ವಿವಿಧ ಕ್ಷೇತ್ರದ 17 ಸಾಧಕರಿಗೆ ಪ್ರಶಸ್ತಿ ಪ್ರದಾನ--

| Published : Aug 12 2024, 12:46 AM IST

ಸಾರಾಂಶ

ಪ್ರತಿಯೊಬ್ಬರು ಮಾನವ ಹಕ್ಕುಗಳನ್ನು ಕಾಪಾಡಬೇಕು

- ಮಾನವಹಕ್ಕುಗಳು ಮತ್ತು ಭ್ರಷ್ಟಾಚಾರ ನಿಗ್ರಹ ವೇದಿಕೆಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮಫೋಟೋ 11 ಎಂವೈಎಸ್ 7, 8ಮೈಸೂರಿನ ವಿಶ್ವೇಶ್ವರನಗರದ ಬಿಎಐ ಸಭಾಂಗಣದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಮಾನವಹಕ್ಕುಗಳು ಮತ್ತು ಭ್ರಷ್ಟಾಚಾರ ನಿಗ್ರಹ ವೇದಿಕೆಯಿಂದ ಪ್ರಶಸ್ತಿ ಪ್ರದಾನ ಮಾಡಲಾಯಿತು. ವೇದಿಕೆಯ ರಾಜ್ಯಾಧ್ಯಕ್ಷ ಸಿ.ವಿ. ಶ್ರೀನಾಥ್ ಶೆಟ್ಟಿ ಮತ್ತು ಪದಾಧಿಕಾರಿಗಳು ಇದ್ದಾರೆ.ಕನ್ನಡಪ್ರಭ ವಾರ್ತೆ ಮೈಸೂರು

ಫೋರಂ ಫಾರ್ ಹ್ಯೂಮನ್ ರೈಟ್ಸ್ಮತ್ತು ಆಂಟಿ ಕರ್ಪ್ಷನ್ ಸಂಸ್ಥೆಯು ವಿಶ್ವೇಶ್ವರನಗರದ ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಸಂಸ್ಥೆಯ ಸಭಾಂಗಣದಲ್ಲಿ ಭಾನುವಾರ ಸಂಜೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ 17 ಮಂದಿ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ವೈದ್ಯಕೀಯ ಕ್ಷೇತ್ರದ ಡಾ. ರಘುನಂದನಾ ಶೇಖರಪ್ಪ, ಡಾ. ಕೃತಿಕಾ ದೇವಿ, ಡಾ. ವಿದ್ಯಾಸಾಗರ, ಡಾ. ಸುಗಂಧಿ ಉಡುಪ ಅವರಿಗೆ ವೈದ್ಯರತ್ನ ಪ್ರಶಸ್ತಿ, ಡಾ.ಡಿ.ಎಸ್. ಭಾರತೀಶ್ ಅವರಿಗೆ ಯೋಗರತ್ನ, ಮಮತಾ ಪ್ರಭು ಅವರಿಗೆ ಶಿಕ್ಷಣ ರತ್ನ, ಡಾ. ಅಕ್ಕಯ್ ಪದ್ಮಶಾಲಿ ಅವರಿಗೆ ಸಮಾಜ ಸೇವಾರತ್ನ, ಸ್ವರ್ಣಲತಾ ಶಾಸ್ತ್ರಿ ಅವರಿಗೆ ನಾಟ್ಯರತ್ನ, ಅಂಶಿ ಪ್ರಸನ್ನಕುಮಾರ್ ಅವರಿಗೆ ಮಾಧ್ಯಮ ರತ್ನ, ಅಶೋಕ್ ಗೋವಿಂದೇಗೌಡ, ವೀಣಾ ಅಶೋಕ್, ಡಾ. ಧರ್ಮಪ್ರಸಾದ್, ಸಿ.ಎನ್. ದಾನಿ ಅವರಿಗೆ ಸಮಾಜ ಸೇವಾರತ್ನ, ಡಾ. ಚಂದ್ರಶೇಖರ್ ಅವರಿಗೆ ಉದ್ಯೋಗ ರತ್ನ, ಡಾ. ಶೈಲೇಶ್ ಅರಸ್ ಅವರಿಗೆ ಶಿಕ್ಷಣ ರತ್ನ, ಸಹನಾಗೌಡ ಅವರಿಗೆ ಯುವ ಚೇತನ ಮತ್ತು ಕಿರಣ್ಗೌಡ ಅವರಿಗೆ ಕೃಷಿ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಸಂಸ್ಥೆಯ ರಾಜ್ಯಾಧ್ಯಕ್ಷ ಸಿ.ವಿ. ಶ್ರೀನಾಥ್ ಶೆಟ್ಟಿ ಮಾತನಾಡಿ, ಪ್ರತಿಯೊಬ್ಬರು ಮಾನವ ಹಕ್ಕುಗಳನ್ನು ಕಾಪಾಡಬೇಕು ಎಂದು ಮನವಿ ಮಾಡಿದರು.

