ಸಾರಾಂಶ
ದೊಡ್ಡಬಳ್ಳಾಪುರ: ತಾಲೂಕಿನ ಉಜ್ಜನಿ ಹೊಸಹಳ್ಳಿಯ ಇತಿಹಾಸ ಪ್ರಸಿದ್ದ ಶ್ರೀಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲಿ ಶನಿವಾರ ಬ್ರಹ್ಮರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.
ದೊಡ್ಡಬಳ್ಳಾಪುರ: ತಾಲೂಕಿನ ಉಜ್ಜನಿ ಹೊಸಹಳ್ಳಿಯ ಇತಿಹಾಸ ಪ್ರಸಿದ್ದ ಶ್ರೀಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲಿ ಶನಿವಾರ ಬ್ರಹ್ಮರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.
ಬ್ರಹ್ಮರಥೋತ್ಸವದ ಪ್ರಯುಕ್ತ ದೇವಾಲಯದಲ್ಲಿ ಅಭಿಷೇಕ, ಅರ್ಚನೆ, ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಮಧ್ಯಾಹ್ನ 2.30ಕ್ಕೆ ಮಂತ್ರ ಘೋಷಗಳೊಂದಿಗೆ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ತೇರಿಗೆ ಬಾಳೆ ಹಣ್ಣು, ದವನ ಎಸೆದು ಭಕ್ತಾದಿಗಳು ಹರಕೆ ಸಮರ್ಪಿಸಿದರು.ರಥವನ್ನು ಗ್ರಾಮದ ಮುಖ್ಯ ಬೀದಿಯಿಂದ ಗೊಡ್ಡರಾಯಿಕಲ್ಲಿನವರೆಗೆ ಎಳೆಯಲಾಯಿತು. ರಥೋತ್ಸವದ ಅಂಗವಾಗಿ ರಥ ಹಾಗೂ ಗರ್ಭಗುಡಿಯಲ್ಲಿನ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ವಿವಿಧ ಸಮುದಾಯದ ವತಿಯಿಂದ ಬ್ರಹ್ಮರಥೊತ್ಸವಕ್ಕೆ ಬರುವ ಭಕ್ತಾದಿಗಳಿಗೆ ಪಾನಕ, ಮಜ್ಜಿಗೆ, ಹೆಸರುಬೇಳೆ ಹಾಗೂ ಪ್ರಸಾದ ವಿತರಿಸಲು ರಸ್ತೆ ಬದಿಗಳಲ್ಲಿ ಶಾಮಿಯಾನ, ಟೆಂಟ್ ಮತ್ತು ಅರವಂಟಿಕೆಗಳ ವ್ಯವಸ್ಥೆ ಮಾಡಿದ್ದರು.
ಶ್ರೀ ಅಂಬಾ ಭವಾನಿ ಮರಾರ ಸಂಘದಿಂದ ಆಪರೇಷನ್ ಸಿಂದೂರ ಕಾರ್ಯಾಚರಣೆಯಲ್ಲಿ ಹುತಾತ್ಮರಾದಂತಹ ಭಾರತೀಯ ಯೋಧರ ಜ್ಞಾಪಕಾರ್ಥ ಅನ್ನಸಂತರ್ಪಣೆ ಆಯೋಜಿಸಲಾಗಿತ್ತು.ಬ್ರಹ್ಮರಥೋತ್ಸವದ ಅಂಗವಾಗಿ ಮೇ 19ರವರೆಗೆ ವಿವಿಧ ಕಾರ್ಯಕ್ರಮಗಳು ಆಯೋಜನೆಗೊಂಡಿವೆ. ಶನಿವಾರ ಸಂಜೆ ಗುಂಡಮ್ಮ ಕಥಾ ಅಥವಾ ಸಾಸಲು ಚಿನ್ನಮ್ಮ ಕಥಾ ನಾಟಕ ಪ್ರದರ್ಶನ ಆಯೋಜಿಸಲಾಗಿತ್ತು.
17ಕೆಡಿಬಿಪಿ5- ದೊಡ್ಡಬಳ್ಳಾಪುರ ತಾಲೂಕಿನ ಹೊಸಹಳ್ಳಿಯಲ್ಲಿ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಬ್ರಹ್ಮರಥೋತ್ಸವ ಸಂಭ್ರಮದಿಂದ ನಡೆಯಿತು.