ಹೊಸಕೋಟೆ ನಗರಸಭೆಗೆ ಗ್ರೇಡ್ 1 ಮಾನ್ಯತೆ ನೀಡಿ

| Published : Oct 10 2025, 01:00 AM IST

ಸಾರಾಂಶ

ಹೊಸಕೋಟೆ: ಬೆಂಗಳೂರು ನಗರಕ್ಕೆ ಹೊಂದಿಕೊಂಡಿರುವ ಹೊಸಕೋಟೆ ನಗರಸಭೆ ಕ್ಷೀಪ್ರಗತಿಯಲ್ಲಿ ಬೆಳೆಯುತ್ತಿದ್ದು ಗ್ರೇಡ್-1 ನಗರಸಭೆಯನ್ನಾಗಿ ಮಾಡಿ ಮಾನ್ಯತೆ ನೀಡಬೇಕು ಎಂದು ಶಾಸಕ ಶರತ್ ಬಚ್ಚೇಗೌಡ ಪೌರಾಡಳಿತ ಸಚಿವ ರಹಿಂ ಖಾನ್ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.

ರಾಜ್ಯ ಪೌರಾಡಳಿತ ಹಾಗೂ ಹಜ್ ಸಚಿವರಾದ ಶ್ರೀ ರಹೀಂ ಖಾನ್‌ ಅವರನ್ನುಭೇಟಿ ಮಾಡಿ, ಹೊಸಕೋಟೆಗೆ ಹೆಚ್ಚಿನ ಸರ್ಕಾರಿ ಸೌಲಭ್ಯಗಳು ದೊರೆಯಲು ಅನುಕೂಲವಾಗುವಂತೆ ಗ್ರೇಡ್-೧ ನಗರಸಭೆಯ ಮಾನ್ಯತೆ ನೀಡಬೇಕು. ಅಲ್ಲದೆ ಹೊಸಕೋಟೆ ಬೆಂಗಳೂರು ನಗರಕ್ಕೆ ಅತ್ಯಂತ ಸಮೀಪದಲ್ಲಿದ್ದು, ಆಧುನಿಕ ತಂತ್ರಜ್ಞಾನ ಮತ್ತು ಕೃಷಿಗೆ ಸಂಬಂಧಿಸಿದ ವ್ಯಾಪಾರ-ವಹಿವಾಟುಗಳಿಗೆ ಸೂಕ್ತ ಸ್ಥಳವಾಗಿದೆ. ಬೆಂಗಳೂರಿಗೆ ಹೊಸಕೋಟೆ ಹೆಬ್ಬಾಗಿಲಿನಂತಿದ್ದು, ಕೋಲಾರ, ಚಿಂತಾಮಣಿ, ಮಾಲೂರು ಸೇರಿದಂತೆ ತಮಿಳುನಾಡು ಹಾಗೂ ಆಂಧ್ರಪ್ರದೇಶಗಳ ಪ್ರಮುಖ ಶ್ರೀ ಕ್ಷೇತ್ರಗಳಿಗೆ ತೆರಳಲು ಹೊಸಕೋಟೆ ಸಂಪರ್ಕ ರಸ್ತೆಯಾಗಿದೆ. ಜಿಲ್ಲೆಯ ಎಲ್ಲ ತಾಲೂಕುಗಳಿಗೆ ಕೂಡ ಹೊಸಕೋಟೆ ಮಾರ್ಗವಾಗಿ ಹಾದು ಹೋಗಬೇಕಿದೆ. ಈರೆಲ್ಲಾ ಅಂಶಗಳನ್ನು ಪರಿಗಣಿಸಿ ನಗರಸಭೆಗೆ ಮೇಲ್ದರ್ಜೆಯ ಸ್ಥಾನಮಾನ ನೀಡಬೇಕೆಂದು ಸಚಿವ ರಹಿಂಖಾನ್ ಅವರಿಗೆ ಶಾಸಕ ಶರತ್ ಬಚ್ಚೇಗೌಡ ಮನದಟ್ಟು ಮಾಡಿಕೊಟ್ಟಿದ್ದಾರೆ.

ಫೋಟೋ: 9 ಹೆಚ್‌ಎಸ್‌ಕೆ 1

ಹೊಸಕೋಟೆ ನಗರಸಭೆಗೆ ಗ್ರೇಡ್-1 ಮೇಲ್ದರ್ಜೆಗೇರಿಸಿ ಮಾನ್ಯತೆ ನೀಡಬೇಕೆಂದು ಶಾಸಕ ಶರತ್ ಬಚ್ಚೇಗೌಡ ಪೌರಾಡಳಿತ ಸಚಿವ ರಹೀಂ ಖಾನ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.