್ರಾಳಕರ, ರಾಜು ಮಠಪತಿ, ಬಸವರಾಜ ಪಟ್ಟಣಶೆಟ್ಟಿ ಅನಿಸಿಕೆ ಹೇಳಿದರು.ನಿವೃತ್ತ ಶಿಕ್ಷಕ ಎಸ್.ಆರ್. ಶೆಟ್ಟರ, ಎಸ್.ಕೆ. ಕಬಾಡಿ, ಎಸ್.ಎನ್. ಮಮದಾಪೂರ, ಎಸ್.ಡಿ. ಕಲಶಟ್ಟಿ, ಸಿ.ಇ. ಸೊಸೈಟಿ ಅಧ್ಯಕ್ಷ ಆರ್.ಎಂ. ಹಂದಿಗುಂದ ಉಪಾಧ್ಯಕ್ಷ ವಿ.ಎಂ. ದುಗ್ಗಾಣಿ, ಮುಖ್ಯ ಶಿಕ್ಷಕ ಎಸ್.ವೈ. ಬಣ್ಣಿಗಿಡದ ಮತ್ತು ಹಳೆ ವಿದ್ಯಾರ್ಥಿಗಳು ಇದ್ದರು. ಗುರುರಾಜ ಪಾಟೀಲ ಸ್ವಾಗತಿಸಿದರು. ಎಂ.ಸಿ. ನಗಾರಿ ನಿರೂಪಿಸಿದರು.