ಸೈನಿಕರನ್ನು ಸನ್ಮಾನಿಸುವುದು ಹೆಮ್ಮೆಯ ಸಂಗತಿ: ಗಾಯಕವಾಡ

| Published : Jun 16 2024, 01:48 AM IST

ಸಾರಾಂಶ

ಬನಹಟ್ಟಿಯ ಸಿದ್ದರಾಮೇಶ್ವರ ದೇವಸ್ಥಾನದಲ್ಲಿ ಎಂ.ಎನ್. ಸ್ಪೋರ್ಟ್ಸ್ ಕ್ಲಬ್ ಬನಹಟ್ಟಿ ವತಿಯಿಂದ ಅಗ್ನಿವೀರ ಹಾಗೂ ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿ ತರಬೇತಿ ಮುಗಿಸಿಕೊಂಡು ಬಂದ ಅಭ್ಯರ್ಥಿಗಳಿಗೆ ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಬನಹಟ್ಟಿಯ ಸಿದ್ದರಾಮೇಶ್ವರ ದೇವಸ್ಥಾನದಲ್ಲಿ ಎಂ.ಎನ್. ಸ್ಪೋರ್ಟ್ಸ್ ಕ್ಲಬ್ ಬನಹಟ್ಟಿ ವತಿಯಿಂದ ಅಗ್ನಿವೀರ ಹಾಗೂ ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿ ತರಬೇತಿ ಮುಗಿಸಿಕೊಂಡು ಬಂದ ಅಭ್ಯರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು..

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಯುವ ಮುಖಂಡ ಶಿವಾನಂದ ಗಾಯಕವಾಡ ಮಾತನಾಡಿ, ದೇಶದ ರಕ್ಷಣೆಯಲ್ಲಿ ಸೈನಿಕರ ಮಾತ್ರ ಪ್ರಮುಖವಾದದ್ದು, ದೇಶ ಸೇವೆಗೆ ತಮ್ಮನ್ನು ತಾವು ಸಮರ್ಪಿಸಿಕೊಳ್ಳುವ ಸೈನಿಕರನ್ನು ಸನ್ಮಾನಿಸುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.

ಈ ಸಂದರ್ಭದಲ್ಲಿ ಸೈನಿಕರಾದ ಕಾಶಿನಾಥ ಹವಾಲ್ದಾರ, ಕಲ್ಲಪ್ಪ ಅಥಣಿ, ಅರಣ್ಯ ಇಲಾಖೆಯ ಪ್ರವೀಣ ಜನವಾಡ ಅವರನ್ನು ಸನ್ಮಾನಿಸಲಾಯಿತು.

ಚಂದ್ರಶೇಖರ ಕಾಡದೇವರ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಬಸವರಾಜ ತಳವಾರ, ಜಯವಂತ ಬನ್ನೂರ, ಮಾಲಿಂಗಪ್ಪ ಬೆಳಗಲಿ, ಶಂಕರ ಮೈತ್ರಿ, ಮುತ್ತು ನಂದೇಶ್ವರ, ಸದಾಸಿವ ಕಾನಟ್ಟಿ ಮಹಾಂತೇ ಮಾಂಗ ಇದ್ದರು.