ಹೊಸಬೆಳಕು ಸಂಸ್ಥೆಯ ಎರಡನೇ ಯೋಜನೆ ವಿನೂತನ ಕಟ್ಟಡ ಕುಟೀರ ಇದರ ಲೋಕಾರ್ಪಣೆಗೊಂಡಿದ್ದು, ಅದರಲ್ಲಿ ಅಂತಾರಾಷ್ಟ್ರೀಯ ಕಲಾವಿದ ವೆಂಕಿ ಪಲಿಮಾರ್ ಇವರ ಕೈಚಳಕದಲ್ಲಿ ಮೂಡಿಬಂದಿರುವ ಸಮಾಜದಲ್ಲಿ ಜಾಗೃತಿ ಮೂಡಿಸುವಂತಹ ಮಣ್ಣಿನ ಕಲಾಕೃತಿಗಳು ಗಮನ ಸಳೆಯುತ್ತಿವೆ.
ಉಡುಪಿ: ಇಲ್ಲಿನ ಹಿರಿಯರ ಆಶ್ರಯತಾಣ ಹೊಸಬೆಳಕು ಸಂಸ್ಥೆಯ ಎರಡನೇ ಯೋಜನೆ ವಿನೂತನ ಕಟ್ಟಡ ಕುಟೀರ ಇದರ ಲೋಕಾರ್ಪಣೆಗೊಂಡಿದ್ದು, ಅದರಲ್ಲಿ ಅಂತಾರಾಷ್ಟ್ರೀಯ ಕಲಾವಿದ ವೆಂಕಿ ಪಲಿಮಾರ್ ಇವರ ಕೈಚಳಕದಲ್ಲಿ ಮೂಡಿಬಂದಿರುವ ಸಮಾಜದಲ್ಲಿ ಜಾಗೃತಿ ಮೂಡಿಸುವಂತಹ ಮಣ್ಣಿನ ಕಲಾಕೃತಿಗಳು ಗಮನ ಸಳೆಯುತ್ತಿವೆ.
ಕುಟೀರವನ್ನು ಉದ್ಯಮಿ ಬೋಳ ಪ್ರಶಾಂತ್ ಕಾಮತ್ ಅವರು ಉದ್ಘಾಟಿಸಿ, ಕುಟೀರದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿ, ಮಕ್ಕಳಲ್ಲಿ ಸಾಮಾಜಿಕ ಹಾಗೂ ಪ್ರಕೃತಿಯ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ಶ್ಲಾಘನೀಯ ಎಂದರು. ಸಮಾಜದಲ್ಲಿ ಒಂದು ಸಣ್ಣ ಬದಲಾವಣೆ ತರುವ ಸಂಸ್ಥೆಯ ಪ್ರಯತ್ನಕ್ಕೆ ಆಗಮಿಸಿದ್ದ ಎಲ್ಲಾ ಅತಿಥಿಗಳು ಶುಭಹಾರೈಸಿದರು.ಕಾರ್ಯಕ್ರಮದಲ್ಲಿ ಹೊಸಬೆಳಕು ಸಂಸ್ಥೆಯ ಸಂಸ್ಥಾಪಕಿ ತನುಲಾ ಅವರು ಸಂಸ್ಥೆಯು ಬೆಳೆದು ಬಂದ ಬಗ್ಗೆ ಹಾಗೂ ಕುಟೀರದ ವೈಶಿಷ್ಟ್ಯವನ್ನು ತಿಳಿಸಿಕೊಟ್ಟರು. ಬೈಲೂರು ಲಯನ್ಸ್ ಕ್ಲಬ್ ಅಧ್ಯಕ್ಷ ಪ್ರಶಾಂತ್ ಶೆಟ್ಟಿ, ಕ್ರಿಯೇಟಿವ್ ಕಾಲೇಜಿನ ಸ್ಥಾಪಕ ಗಣಪತಿ ಭಟ್, ಮುಂಬೈ ಉದ್ಯಮಿ ವಿಕ್ರಮ್ ಹೆಗ್ಡೆ, ಪ್ರಮುಖರಾದ ಡಾ. ಶಶಿಕಿರಣ್ ಆಚಾರ್, ಜಗದೀಶ್ ತೆಂಡೂಲ್ಕರ್, ಬಲರಾಮ ಭಟ್, ಶ್ರೀನಾಥ್ ಮಣಿಪಾಲ, ಯತೀಶ್ ಉಚ್ಚಿಲ ಇನ್ನಿತರರು ಉಪಸ್ಥಿತರಿದ್ದರು. ಟ್ರಸ್ಟಿ ತನಿಕ ಕಾರ್ಯಕ್ರಮ ನಿರೂಪಿಸಿದರು, ಗೌರೀಶ್ ವಂದಿಸಿದರು.