ಜಿ.ಟಿ.ಸಮೂಹ ನಿರುದ್ಯೋಗಿಗಳ ಪಾಲಿನ ಆಶಾಕಿರಣ: ಸಚಿವ ಸತೀಶ ಜಾರಕಿಹೊಳಿ

| Published : Jul 15 2024, 01:54 AM IST

ಸಾರಾಂಶ

ಬೋರಗಾಂವ ಕೈಗಾರಿಕಾ ವಸಾಹತು ಪ್ರದೇಶದಲ್ಲಿ ನೂತನ ಜಿ.ಟಿ. ಟೆಕ್ಸ್‌ಟೈಲ್ಸ್ (ಜವಳಿ) ಉತ್ಪಾದನಾ ಘಟಕವನ್ನು ಸಚಿವ ಸತೀಶ ಜಾರಕಿಹೊಳಿ ಅವರು ಭಾನುವಾರ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಹುಕ್ಕೇರಿ

ಜಿಲ್ಲೆಯ ವಿವಿಧ ವಲಯಗಳಲ್ಲಿ ಸೇವೆ ಸಲ್ಲಿಸುತ್ತಿರುವ ಜಿ.ಟಿ. ಸಮೂಹ ನಿರುದ್ಯೋಗಿಗಳ ಪಾಲಿನ ಆಶಾಕಿರಣವಾಗಿದೆ ಎಂದು ಲೋಕೋಪಯೋಗಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅಭಿಪ್ರಾಯಪಟ್ಟರು.

ನಿಪ್ಪಾಣಿ ತಾಲೂಕಿನ ಬೋರಗಾಂವ ಕೈಗಾರಿಕಾ ವಸಾಹತು ಪ್ರದೇಶದಲ್ಲಿ ನೂತನವಾಗಿ ನಿರ್ಮಿಸಿರುವ ಜಿ.ಟಿ. ಟೆಕ್ಸ್‌ಟೈಲ್ಸ್ (ಜವಳಿ) ಉತ್ಪಾದನಾ ಘಟಕವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಸಣ್ಣ, ಅತಿ ಸಣ್ಣ ಕೈಗಾರಿಕೆಗಳನ್ನು ಉತ್ತೇಜಿಸಿ ಉದ್ಯೋಗ ಸೃಜಿಸುವ ಗುರಿ ಹೊಂದಿದೆ. ವೃದ್ಧಾಶ್ರಮ, ಸಾಂತ್ವನ ಕೇಂದ್ರ, ಕೋಳಿ ಸಾಕಾಣಿಕೆ ಮತ್ತು ತರಬೇತಿ, ವಾಣಿಜ್ಯ ಸಂಸ್ಥೆ ಸೇರಿದಂತೆ ಹಲವು ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ಮೂಲಕ ಯಶಸ್ವಿಯಾಗಿರುವ ಜಿ.ಟಿ. ಸಮೂಹ ಇದೀಗ ತನ್ನ ಕಾರ್ಯಕ್ಷೇತ್ರವನ್ನು ಇದೀಗ ಜವಳಿ ಉದ್ಯಮಕ್ಕೂ ವಿಸ್ತರಿಸಿಕೊಂಡಿದೆ. ಇದರಿಂದ ಅನೇಕ ನಿರುದ್ಯೋಗಿಗಳಿಗೆ ಸ್ಥಳೀಯವಾಗಿಯೇ ಉದ್ಯೋಗಾವಕಾಶ ಕಲ್ಪಿಸಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ರಾಜ್ಯದ ಗಡಿಭಾಗದಲ್ಲಿ ಕನ್ನಡಿಗರು ನೆರೆಯ ಮಹಾರಾಷ್ಟ್ರಕ್ಕೆ ಉದ್ಯೋಗ ಅರಸಿ ಗುಳೆ ಹೋಗುವುದನ್ನು ತಡೆಯುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಇಂಥ ಘಟಕಗಳಿಗೆ ಉತ್ತೇಜನ ನೀಡುತ್ತಿದೆ. ಅದರಲ್ಲೂ ಎಸ್‌ಸಿ, ಎಸ್‌ಟಿ, ಹಿಂದುಳಿದ ವರ್ಗ ಮತ್ತು ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯದ ಉದ್ದಿಮೆದಾರರನ್ನು ಪ್ರೋತ್ಸಾಹಿಸಲು ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದು, ಅವುಗಳ ಸದುಪಯೋಗ ಮಾಡಿಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದು ಕಿವಿಮಾತು ಹೇಳಿದರು.

ಜಯಸಿಂಗಪುರ ಬುದ್ಧವಿಹಾರದ ಭಂತೇಜಿ ಯಶಕಶ್ಯಪ್ ಮಹಾಥೇರೊ, ಯರನಾಳ ಗುರುಬ್ರಹ್ಮಾನಂದ ಸ್ವಾಮೀಜಿ, ಯಮಕನಮರಡಿ ಸಿದ್ಧಬಸವ ಸ್ವಾಮೀಜಿ, ಸುಲ್ತಾನಪುರ ವೇದಮೂರ್ತಿ ಶಿವಾನಂದ ಹಿರೇಮಠ ಸಾನಿಧ್ಯ ವಹಿಸಿದ್ದರು.

ಶಾಸಕರಾದ ಪ್ರಸಾದ ಅಬ್ಬಯ್ಯ, ನಿಖಿಲ ಕತ್ತಿ, ಉದ್ಯಮಿ ಸುರೇಶ ತಳವಾರ, ಉತ್ತಮ ಪಾಟೀಲ, ಮುಖಂಡರಾದ ಮಹಾವೀರ ಮೋಹಿತೆ, ಲಕ್ಷ್ಮಣರಾವ ಚಿಂಗಳೆ, ಸುಭಾಶ ನಾಟಿಕಾರ, ಮಲ್ಲೇಶ ಚೌಗಲೆ, ಉದಯ ಹುಕ್ಕೇರಿ, ಬಸವರಾಜ ಕೋಳಿ, ಮಲ್ಲಿಕಾರ್ಜುನ ರಾಶಿಂಗೆ, ಅಕ್ಷಯ ವೀರಮುಖ, ಶ್ರೀಶೈಲ ಮಠಪತಿ, ಅಪ್ಪಣ್ಣಾ ಖಾತೇದಾರ, ಯಲ್ಲಪ್ಪ ಡಪರಿ, ಬಸವರಾಜ ಖಡಕಭಾವಿ, ಗುರಪ್ಪ ತಳವಾರ, ನಿರ್ವಾಣಿ ಸನದಿ, ಶಂಕರ ತಿಪ್ಪನಾಯಿಕ, ಮುತ್ತು ಕಾಂಬಳೆ, ಶಿವು ಕಣಗಲಿ, ರಾಜೇಂದ್ರ ಮೋಶಿ, ಶಿವಾನಂದ ಮರಿನಾಯಿಕ, ಬಿ.ಕೆ.ಸದಾಶಿವ, ಮಯೂರ ತಳವಾರ, ಕಾಶಪ್ಪಾ ಹರಿಜನ, ಕುಮಾರ ತಳವಾರ, ದೀಪಕ ವೀರಮುಖ, ಮಾರುತಿ ತಳವಾರ ಮತ್ತಿತರರು ಉಪಸ್ಥಿತರಿದ್ದರು. ಸಿದ್ದಪ್ಪ ತಳವಾರ ಸ್ವಾಗತಿಸಿದರು. ಬಸವರಾಜ ತಳವಾರ ನಿರೂಪಿಸಿದರು. ರಮೇಶ ತಳವಾರ ವಂದಿಸಿದರು.