ವಾಣಿಜ್ಯ ಅನಿಲಕ್ಕೆ ತುಂಬಾ ಸಮಸ್ಯೆ ಉಂಟಾಗಿದ್ದು, ಮಧ್ಯಪ್ರಾಚ್ಯ ಯುದ್ದದ ಪರಿಣಾಮ ಎಲ್ಲರಿಗೂ ಸಮಸ್ಯೆಯಾಗಿದೆ. ಆದ್ದರಿಂದ ನಮ್ಮ ಹೊಟೇಲಿನಲ್ಲಿ ಇಡ್ಲಿ, ವಡೆ ಹಾಗೂ ಅಕ್ಕಿಯಿಂದ ಮಾಡುವ ವೆಜ್‌ಬಾತ್, ಚಿತ್ರನ್ನ, ಪುಳಿಯೊಗರೆ ಹಾಗೂ ಇತರೆ ತಿನಿಸುಗಳನ್ನು ಮಾಡಲು ಸೌದೆ ಒಲೆ ಬಳಸಲಾಗುತ್ತಿದೆ. ಆದರೆ ದೋಸೆ, ಕಾಫಿ, ಟೀ ಹಾಗೂ ಇತರೆ ಎಣ್ಣೆ ಪದಾರ್ಥಗಳ ತಯಾರಿಕೆಗೆ ಬಹಳ ತೊಂದರೆಯಾಗಿದೆ ಎಂದು ವಾಸವಿ ಟಿಫನ್ ಸೆಂಟರ್ ಮಾಲೀಕ ಮಂಜುನಾಥ್ ಹೇಳಿದರು. ವಾಣಿಜ್ಯ ಸಿಲಿಂಡರ್‌ಗಳು ಮತ್ತು ಐದು ಕೆಜಿ ಸಿಲೆಂಡರ್‌ಗಳು ಇದೀಗ ಸರಬರಾಜು ಆಗುತ್ತಿಲ್ಲ. ಆದರೆ ಗೃಹ ಬಳಕೆ ಸಿಲೆಂಡರ್‌ಗಳು ನಮ್ಮ ಅಗತ್ಯಕ್ಕೆ ತಕ್ಕಂತೆ ಕಂಪನಿಯಿಂದ ಬರುತ್ತಿದೆ. ಈಗಿರುವ ಸಮಸ್ಯೆ ಬರುವ ಮೊದಲು ಕನಿಷ್ಟ ಒಂದು ತಿಂಗಳಿಗೆ ೪೦ ರಿಂದ ಐವತ್ತು ಲೋಡ್ ಬರುತ್ತಿತ್ತು. ಪ್ರತಿ ಲೋಡ್‌ಗೆ ೩೪೨ ಸಿಲಿಂಡರ್‌ಗಳು ಬರುತ್ತಿದೆ ಎಂದು ಮಾಹಿತಿ ನೀಡಿದರು.

ಹೊಳೆನರಸೀಪುರ: ವಾಣಿಜ್ಯ ಅನಿಲಕ್ಕೆ ತುಂಬಾ ಸಮಸ್ಯೆ ಉಂಟಾಗಿದ್ದು, ಮಧ್ಯಪ್ರಾಚ್ಯ ಯುದ್ದದ ಪರಿಣಾಮ ಎಲ್ಲರಿಗೂ ಸಮಸ್ಯೆಯಾಗಿದೆ. ಆದ್ದರಿಂದ ನಮ್ಮ ಹೊಟೇಲಿನಲ್ಲಿ ಇಡ್ಲಿ, ವಡೆ ಹಾಗೂ ಅಕ್ಕಿಯಿಂದ ಮಾಡುವ ವೆಜ್‌ಬಾತ್, ಚಿತ್ರನ್ನ, ಪುಳಿಯೊಗರೆ ಹಾಗೂ ಇತರೆ ತಿನಿಸುಗಳನ್ನು ಮಾಡಲು ಸೌದೆ ಒಲೆ ಬಳಸಲಾಗುತ್ತಿದೆ. ಆದರೆ ದೋಸೆ, ಕಾಫಿ, ಟೀ ಹಾಗೂ ಇತರೆ ಎಣ್ಣೆ ಪದಾರ್ಥಗಳ ತಯಾರಿಕೆಗೆ ಬಹಳ ತೊಂದರೆಯಾಗಿದೆ ಎಂದು ವಾಸವಿ ಟಿಫನ್ ಸೆಂಟರ್ ಮಾಲೀಕ ಮಂಜುನಾಥ್ ಹೇಳಿದರು.ಮಧ್ಯಪ್ರಾಚ್ಯ ಯುದ್ಧದಿಂದ ವಿಶ್ವದ ಪ್ರಕೃತಿ, ಪರಿಸರ, ಪ್ರಾಣಿಪಕ್ಷಿಗಳು, ಜಲಚರಗಳು ಹಾಗೂ ಪ್ರತಿಯೊಬ್ಬರಿಗೂ ನಾನಾ ರೀತಿಯ ಸಮಸ್ಯೆಯಾಗುತ್ತಿದ್ದು, ಯುದ್ಧ ನಿಲ್ಲಿಸಿ, ಮಾತುಕತೆಯ ಮೂಲಕ ಸಮಸ್ಯೆ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ವಾಣಿಜ್ಯ ಬಳಕೆ ಅನಿಲ ಸಿಲಿಂಡರ್ ಸಮಸ್ಯೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ಸಲಹೆ ನೀಡಿದರು.

