ಹರಿಹರದ ಜಿಟಿಟಿಸಿಗೆ ಆದ್ಯತೆ ಮೇರೆಗೆ ಹಾಸ್ಟೆಲ್ ಸೌಲಭ್ಯ: ಪಾಟೀಲ್

| Published : Jul 23 2025, 12:30 AM IST

ಸಾರಾಂಶ

ನಗರದ ಸರಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರಕ್ಕೆ (ಜಿಟಿಟಿಸಿ) ಆದ್ಯತೆ ಮೇರೆಗೆ ಹಾಸ್ಟೆಲ್ ಸೌಲಭ್ಯ ಒದಗಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಚಿವ ಶರಣ ಪ್ರಕಾಶ್ ಪಾಟೀಲ್ ಭರವಸೆ ನೀಡಿದ್ದಾರೆ.

ಹರಿಹರ: ನಗರದ ಸರಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರಕ್ಕೆ (ಜಿಟಿಟಿಸಿ) ಆದ್ಯತೆ ಮೇರೆಗೆ ಹಾಸ್ಟೆಲ್ ಸೌಲಭ್ಯ ಒದಗಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಚಿವ ಶರಣ ಪ್ರಕಾಶ್ ಪಾಟೀಲ್ ಭರವಸೆ ನೀಡಿದರು.

ನಗರದ ಜಿಟಿಟಿಸಿ ಕೇಂದ್ರಕ್ಕೆ ಮಂಗಳವಾರ ಮಧ್ಯಾಹ್ನ ಭೇಟಿ ನೀಡಿದ ಅವರು, ಕೇಂದ್ರದ ಪ್ರಾಂಶುಪಾಲ ಲಕ್ಷ್ಮಣ ನಾಯ್ಕ್ ಎಸ್. ಅವರ ಕೋರಿಕೆ ಮೇರೆಗೆ ಸಚಿವರು ಈ ಭರವಸೆ ನೀಡಿದರು. ಕೇಂದ್ರದಲ್ಲೀಗ ಟೂಲ್ ಅಂಡ್ ಡೈ ಮೇಕಿಂಗ್, ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್, ಆಟೋಮೇಷನ್ ಅಂಡ್ ರೊಬೋಟಿಕ್ಸ್, ಪ್ರಿಸಿಷನ್ ಅಂಡ್ ಮ್ಯಾನುಫ್ಯಾಕ್ಚರಿಂಗ್ ಎಂಬ ೪ ವಿಭಾಗಗಳಿದ್ದು, ಬೇರೆ ತಾಲೂಕು, ಜಿಲ್ಲೆಗಳಿಂದಲೂ ಸೇರಿದಂತೆ ವಿದ್ಯಾರ್ಥಿಗಳ ಸಂಖ್ಯೆ ೫೦೩ ಇದೆ, ಕ್ಯಾಂಪಸ್‌ನಲ್ಲೆ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಹಾಸ್ಟೆಲ್ ವ್ಯವಸ್ಥೆ ಅಗತ್ಯ ಇದೆ ಎಂದು ಪ್ರಾಚಾರ್ಯರು ಸಚಿವರ ಗಮನ ಸೆಳೆದರು.

ನಾಲ್ಕು ವಿಭಾಗಗಳ ವಿದ್ಯಾರ್ಥಿಗಳ ತರಬೇತಿಗೆ ಅನುಕೂಲವಾಗುವಂತೆ ೬ ತರಗತಿಗಳ ನಿರ್ಮಾಣ, ಕೆಎಸ್‌ಎಸ್‌ಐಡಿಸಿ ಇಂಡಸ್ಟ್ರಿಯಲ್ ಏರಿಯಾದಲ್ಲಿ ಕೇಂದ್ರಕ್ಕೆ ಸೇರಿದ ಸುಮಾರು ಅರ್ಧ ಎಕರೆ ನಿವೇಶನವಿದ್ದು, ಅಲ್ಲಿ ಅಲ್ಪಾವಧಿಯ ತರಬೇತಿಗೆ ಕಟ್ಟಡ ಬೇಕಾಗಿದೆ. ಖಾಲಿ ಇರುವ ಹುದ್ದೆಗಳಿಗೆ ಸಿಬ್ಬಂದಿಗಳ ನೇಮಕವಾಗಬೇಕಾಗಿದೆ ಎಂದು ಸಚಿವರ ಗಮನ ಸೆಳೆದರು.

ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಶಿವಕುಮಾರ್ ಮಲ್ಲಾಡದ, ಸಿಡಾಕ್ ಜಂಟಿ ನಿರ್ದೇಶಕ ಆರ್.ಪಿ.ಪಾಟೀಲ್, ಅಧ್ಯಾಪಕರದಾದ ಶಿವಕುಮಾರ್, ಗಣೇಶ್ ಹಾಗೂ ಸಿಬ್ಬಂದಿ ಇದ್ದರು.

- - -

-22HRR03:

ಹರಿಹರದ ಜಿಟಿಟಿಸಿ ಕೇಂದ್ರಕ್ಕೆ ಮಂಗಳವಾರ ಭೇಟಿ ನೀಡಿದ್ದ ಸಚಿವ ಶರಣ ಪ್ರಕಾಶ್ ಪಾಟೀಲ್ ವಿದ್ಯಾರ್ಥಿಗಳು ಸಿದ್ಧಗೊಳಿಸಿದ ಪ್ರಾಜೆಕ್ಟ್‌ಗಳನ್ನು ವೀಕ್ಷಿಸಿ, ಮಾಹಿತಿ ಪಡೆದರು.