ಸೈನಿಕರನ್ನು ಗೌರವಿಸುವುದು ನಮ್ಮ ಸೌಭಾಗ್ಯ

| Published : Jul 27 2024, 12:51 AM IST

ಸಾರಾಂಶ

ಭಾರತೀಯರು ಎಂದು ಮರೆಯದ ಅವಿಸ್ಮರಣೀಯ ದಿನಗಳಲ್ಲಿ ಜುಲೈ 26 ಕೂಡ ಬಹು ಮುಖ್ಯ ದಿನ

ಕನ್ನಡಪ್ರಭ ವಾರ್ತೆ ತುಮಕೂರು

ಭಾರತೀಯರು ಎಂದು ಮರೆಯದ ಅವಿಸ್ಮರಣೀಯ ದಿನಗಳಲ್ಲಿ ಜುಲೈ 26 ಕೂಡ ಬಹು ಮುಖ್ಯ ದಿನವಾಗಿದೆ, ಹಾಗೂ ಭಾರತೀಯ ಪ್ರತಿಯೊಬ್ಬ ಪ್ರಜೆಯ ಮನಸ್ಸಿನಲ್ಲಿ ಅಚ್ಚಳಿಯದ ಉಳಿದಿದೆ ಎಂದು ವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆಗಳ ಕಾಯ೯ದಶಿ೯ ಎನ್ ಬಿ ಪ್ರದೀಪ್ ಕುಮಾರ್ ತಿಳಿಸಿದರು.ನಗರದ ವಿದ್ಯಾನಿಧಿ ಕಾಲೇಜಿನಲ್ಲಿ ಮಾಜಿ ಸೈನಿಕರ ಗೌರವ ಸಮಪ೯ಣೆ ಕಾರ್ಯಕ್ರಮದಲ್ಲಿ ಮಾಜಿ ಸೈನಿಕರನ್ನು ಸನ್ಮಾನಿಸಿ ಮಾತನಾಡಿದರು.ದೇಶಕ್ಕಾಗಿ ಜೀವನವನ್ನು ಮುಡುಪಿಟ್ಟ ಯೋಧರನ್ನು ಸ್ಮರಿಸುವ ಹಾಗೂ ಗೌರವಿಸುವುದು ನಮ್ಮೆಲ್ಲ ಭಾರತೀಯರ ಹೆಮ್ಮೆ ಮತ್ತು ಕತ೯ವ್ಯವಾಗಿದೆ, ಅದರಂತೆ 26 ಜುಲೈ1999 ಯುದ್ಧದ ವಿಜಯೋತ್ಸವದ ನೆನಪಿಗಾಗಿ ಕಾರ್ಗಿಲ್ ವಿಜಯ್ ದಿವಸ್ ಆಚರಿಸುತ್ತಾ ಬಂದಿದ್ದೇವೆ. ಪ್ರಸ್ತುತ ದಿನಗಳಲ್ಲಿ ಹೆಣ್ಣುಮಕ್ಕಳಿಗೂ ಸೈನ್ಯದಲ್ಲಿ ಆದ್ಯತೆ ಇರುವುದು ಹೆಮ್ಮೆಯ ವಿಚಾರವಾಗಿದ್ದು ಯುವತಿಯರೂ ಈ ನಿಟ್ಟಿನಲ್ಲಿ ರಾಷ್ಟ್ರಕ್ಕೆ ತಮ್ಮದೇ ಆದ ಕೊಡುಗೆ ಕೊಡಲು ಸಿದ್ಧರಾಗಿರಿ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಮಾಜಿ ಸೈನಿಕ ರಘು ಜಯರಾಮ್ ನಾಯಕ್ ಕೊಂಡ್ಲಿ, ಅವರು ಶಿಕ್ಷಣ ಸಂಸ್ಥೆಗಳು ಕೇವಲ ಒಂದೇ ಕ್ಷೇತ್ರಕ್ಕೆ ವಿದ್ಯಾಥಿ೯ಗಳನ್ನು ಸೀಮಿತಗೊಳಿಸದೆ. ನಾನಾ ಕ್ಷೇತ್ರಗಳಲ್ಲಿಯೂ ವಿದ್ಯಾರ್ಥಿಗಳನ್ನು ಬೆಳೆಸಬೇಕೆಂದು ತಿಳಿಸಿ ಆ ಮೂಲಕ ವಿವಿಧ ಕ್ಷೇತ್ರಗಳಲ್ಲಿ ಸೇವೆಸಲ್ಲಿಸುವಂತೆ ಪ್ರೋತ್ಸಾಹಿಸಬೇಕು ಆ ನಿಟ್ಟಿನಲ್ಲಿ ಎಲ್ಲಾ ಯುವಕರು ಜಾಗೃತರಾರಗಬೇಕೆಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಮಾಜಿ, ಸೈನಿಕರಾದ,ದೇಶವಂತ್ ಕುಮಾರ್ ಸಿ, ರಾಮಚಂದ್ರ ಬಿ ಚೌಹಾಣ್, ಚಿಕ್ಕಲಿಂಗೇಗೌಡ, ರಮೇಶ , ವರದರಾಜು ಎಚ್, ದೊಡ್ಡಲಿಂಗಯ್ಯ ಹಾಗೂ ರಘು ಜಯರಾಮ ಕೊಂಡ್ಲಿ ಅವರನ್ನು ಸನ್ಮಾನಿಸಲಾಯಿತು.ಈ ಸಂದಭ೯ದಲ್ಲಿ ಮಾಜಿ ಯೋಧರಾದ ದೇಶವಂತಕುಮಾರ್ ಸಿ. ಸೇನೆಗೆ ಸೇರುವ ಆಸಕ್ತ ಯುವಕರಿಗೆ ಯುವತಿಯರಿಗೆ ತುಮಕೂರಿನಲ್ಲಿ ಉಚಿತವಾಗಿ ಪೆರಡ್ ಹಾಗೂ ಬಟಾಲಿಯನ್ ತರಬೇತಿ ನೀಡುವುದಾಗಿ ಭರವಸೆ ನೀಡಿದರು.ಕಾಯ೯ಕ್ರಮದಲ್ಲಿ ವಿದ್ಯಾವಾಹಿನಿ ಸಮೂಹ ಸಂಸ್ಥೆಗಳ ನಿರ್ದೇಶಕಿ ನಾಗಪ್ರಿಯ ಕೆ. ಜಿ, ವಿದ್ಯಾನಿಧಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಸಿದ್ದೇಶ್ವರ ಸ್ವಾಮಿ ಎಸ್ ಆರ್ ಉಪ ಪ್ರಾಂಶುಪಾಲ ವೇದಮೂತಿ೯ ಉಪಸ್ಥಿತರಿದ್ದರು. ಉಪನ್ಯಾಸಕಿ ಪೂರ್ಣಗಂಗಾ ಸ್ವಾಗತಿಸಿ, ಉಪನ್ಯಾಸಕಿ ಸಿಂಧು ವಂದಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾನಿಧಿ ಕಾಲೇಜಿನ ಉಪನ್ಯಾಸಕರು ವಿದ್ಯಾಥಿ೯ಗಳು ಹಾಗೂ ಬೋಧಕೇತರ ವರ್ಗದವರು ಉಪಸ್ಥಿತರಿದ್ದರು.