ನಷ್ಟದ ಹಾದಿಯಲ್ಲಿ ಹಾಪ್‌ ಕಾಮ್ಸ್

| Published : Sep 21 2025, 02:00 AM IST

ಸಾರಾಂಶ

ತಾಲೂಕು ತೋಟದ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಂಘ (ಹಾಪ್‌ ಕಾಮ್ಸ್‌) ಲಾಭದಲ್ಲಿಲ್ಲ. ಸಂಘಕ್ಕೆ ಆದಾಯ ತರಲು ಸರ್ಕಾರ ಹಾಗು ಶಾಸಕರ ಅನುದಾನದ ನಿರೀಕ್ಷೆಯಲ್ಲಿದ್ದೇವೆ ಎಂದು ಹಾಪ್‌ ಕಾಮ್ಸ್‌ ಅಧ್ಯಕ್ಷ ರಾಘವಾಪುರ ನಾಗೇಶ್‌ ಹೇಳಿದರು.

ಕನ್ನಡಪ್ರಭ ವಾರ್ತೆ, ಗುಂಡ್ಲುಪೇಟೆ

ತಾಲೂಕು ತೋಟದ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಂಘ (ಹಾಪ್‌ ಕಾಮ್ಸ್‌) ಲಾಭದಲ್ಲಿಲ್ಲ. ಸಂಘಕ್ಕೆ ಆದಾಯ ತರಲು ಸರ್ಕಾರ ಹಾಗು ಶಾಸಕರ ಅನುದಾನದ ನಿರೀಕ್ಷೆಯಲ್ಲಿದ್ದೇವೆ ಎಂದು ಹಾಪ್‌ ಕಾಮ್ಸ್‌ ಅಧ್ಯಕ್ಷ ರಾಘವಾಪುರ ನಾಗೇಶ್‌ ಹೇಳಿದರು.

ಪಟ್ಟಣದ ತಾಲೂಕು ತೋಟದ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರ ಸಂಘ(ಹಾಪ್‌ ಕಾಮ್ಸ್‌)ದ ೨೦೨೪-೨೫ ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘವು ನಷ್ಟದ ಹಾದಿಯಲ್ಲಿದೆ. ಸಂಘದ ಪ್ರಗತಿಗೆ ಸಂಘದಲ್ಲಿ ನಿರೀಕ್ಷೆಗೆ ತಕ್ಕಂತೆ ಆದಾಯ ಬರುತ್ತಿಲ್ಲ. ಸಂಘದ ಆದಾಯ ನೌಕರರ ಸಂಬಳಕ್ಕೆ ಸಾಕಾಗುತ್ತಿದೆ. ಹಾಗಾಗಿ ಮಡಹಳ್ಳಿ ರಸ್ತೆಯಲ್ಲಿ ಹಾಪ್‌ ಕಾಮ್ಸ್‌ಗೆ ಸೇರಿದ ಜಾಗದಲ್ಲಿ ವಾಣಿಜ್ಯ ಮಳಿಗೆ ಕಟ್ಟಿದರೆ ಸ್ವಲ್ಪ ಆದಾಯ ಬರಲಿದೆ ಎಂದರು.

ಹಾಪ್‌ ಕಾಮ್ಸ್‌ ಆಡಳಿತ ಮಂಡಳಿ ಸಂಘಕ್ಕೆ ಲಾಭ ತರುವ ಕೆಲಸ ಚರ್ಚಿಸಿ ಮುಖ್ಯಮಂತ್ರಿ,ಸಹಕಾರ ಸಚಿವರು ಹಾಗು ಸ್ಥಳೀಯ ಶಾಸಕರನ್ನು ಭೇಟಿ ಮಾಡಿ ಅನುದಾನ ನೀಡಬೇಕು ಎಂದು ಮನವಿ ಮಾಡಲಾಗುವುದು ಎಂದರು. ಸಂಘದ ಪ್ರಗತಿಗೆ ಹಾಗು ಸಂಘದಲ್ಲಿ ಮುಂದೆ ಮಾಡಬೇಕಾದ ಕೆಲಸಗಳ ಬಗ್ಗೆ ಹಲವು ಸದಸ್ಯರು ಮಾತನಾಡಿ ಸಲಹೆ,ಸೂಚನೆ ನೀಡಿದರು. ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಚಿಕ್ಕರಾಜು,ಸಂಘದ ಮಾಜಿ ಅಧ್ಯಕ್ಷರಾದ ನೀಲಕಂಠಪ್ಪ,ಕೆ.ಬಸವಣ್ಣ,ಆಲತ್ತೂರು ಬೋರೇಗೌಡ,ಎಸ್‌ಆರ್‌ಎಸ್‌ ರಾಜು,ನಿರ್ದೇಶಕರಾದ ಮಲ್ಲಿಕಾರ್ಜುನಪ್ಪ,ಶಿವಸ್ವಾಮಿ,ಸ್ವಾಮಿ,ಶಿವನಂಜಪ್ಪ,ಸಂಘದ ಸಿಇಒ ಎಂ.ಬಿ.ಶ್ರೀಕಂಠಪ್ಪ ಸೇರಿದಂತೆ ಸಂಘದ ನಿರ್ದೇಶಕರು,ನೌಕರರು ಹಾಗು ಸದಸ್ಯರು ಇದ್ದರು.