ಸಾರಾಂಶ
ಹೊಸಕೋಟೆ: ಹೊಸಕೋಟೆ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದಿದ್ದು ಇದಕ್ಕೆ ಅಚಿದು ಸಹಕಾರ ಸಚಿವರಾಗಿ ಕೆಲಸ ಮಾಡಿದ ಬಿ.ಎನ್.ಬಚ್ಚೇಗೌಡರ ಭದ್ರ ಬುನಾದಿ ಹಾಗೂ ಮಾರ್ಗದರ್ಶನ ಕಾರಣ ಎಂದು ಟಿಎಪಿಸಿಎಂಎಸ್ ಅಧ್ಯಕ್ಷ ಎಂ.ಬಾಬು ರೆಡ್ಡಿ ತಿಳಿಸಿದರು.
ಹೊಸಕೋಟೆ: ಹೊಸಕೋಟೆ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದಿದ್ದು ಇದಕ್ಕೆ ಅಚಿದು ಸಹಕಾರ ಸಚಿವರಾಗಿ ಕೆಲಸ ಮಾಡಿದ ಬಿ.ಎನ್.ಬಚ್ಚೇಗೌಡರ ಭದ್ರ ಬುನಾದಿ ಹಾಗೂ ಮಾರ್ಗದರ್ಶನ ಕಾರಣ ಎಂದು ಟಿಎಪಿಸಿಎಂಎಸ್ ಅಧ್ಯಕ್ಷ ಎಂ.ಬಾಬು ರೆಡ್ಡಿ ತಿಳಿಸಿದರು.
ಹೊಸಕೋಟೆ ಟಿಎಪಿಸಿಎಂಎಸ್‌ನ 2024-25 ನೇ ಸಾಲಿನ 76ನೇ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಕಳೆದ 76 ವರ್ಷದ ಭದ್ರ ಬುನಾಧಿ ಜೊತೆ ಹಿರಿಯರ ಮಾರ್ಗದರ್ಶನ, ನಿಷ್ಠಾವಂತ ಸಿಬ್ಬಂದಿ, ಅವ್ಯವಹಾರ ಹಗರಣ ರಹಿತ ವ್ಯವಹಾರ ಮಾಡಿಕೊಂಡು ಬಂದ ಹಿಂದಿನ ಆಡಳಿತ ಮಂಡಳಿಯಿಂದ ಈ ಸಾಧನೆ ಮಾಡಲು ಸಾಧ್ಯವಾಗಿದೆ, ತಾಲೂಕಿನ ಭಕ್ತಗೊಂಡನಹಳ್ಳಿಯಲ್ಲಿ ನಾಲ್ಕು ಎಕರೆ ಜಾಗವನ್ನು ಶಾಸಕ ಶರತ್ ಬಚ್ಚೇಗೌಡ ಮಂಜೂರು ಮಾಡಿಸಿಕೊಟ್ಟ ಪಕ್ಕದಲ್ಲೇ ಎಪಿಎಂಸಿ ನಿರ್ಮಾಣವಾಗುತಿದ್ದು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಅಭಿವೃದ್ದಿ ಹೊಂದಲಿದೆ. ಈ ಬಾರಿಯೂ ಶೇರುದಾರರಿಗೆ ಶೇ.೧೦ರಷ್ಟು ಡಿವಿಡೆಂಟ್ ನೀಡುವುದಾಗಿ ಘೋಷಣೆ ಮಾಡಿದರು.ಮಾಜಿ ಸಂಸದ ಬಿ.ಎನ್.ಬಚ್ಚೇಗೌಡ ಮಾತನಾಡಿ, ಟಿಎಪಿಸಿಎಂಎಸ್ ಉತ್ತಮ ಲಾಭಾಂಶ ಹೊಂದಿ ರೈತರಿಗೆ ಉತ್ತಮ ಸಹಕಾರ ನೀಡುತ್ತಿದೆ. ಈ ಭಾರಿ ಹೆಚ್ಚು ವ್ಯಾಪಾರ ಆಗುವುದಕ್ಕೆ ಈ ಬಾರಿ 1.33 ಕೋಟೆ ನಿವ್ವಳ ಲಾಭ ಬಂದಿದ್ದು ಸಹಕಾರ ಸಂಘ ಸುಭದ್ರವಾಗಿದ್ದು 4 ಸಾವಿರ ಮೆಟ್ರಿಕ್ ಟನ್ ಸಾಮರ್ಥ್ಯದ ಬೃಹತ್ ಗೋದಾಮು ಹೊಂದಿದೆ. ತಾಲೂಕಿನಲ್ಲಿ ಒಟ್ಟು ೯ ಸಹಕಾರ ಸಂಘಗಳು ಕಾರ್ಯ ನಿರ್ವಹಿಸುತಿದ್ದು ಎಲ್ಲ ಸಂಘಗಳು ಉತ್ತಮ ಆಡಳಿತದ ಜೊತೆ ಉತ್ತಮ ಲಾಭದಲ್ಲಿದೆ ಎಂದರು.
