ಸಾರಾಂಶ
ಕನ್ನಡಪ್ರಭ ವಾರ್ತೆ ಬೆಟ್ಟದಪುರವಿಶ್ವ ರೈತ ದಿನಾಚರಣೆ ಅಂಗವಾಗಿ ಗ್ರಾಮದ ನಾಗರಿಕ ವೇದಿಕೆಯಿಂದ ಕುವೆಂಪು ವೃತ್ತದಲ್ಲಿ ಯುವ ರೈತರನ್ನು ಸನ್ಮಾನಿಸಲಾಯಿತು.ಯುವ ರೈತರಾದ ಚನ್ನೇಗೌಡನ ಕೊಪ್ಪಲು ಶಿವು, ಹೈನುಗಾರಿಕೆಯಲ್ಲಿ ಬೆಟ್ಟದಪುರ ಪೇಟೆ ಬೀದಿಯ ಶಿವಕುಮಾರ್ ಅವರು ಶುಂಠಿ ಹಾಗೂ ಭತ್ತದ ಬೆಳೆಯಲ್ಲಿ ಕೂರ್ಗಲ್ ಗ್ರಾಮದ ಮಂಜು ಅವರು ಹೈನುಗಾರಿಕೆಯಲ್ಲಿ, ಬೆಟ್ಟದಪುರದ ವಿಶೇಷಚೇತನ ರೈತ ರಾಮು ಅವರು ಬಾಳೆ ಮತ್ತು ಕೆಸುವು ಬೆಳೆದು ಪ್ರಗತಿಪರ ರೈತರಾಗಿದ್ದು ಇವರನ್ನು ಸನ್ಮಾನಿಸಲಾಯಿತು.ಪಿಎಸ್.ಐ ಶಿವಶಂಕರ ಮಾತನಾಡಿ, ಎಲ್ಲ ತಂತ್ರಜ್ಞಾನಗಳು ಬೆಳೆದರು ಮನುಷ್ಯ ಮಾತ್ರ ತಿನ್ನುವ ಆಹಾರವನ್ನು ಯಾವುದೇ ತಂತ್ರಜ್ಞಾನದಿಂದ ಬೆಳೆಯಲು ಸಾಧ್ಯವಿಲ್ಲ, ಮನುಷ್ಯನಿಗೆ ಆಹಾರ ಅತಿಮುಖ್ಯವಾದ ಒಂದು ವಸ್ತು, ಇದನ್ನು ರೈತ ಬಿತ್ತಿ ಬೆಳೆಯಲೇಬೇಕೆ ಹೊರತು ತಂತ್ರಜ್ಞಾನದಿಂದ ಬೆಳೆಯಲು ಸಾಧ್ಯವಿಲ್ಲ, ಆದ್ದರಿಂದ ಯುವ ಜನತೆ ಕೃಷಿಯತ್ತ ಹೆಚ್ಚು ಒಲವು ನೀಡಬೇಕೆಂದು ತಿಳಿಸಿದರು.ನಿವೃತ್ತ ಶಿಕ್ಷಕ ಸಣ್ಣಸ್ವಾಮಿಗೌಡ, ಪ್ರಗತಿಪರ ರೈತ ಕೂರ್ಗಲ್ ಶಿವಕುಮಾರ ಸ್ವಾಮಿ, ಅಲ್ಪ ನಾಯಕನಹಳ್ಳಿ ಶಿವಣ್ಣ, ಪತ್ರಕರ್ತ ಶಿವದೇವ್, ನಾರಾಯಣಗೌಡ, ಗೊರಳ್ಳಿ ಗ್ರಾಮದ ರಕ್ಷಿತ್, ವಸಂತ, ಶ್ರೀನಿವಾಸ್, ಮಂಜುನಾಥ್, ರಾಜೇಂದ್ರ, ಮಹದೇವಪ್ಪ ಇದ್ದರು.