ಗರಗಂದೂರಿನ ಮಲ್ಲಿಕಾರ್ಜುನ ಕಾಲೋನಿ ವೃದ್ಧೆ ಬೈರಿ ಹಾಗೂ ಅನಾರೋಗ್ಯ ಪೀಡಿತ ಮಗನೊಂದಿಗೆ ಪ್ಲಾಸ್ಟಿಕ್ ಹೊದಿಕೆ ಗುಡಿಸಿಲಿನಲ್ಲಿ ಜೀವನ ಸಾಗಿಸುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನೈಜ ಚಿತ್ರಣ ಪ್ರಕಟಗೊಂಡ ಹಿನ್ನೆಲೆಯಲ್ಲಿ ಜಿ. ಪಂ. ಮಾಜಿ ಸದಸ್ಯ ಪಿ.ಎಂ.ಲತೀಫ್ ಭೇಟಿ ನೀಡಿ ಪರಿಶೀಲಿಸಿದರು. ಅವರು ತಮ್ಮ ಸ್ವಂತ ವೆಚ್ಚದಿಂದ ಉತ್ತಮ ಸೂರನ್ನು ನಿರ್ಮಿಸಿ ಶಾಸಕರ ಮುಖಾಂತರ ಹಸ್ತಾಂತರಿಸಿದರು.
ಸಮಸ್ಯೆಗೆ ಸ್ಪಂದಿಸಿ ಮನೆ ನಿರ್ಮಿಸಿ ಕೊಟ್ಟ ಸಮಾಜ ಸೇವಕ ಪಿ.ಎಂ.ಲತೀಫ್
ಸುಂಟಿಕೊಪ್ಪ: ಗರಗಂದೂರಿನ ಮಲ್ಲಿಕಾರ್ಜುನ ಕಾಲೋನಿ ವೃದ್ಧೆ ಬೈರಿ ಹಾಗೂ ಅನಾರೋಗ್ಯ ಪೀಡಿತ ಮಗನೊಂದಿಗೆ ಪ್ಲಾಸ್ಟಿಕ್ ಹೊದಿಕೆ ಗುಡಿಸಿಲಿನಲ್ಲಿ ಜೀವನ ಸಾಗಿಸುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನೈಜ ಚಿತ್ರಣ ಪ್ರಕಟಗೊಂಡ ಹಿನ್ನೆಲೆಯಲ್ಲಿ ಜಿ. ಪಂ. ಮಾಜಿ ಸದಸ್ಯ ಪಿ.ಎಂ.ಲತೀಫ್ ಭೇಟಿ ನೀಡಿ ಪರಿಶೀಲಿಸಿದರು. ಅವರು ತಮ್ಮ ಸ್ವಂತ ವೆಚ್ಚದಿಂದ ಉತ್ತಮ ಸೂರನ್ನು ನಿರ್ಮಿಸಿ ಶಾಸಕರ ಮುಖಾಂತರ ಹಸ್ತಾಂತರಿಸಿದರು.ಮಲ್ಲಿಕಾರ್ಜುನ ಕಾಲೋನಿ ನಿವಾಸಿಗಳು ವಯೋವೃದ್ಧೆ ಬೈರಿ ಹಾಗೂ ಅನಾರೋಗ್ಯ ಪೀಡಿತ ಮಗ ವಿಶ್ವನಾಥ್ ಎಂಬವರು ಅವರ ಸ್ವಂತ ಸೂರು ಮಳೆ ಗಾಳಿಗೆ ನೆಲಸಮಗೊಂಡು ನಂತರ ಈ ಬಡ ಜೀವಿಗಳು ಸೂರು ನಿರ್ಮಿಸುವ ಶಕ್ತಿ ಹೊಂದಿರದ ಕಾರಣ ಪ್ಲಾಸ್ಟಿಕ್ ಹೊದಿಕೆಯ ಗುಡಿಸಿಲಿನಲ್ಲಿ ಮಳೆ ಗಾಳಿ, ಚಳಿಯಲ್ಲಿ ಹೈರಣಾಗಿ ವಾಸಿಸುತ್ತಿದ್ದರು. ಇದನ್ನು ಮನಗಂಡ ಸ್ಥಳೀಯ ನಿವಾಸಿಗಳು ಬೈರಿ ಅಜ್ಜಿಯ ನೈಜಕಥೆ ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಡುವ ಮೂಲಕ ಸಮಸ್ಯೆ ವ್ಯಾಪಕವಾಗಿ ಪ್ರಚಾರವಾಯಿತು.ಜಿ.ಪಂ. ಮಾಜಿ ಸದಸ್ಯ ಸಮಾಜ ಸೇವಕ ಪಿ. ಎಂ. ಲತೀಫ್ ಮಲ್ಲಿಕಾರ್ಜುನ ಕಾಲೋನಿಗೆ ಭೇಟಿ ನೀಡಿ ಸ್ವಂತ ವೆಚ್ಚದಲ್ಲಿ ಮನೆ ನಿರ್ಮಿಸಿ ಕೊಡುತ್ತೇವೆ ಎಂದು ಭರವಸೆ ನೀಡಿದ್ದರು. 6 ತಿಂಗಳಿನಲ್ಲಿಯೇ ಸೂರು ನಿರ್ಮಾಣವಾಗಿದ್ದು, ಮಡಿಕೇರಿ ಕ್ಷೇತ್ರ ಶಾಸಕ ಡಾ. ಮಂತರ್ ಗೌಡ ಅವರಿಂದ ಬೈರಿ ಮನೆ ಉದ್ಘಾಟಿಸಿ ಮನೆಯನ್ನು ಬೈರಿ ಅವರಿಗೆ ಹಸ್ತಾಂತರಿಸಿದರು.ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಿ.ಎಂ.ಲತೀಫ್, ಹರದೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮತ್ತು ಸದಸ್ಯರು, ಅಧಿಕಾರಿ ವರ್ಗದವರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.