ಟಿಎಪಿಸಿಎಎಸ್ ಪ್ರಭಾರ ಕಾರ್ಯದರ್ಶಿ ಎಂ.ಸೋಮಣ್ಣ ಸಹಕಾರ ಸಂಘದ 2024-25 ನೇ ಸಾಲಿನ ವರದಿ ಮಂಡಿಸಿ ಮಾತನಾಡಿದ ಅವರು ಸಹಕಾರ ಸಂಘದಲ್ಲಿ ಒಟ್ಟು 6698 ಸದಸ್ಯರನ್ನೊಳಗೊಂಡು ಒಟ್ಟು 52.23 ಲಕ್ಷ ಪಾಲು ಬಂಡವಾಳ ಹೊಂದಿದ್ದು 2024-25ನೇ ಸಾಲಿನಲ್ಲಿ 5691.52 ಲಕ್ಷ ವ್ಯಾಪಾರ ವಹಿವಾಟು ನೆಡೆಸಿದ್ದು ಒಟ್ಟು 1.33 ಕೋಟಿ ನಿವ್ವಳಲಾಭ ಹೊಂದಿದೆ ಎಂದರು.ಇದೇ ಸಂಧರ್ಭದಲ್ಲಿ 10 ನೇ ತರಗತಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸದಸ್ಯರ 57 ಮಕ್ಕಳಿಗೆ ಗೌರವಿಸಲಾಯಿತು.
ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಕೋಡಿಹಳ್ಳಿ ಸೊಣ್ಣಪ್ಪ, ಉಪಾಧ್ಯಕ್ಷ ಆರ್ ರವೀಂದ್ರ, ನಿರ್ದೇಶಕರಾದ ಎಚ್.ಕೆ ರಮೇಶ್, ಕೆಎಸ್ ಸುರೇಶ್, ಸಿ ಮುನಿಯಪ್ಪ, ಹಮುಮಂತೇಗೌಡ, ಆಂಜಿನಪ್ಪ, ನಾಗರಾಜ್, ಸುರೇಶ್, ಸವಿತಾ ಗೋಪಾಲ್, ರಾಣಿ ರಾಮಚಂದ್ರ, ದೇವೇಗೌಡ, ಶ್ರೀನಿವಾಸ್, ಬಿಸಿ ಆನಂದಾಚಾರಿ, ಬಿಡಿಸಿಸಿ ಬ್ಯಾಂಕ್ ಪ್ರತಿನಿಧಿ ಬಿವಿ ಸತೀಶ್ ಗೌಡ, ಬಮೂಲ್ ನಿರ್ದೇಶಕ ಎಲ್‌ಎಂಟಿ ಮಂಜುನಾಥ್, ತಾ.ಪಂ.ಮಾಜಿ ಅದ್ಯಕ್ಷ ಡಾ ಡಿಟಿ ವೆಂಕಟೇಶ್, ನಗರಸಭೆ ಸದಸ್ಯೆ ರಮಾ ಮಂಜುನಾಥ್, ಹಾಜರಿದ್ದರು.ಫೋಟೋ: 19 ಹೆಚ್‌ಎಸ್‌ಕೆ 1
ಹೊಸಕೋಟೆಯ ಟಿಎಪಿಸಿಎಂಎಸ್ ಸಹಕಾರ ಸಂಘದ 2024-25ನೇ ಸಾಲಿನ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ ಗೌರವಿಸಲಾಯಿತು.