ಸಮೃತ, ಅಮೃತಾ ಅವರು ವೇದಿಕೆಯ ಕಾರ್ಯಕ್ರಮಗಳನ್ನು ಪರಿಚಯಿಸಿದರು. ಹೊಸದಾಗಿ ವೇದಿಕೆ ಸೇರ್ಪಡೆಯಾದವರನ್ನು ಸ್ವಾಗತಿಸಲಾಯಿತು. ಉಪಾಧ್ಯಕ್ಷ ಆರ್.ಪಿ. ಪ್ರವೀಣ್ ಕುಮಾರ್, ಪದಾಧಿಕಾರಿಗಳಾದ ವಿ. ಪ್ರಶಾಂತ್, ಆರ್.ಜೆ. ಅಮೃತಾ ಪ್ರವೀಣ್, ಕವಿತಾ ಶೈಲೇಶ್, ಡಿ. ನರಸಿಂಹ, ಸೋಹನ್ಕುಮಾರ್, ವೆಂಕಟೇಶಮೂರ್ತಿ, ಹರ್ಷಿತಾ, ಭೋಜರಾಜ್, ಕೆ.ಎನ್. ಅರುಣ, ಎಂ.ಎಸ್. ಆದಿತ್ಯ, ನಿರಂಜನಸ್ವಾಮಿ, ಎಚ್.ಯು. ಭೂಮಿಕಾ ಮೊದಲಾದವರು ಇದ್ದರು.ಚಂದ್ರಕಲಾ ಪ್ರಾರ್ಥಿಸಿದರು. ಭೂಮಿಕಾ ಹಾಗೂ ಆದರ್ಶ ನಿರೂಪಿಸಿದರು. ---ಬಾಕ್ಸ್. ಗಮನ ಸೆಳೆದ ಸಾಂಸ್ಕೃತಿಕ ಕಾರ್ಯಕ್ರಮಅಪಘಾತ ನಡೆದ ಸಂದರ್ಭದಲ್ಲಿ ಫೇಸ್ ಬುಕ್, ಇನ್ ಸ್ಟಾಗ್ರಾಂ ಮತ್ತಿತರರ ಸಾಮಾಜಿಕ ಜಾಲತಾಣಗಳಲ್ಲಿ ಲೈವ್ ಮಾಡುವ ಬದಲು ಮೊದಲು ಪ್ರಾಣ ಉಳಿಸುವ ಪ್ರಯತ್ನ ಮಾಡಬೇಕು. ನೆರವಾದರೇ ಪೊಲೀಸರು, ನ್ಯಾಯಾಲಯಕ್ಕೆ ಅಲೆಯಬೇಕಾಗುತ್ತದೆ ಎಂಬ ಮನೋಭಾವನೆ ಬಿಡಬೇಕು ಎಂಬುದನ್ನು ನಾಟಕದ ಮೂಲಕ ಪ್ರದರ್ಶಿಸಲಾಯಿತು.ಅದೇ ರೀತಿ ಕಾನೂನು ಪಾಲಿಸಿದರೆ ಪೊಲೀಸರಿಗೆ ಹೆದರಬೇಕಾಗಿಲ್ಲ. ಎಲ್ಲಾ ದಾಖಲಾತಿಗಳನ್ನು ಇಟ್ಟುಕೊಂಡು ವಾಹನ ಚಾಲನೆ ಮಾಡಬೇಕು. ಇಲ್ಲದಿದ್ದರೆ ಅವರು ಲಂಚ ಕೇಳುತ್ತಾರೆ, ಜನರು ಲಂಚ ಕೊಡುತ್ತಾರೆ. ಲಂಚ ಕೇಳುವುದು ಮತ್ತು ಕೊಋಡುವುದು ಅಪರಾಧ ಎಂಬುದನ್ನು ಕೂಡ ಸ್ಕಿಟ್ ಮೂಲಕ ಮನವರಿಕೆ ಮಾಡಿಕೊಡಲಾಯಿತು.