ಹೊಸಕೋಟೆ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರ ನೇಮಕ

| Published : Mar 20 2025, 01:15 AM IST

ಹೊಸಕೋಟೆ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರ ನೇಮಕ
Share this Article
  • FB
  • TW
  • Linkdin
  • Email

ಸಾರಾಂಶ

ಹೊಸಕೋಟೆ: ನಗರಸಭೆಗೆ ನೂತನ ಸ್ಥಾಯಿ ಸಮಿತಿ ಅಧ್ಯಕ್ಷರನ್ನಾಗಿ ಕೆ.ದೇವರಾಜ್‌ರನ್ನು ನೇಮಿಸಿ ನಗರಸಭಾಧ್ಯಕ್ಷೆ ಆಶಾ ರಾಜಶೇಖರ್ ನಗರಸಭೆ ಸಾಮಾನ್ಯ ಸಭೆಯಲ್ಲಿ ಘೋಷಣೆ ಮಾಡಿದರು.

ಹೊಸಕೋಟೆ: ನಗರಸಭೆಗೆ ನೂತನ ಸ್ಥಾಯಿ ಸಮಿತಿ ಅಧ್ಯಕ್ಷರನ್ನಾಗಿ ಕೆ.ದೇವರಾಜ್‌ರನ್ನು ನೇಮಿಸಿ ನಗರಸಭಾಧ್ಯಕ್ಷೆ ಆಶಾ ರಾಜಶೇಖರ್ ನಗರಸಭೆ ಸಾಮಾನ್ಯ ಸಭೆಯಲ್ಲಿ ಘೋಷಣೆ ಮಾಡಿದರು.

ಸಾಮಾನ್ಯ ಸಭೆಗೂ ಮುನ್ನ ನಗರಸಭೆ ಸ್ಥಾಯಿ ಸಮಿತಿಗೆ ಅಧ್ಯಕ್ಷ ಹಾಗೂ ಯೋಜನಾ ಪ್ರಾಧಿಕಾರಕ್ಕೆ ನಗರಸಭೆಯ ಚುನಾಯಿತ ಪ್ರತಿನಿಧಿಯನ್ನು ನೇಮಕ ಮಾಡುವ ಸಲುವಾಗಿ ನಗರಸಭಾಧ್ಯಕ್ಷೆ ಆಶಾ ರಾಜಶೇಖರ್, ಉಪಾಧ್ಯಕ್ಷ ನವೀನ್ ನೇತೃತ್ವದಲ್ಲಿ ಸಭೆ ನಡೆಯಿತು.

ನಗರಸಭೆ ಸ್ಥಾಯಿ ಸಮಿತಿ ನೂತನ ಅಧ್ಯಕ್ಷ ಕೆ.ದೇವರಾಜ್ ಮಾತನಾಡಿ, ಮಾಜಿ ಸಚಿವ ಎಂಟಿಬಿ ನಾಗರಾಜ್, ಬಿಬಿಎಂಪಿ ಮಾಜಿ ಸದಸ್ಯ ನಿತೀಶ್‌ ಪುರುಷೋತ್ತಮ್ ಮಾರ್ಗದರ್ಶನ ಹಾಗೂ ೨೧ನೇ ವಾರ್ಡ್ ಕನಕನಗರದ ಮತದಾರರ ಆಶೀರ್ವಾದದಿಂದ ಸದಸ್ಯನಾಗಿ, ಸ್ಥಾಯಿ ಸಮಿತಿ ಅಧ್ಯಕ್ಷನಾಗಿದ್ದು ಅವರನ್ನು ಅಭಿನಂದಿಸುತ್ತೇನೆ. ಮುಂದಿನ ದಿನಗಳಲ್ಲಿ ಅಧ್ಯಕ್ಷೆ, ಉಪಾಧ್ಯಕ್ಷ ಹಾಗೂ ಅಧಿಕಾರಿಗಳೊಂದಿಗೆ ಸೇರಿ ನಗರದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಹೇಳಿದರು.

ನೀರಿನ ಸಮಸ್ಯೆಗೆ ಕ್ರಮ: ನಗರಸಭೆ ವ್ಯಾಪ್ತಿಯಲ್ಲಿರುವ ನೀರಿನ ಸಮಸ್ಯೆ ಬಗ್ಗೆ ಎಲ್ಲಾ ಸದಸ್ಯರು ಬೆಳಕು ಚೆಲ್ಲಿದ್ದು ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಪೌರಾಯುಕ್ತರೊಂದಿಗೆ ಚರ್ಚಿಸಿ ಆಗಿರುವ ಸಮಸ್ಯೆ ಸರಿಪಡಿಸುತ್ತೇನೆ. ಉಳಿದಂತೆ ಮೂಲ ಸೌಕರ್ಯಗಳಾದ ಬೀದಿ ದೀಪ, ರಸ್ತೆ, ನೈರ್ಮಲ್ಯದ ಬಗ್ಗೆಯೂ ಅಗತ್ಯ ಕ್ರಮಕ್ಕೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ದೇವರಾಜ್ ತಿಳಿಸಿದರು.

ಈ ಸಂದರ್ಭದಲ್ಲಿ ನಗರಸಭಾಧ್ಯಕ್ಷೆ ಆಶಾ ರಾಜಶೇಖರ್, ಉಪಾಧ್ಯಕ್ಷ ಸಿಪಿ ನವೀನ್ ಕುಮಾರ್, ವಿಪಕ್ಷ ನಾಯಕ ಕೇಶವ್ ಮೂರ್ತಿ, ನಗರಸಭಾ ಆಯುಕ್ತ ನೀಲ ಲೋಚನಾ ಪ್ರಭು, ಹಾಗೂ ನಗರಸಭೆ ಸದಸ್ಯರು ಹಾಜರಿದ್ದು ನಗರಸಭೆ ನೂತನ ಸ್ಥಾಯಿ ಸಮಿತಿ ಅಧ್ಯಕ್ಷ ದೇವರಾಜ್‌ಗೆ ಶುಭಾಶಯ ಕೋರಿದರು.

ಫೋಟೋ: 19 ಹೆಚ್‌ಎಸ್‌ಕೆ 2

ಹೊಸಕೋಟೆಯ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ 21ನೇ ವಾರ್ಡ್ ಸದಸ್ಯ ಕೆ.ದೇವರಾಜ್ ಅವರನ್ನು ನಗರಸಭಾಧ್ಯಕ್ಷೆ ಆಶಾ ರಾಜಶೇಖರ್, ಉಪಾಧ್ಯಕ್ಷ ಸಿಪಿ.ನವೀನ್ ಕುಮಾರ್ ಇತರರು ಅಭಿನಂದಿಸಿದರು.