ಸಾರಾಂಶ
ಹೊಸೂರ ಗ್ರಾಮದ ಮಹಾಲಕ್ಷ್ಮೀ ದೇವಿ ಜಾತ್ರೆಯು ವಿಜೃಂಭಣೆಯಿಂದ ಜರುಗಿತು. ಮೇ.14 ರಂದು ರಾತ್ರಿ 8ಕ್ಕೆ ಮಹಾಲಕ್ಷ್ಮೀ ದೇವಿಯ ಉಡಿ ತುಂಬುವ ಕಾರ್ಯಕ್ರಮ ನಡೆಯಿತು.
ಕನ್ನಡಪ್ರಭ ವಾರ್ತೆ ಯಮಕನಮರಡಿ
5 ವರ್ಷಕ್ಕೊಮ್ಮೆ ಜರುಗುವ ತಾಲೂಕಿನ ಹೊಸೂರ ಗ್ರಾಮದ ಮಹಾಲಕ್ಷ್ಮೀ ದೇವಿ ಜಾತ್ರೆಯು ವಿಜೃಂಭಣೆಯಿಂದ ಜರುಗಿತು. ಮೇ.14 ರಂದು ರಾತ್ರಿ 8ಕ್ಕೆ ಮಹಾಲಕ್ಷ್ಮೀ ದೇವಿಯ ಉಡಿ ತುಂಬುವ ಕಾರ್ಯಕ್ರಮ ನಡೆಯಿತು. ರಾತ್ರಿ 9ಕ್ಕೆ ದೇವಿಯ ಹೊನ್ನಾಟದ ಭವ್ಯ ಮೆರವಣಿಗೆ ನೂರಾರು ಭಕ್ತರ ಮಧ್ಯ ಭಂಡಾರ ಸಿಂಪಡಿಸುವ ಮೂಲಕ ನಡೆಯಿತು.ಮೇ.15 ರಂದು ಬೆಳಗ್ಗೆ 6ಕ್ಕೆ ದೇವಿಯನ್ನು ಗುಡಿಯ ಪಕ್ಕದ ಜಾಗೆಯಲ್ಲಿ ಪ್ರತಿಷ್ಠಾಪಿಸಲಾಯಿತು. ಬೆಳಗ್ಗೆ 7 ಗಂಟೆಗೆ ರಂಗಪೂಜೆ ಮಾಡಲಾಯಿತು. 9 ಗಂಟೆಗೆ ಸಕಲವಾದ್ಯಮೇಳದೊಂದಿಗೆ ದೇವಿಗೆ ನೂರಾರು ಮಹಿಳೆಯರು ನೈವೇದ್ಯ ಅರ್ಪಿಸಿದರು. ಮಧ್ಯಾಹ್ನ 3 ಗಂಟೆಗೆ ಹಗ್ಗ-ಜಗ್ಗಾಟದ ಸ್ಪರ್ಧೆ, ರಾತ್ರಿ 10 ಗಂಟೆಗೆ ಮಾತು ಕೇಳದ ಮಕ್ಕಳು, ನೀತಿಗೆಟ್ಟ ಸೊಸೆ ನಾಟಕ ಪ್ರದರ್ಶನಗೊಂಡಿತು.
ಮೇ.16 ರಂದು ಬೆಳಗ್ಗೆ ಲಕ್ಷ್ಮೀ ಹಾಗೂ ಮಹಾಲಕ್ಷ್ಮೀ ದೇವಿಗೆ ವಿಶೇಷ ಪೂಜೆ ಜರುಗಿತು. ಬೆಳಗ್ಗೆ 9 ಗಂಟೆಗೆ ಜೋಡುಕುದುರೆ ಗಾಡಿ ಸ್ಪರ್ಧೆ, 11ಕ್ಕೆ ಪುರುಷರ ಸೈಕಲ್ ಸ್ಫರ್ಧೆ, ಸಂಜೆ 4 ಗಂಟೆಗೆ ಮಹಿಳೆಯರ ಸೈಕಲ್ ಸ್ಪರ್ಧೆ ನಡೆಯಿತು. ರಾತ್ರಿ 9 ಗಂಟೆಗೆ ಹಾಸ್ಯ ದಿಗ್ಗಜರಿಂದ ಹಾಸ್ಯ ಲೋಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮೇ.17 ರಂದು ಬೆಳಗ್ಗೆ 7 ಗಂಟೆಗೆ ದೇವಿಗೆ ನೈವೇದ್ಯ ಅರ್ಪಣೆ ಮಾಡಲಾಯಿತು. 9 ಗಂಟೆಗೆ ಜೋಡೆತ್ತಿನ ಗಾಡಿ ಸ್ಪರ್ಧೆ, 11 ಗಂಟೆಗೆ ಪುರುಷರ ಓಡುವ ಸ್ಪರ್ಧೆ, 3 ಗಂಟೆಗೆ ಚಿಕ್ಕನರಗುಂದದ ಮಹಿಳಾ ತಂಡದಿಂದ ಡೊಳ್ಳು ಕುಣಿತ, ಸಂಜೆ 4 ಗಂಟೆಗೆ ಕುಳಿತು ಕುದುರೆ ಓಡಿಸುವ ಸ್ಪರ್ಧೆ, ರಾತ್ರಿ 10 ಗಂಟೆಗೆ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆದವು. ಮೇ.18 ರಂದು ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನದವರೆಗೆ ದೇವಿಗೆ ಗ್ರಾಮಸ್ಥರು ಸೇರಿದಂತೆ ಸುತ್ತ-ಮುತ್ತಲಿನ ಗ್ರಾಮದವರು ನೈವೇದ್ಯ ಅರ್ಪಿಸಿದರು. ಠಗರಿನ ಕಾಳಗ ನಡೆಯಿತು. ಬಾಳಪ್ಪ ಅಸೂದೆ ಅವರಿಂದ ಅಷ್ಟಲಕ್ಷ್ಮೀ ಸ್ತೋತ್ರ ಪಠಣದ ನಂತರ ದೇವಿಯನ್ನು ಎಬ್ಬಿಸಿ ಮಧ್ಯಾಹ್ನ 3.30ಕ್ಕೆ ದೇವಿಯ ಹೊನ್ನಾಟದ ಮೆರವಣಿಗೆ ಶಹನಾಯಿ, ದಪ್ಪಿ ಸಂಗೀತದೊಂದಿಗೆ ಜರುಗಿತು. ಸಂಜೆ ದೇವಿಯನ್ನು ಸೀಮೋಲ್ಲಂಘಣೆ ಮಾಡುವ ಮೂಲಕ ಜಾತ್ರೆ ಸಂಪನ್ನಗೊಳಿಸಲಾಯಿತು.-------------------ಸ್ಪರ್ಧಾ ವಿಜೇತರು
ಟಗರು ಸ್ಪರ್ಧೆ: ಹತ್ತರಗಿಯ ಜೈಭೀಮ ಸರ್ಕಾರ (₹10 ಸಾವಿರ-ಪ್ರಥಮ), ಗೋಕಾಕ ನಿಂಗಾಪುರದ ಚೌಡೇಶ್ವರ ಐರಾವತ್ (₹7501-ದ್ವಿತೀಯ) ಮತ್ತು ಸೊಲ್ಲಾಪುರದ ಬಾಳುಮಾಮಾ (₹5 ಸಾವಿರ-ತೃತೀಯ).ಜೋಡು ಎತ್ತಿನ ಗಾಡಿ ಸ್ಪರ್ಧೆ: ರಾಜಕುಮಾರ ದೇಸಾಯಿ (₹75,001-ಪ್ರಥಮ), ಮನೋಹರ ಗಾಡಗಿ (₹50,001-ದ್ವಿತೀಯ) ಮತ್ತು ರಂಜೀತ ಪಾಟೀಲ (₹30,001-ತೃತೀಯ).
ಪುರುಷರ ಓಡುವ ಸ್ಪರ್ಧೆ: ಗಡಹಿಂಗ್ಲಜದ ಪ್ರಧಾನ ಶಿರೋಳಕರ್ (₹5001-ಪ್ರಥಮ), ಅಲದಾಳದ ಭೈರು ನಾಯಕ (₹3001- ದ್ವಿತೀಯ) ಮತ್ತು ಕಿರಣ ಸಂಗಟಿ (ರೂ.2001, ತೃತೀಯ).ಕುಳಿತು ಕುದುರೆ ಓಡಿಸುವ ಸ್ಪರ್ಧೆ: ಗಣಪತಿ ನಿಲಜಿ (₹11001-ಪ್ರಥಮ), ಗಣೇಶ ಚವ್ಹಾಣ (₹8001-ದ್ವಿತೀಯ) ಮತ್ತು ಮಹಾದೇವ ಮದ್ದಾಯಿ (₹5001-ತೃತೀಯ).
ಕುಸ್ತಿ ಸ್ಪರ್ಧೆ: ಹುಲ್ಲೋಳಿ ಹಟ್ಟಿಯ ಉಮರ್ ಮುಲ್ತಾನಿ (ಪ್ರಥಮ), ಪಾಮಲದಿನ್ನಿಯ ಬಸಪ್ಪ ಡಬಾಜ್ (ದ್ವಿತೀಯ) ಮತ್ತು ಬಿ.ಲಿಂಗನೂರದ ಚನ್ನಪ್ಪ ಮಂಟೂರ (ತೃತೀಯ).ಮಹಿಳಾ ಸೈಕಲ್ ಸ್ಪರ್ಧೆ: ದಾನಮ್ಮ ನಾವಲಗಿ (₹10,001-ಪ್ರಥಮ), ಸಾವಿತ್ರಿ ಹೆಬ್ಬಾರಟ್ಟಿ (ಸೊನ್ನ) (₹7501-ದ್ವಿತೀಯ) ಮತ್ತು ಸವಿತಾ ತುಳಸಿಗಿರ (₹5001-ತೃತೀಯ).
ಜಾತ್ರಾ ಕಮಿಟಿಯ ಮಾಜಿ ಸಚಿವ ಶಶಿಕಾಂತ ನಾಯಿಕ, ಶಿವಕುಮಾರ ನಾಯಿಕ, ಭೀಮಣ್ಣ ರಾಮಗೋನಟ್ಟಿ, ವಿಠ್ಠಲ್ ರಾಮಗೋನಟ್ಟಿ, ರಾವಸಾಬ ಸಾರಾಪುರೆ, ಅಶೋಕ ಅಕ್ಕತಂಗೇರಹಾಳ, ಮಹಾವೀರ ಅಕ್ಕತಂಗೇರಹಾಳ, ವಿಠ್ಠಲ್ ಪಾಟೀಲ್, ಶಿವಾನಂದ ಮುಗಳಖೋಡ, ಬಸಗೌಡ ಪಾಟೀಲ್, ಬಿ.ಬಿ.ಪಾಟೀಲ್, ಸುರೇಶ್ ಕೊಟಗಿ, ಬಸವಣ್ಣಿ ಕಂಬಾರ, ಬಾಹುಬಲಿ ನಾಗನೂರಿ ಮತ್ತು ತಂಡದವರು ಜಾತ್ರೆಯ ಯಶಸ್ವಿಗೆ ಶ್ರಮಿಸಿದರು.