ಪಟ್ಟಣದ ಕಪಿಲಾ ಗ್ಯಾಸ್ ಎಜೆಸ್ಸಿಸ್ ನೌಕರ ಸುನಿಲ್ ಮಾತನಾಡಿ, ಗೃಹ ಬಳಕೆ ಗ್ಯಾಸ್ ಸಿಲಿಂಡರ್‌ಗಳ ಸರಬರಾಜು ಹಾಗೂ ವಿತರಣೆಗೆ ಯಾವುದೇ ಸಮಸ್ಯೆ ಇಲ್ಲ, ಅಗತ್ಯದಷ್ಟು ಸಿಲಿಂಡರ್‌ಗಳ ಸರಬರಾಜಾಗುತ್ತಿರುವ ಜತೆಗೆ ವ್ಯವಸ್ಥಿತವಾಗಿ ವಿತರಣೆ ಮಾಡಲಾಗುತ್ತಿದೆ. ಆದರೆ ವಾಣಿಜ್ಯ ಸಿಲಿಂಡರ್‌ಗಳ ಪೂರೈಕೆ ಇಲ್ಲದ ಕಾರಣ ಉಂಟಾಗಿರುವ ಸಮಸ್ಯೆಯಿಂದ ಆತಂಕಕ್ಕೆ ಒಳಗಾಗಿರುವ ನಾಗರೀಕರು, ನಮ್ಮ ಕಚೇರಿ ಮುಂದೆ ಮುಂಜಾನೆಯಿಂದಲೇ ಕಾಯುತ್ತಾ ಕುಳಿತಿರುತ್ತಾರೆ ಹಾಗೂ ಗೃಹ ಬಳಕೆ ಸಿಲಿಂಡರ್‌ಗೆ ಯಾವುದೇ ಸಮಸ್ಯೆ ಇಲ್ಲವೆಂದರೂ ಅರ್ಥ ಮಾಡಿಕೊಳ್ಳುತ್ತಿಲ್ಲ. ಮಧ್ಯಪ್ರಾಚ್ಯ ಯುದ್ಧದ ಭೀತಿಯಿಂದ ವಾಣಿಜ್ಯ ಅನಿಲ ಸಿಲಿಂಡರ್‌ಗಳ ಮೇಲೆ ದುಷ್ಪರಿಣಾಮ ಬೀರಿರುವುದು ನಿಜ, ವಾಣಿಜ್ಯ ಸಿಲಿಂಡರ್‌ಗಳು ಮತ್ತು ಐದು ಕೆಜಿ ಸಿಲೆಂಡರ್‌ಗಳು ಇದೀಗ ಸರಬರಾಜು ಆಗುತ್ತಿಲ್ಲ. ಆದರೆ ಗೃಹ ಬಳಕೆ ಸಿಲೆಂಡರ್‌ಗಳು ನಮ್ಮ ಅಗತ್ಯಕ್ಕೆ ತಕ್ಕಂತೆ ಕಂಪನಿಯಿಂದ ಬರುತ್ತಿದೆ. ಈಗಿರುವ ಸಮಸ್ಯೆ ಬರುವ ಮೊದಲು ಕನಿಷ್ಟ ಒಂದು ತಿಂಗಳಿಗೆ ೪೦ ರಿಂದ ಐವತ್ತು ಲೋಡ್ ಬರುತ್ತಿತ್ತು. ಪ್ರತಿ ಲೋಡ್‌ಗೆ ೩೪೨ ಸಿಲಿಂಡರ್‌ಗಳು ಬರುತ್ತಿದೆ ಎಂದು ಮಾಹಿತಿ ನೀಡಿದರು. ಪ್ರಸ್ತುತ ಗೃಹ ಬಳಕೆ ಸಿಲಿಂಡರ್ ಬುಕ್ಕಿಂಗ್ ಮಾಡಲು ಒಂದು ಗೃಹ ಬಳಕೆ ಸಿಲಿಂಡರ್ ಇರುವವರಿಗೆ ೨೫ ದಿನಗಳಿಗೂ ಎರಡು ಗೃಹಬಳಕೆ ಸಿಲಿಂಡರ್ ಇರುವವರು ೩೦ ದಿನಕ್ಕೆ ಬುಕ್ಕಿಂಗ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ಕಳೆದ ಒಂದು ವಾರದಿಂದ ಈ ಹೊಸ ಸಮಸ್ಯೆ ಆರಂಭವಾಗಿದೆ, ಆದರೆ ಈ ಸಮಸ್ಯೆಅಲ್ಪಕಾಲದ್ದಾಗಿದೆ. ಆದ್ದರಿಂದ ನಮ್ಮ ಗ್ರಾಹಕರು ಯಾವುದೇ ಕಾರಣಕ್ಕೂ ಆತಂಕ ಪಡುವುದು ಬೇಡ ನಿಮಗೆ ದೊರಕಬೇಕಾದ ಗೃಹ ಬಳಕೆ ಸಿಲೆಂಡರ್‌ಗಳು ನಿಮಗೆ ದೊರಕಲಿದೆ ಎಂದು ಮನವಿ ಮಾಡಿದರು.