ಶೀಘ್ರ 20 ಸಾವಿರ ಜನರಿಗೆ ಮನೆಗಳ ಹಕ್ಕುಪತ್ರ: ಶಾಸಕ ಪಠಾಣ

| Published : Sep 12 2025, 12:06 AM IST

ಸಾರಾಂಶ

ಕ್ಷೇತ್ರದ ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ಮನೆಗಳಿವೆ. ಆದರೆ, ಆ ಮನೆಗಳಿಗೆ ಪಟ್ಟಾ ಬುಕ್ ಇಲ್ಲ. ಆದ್ದರಿಂದ ಕ್ಷೇತ್ರದಲ್ಲಿ 20 ಸಾವಿರ ಜನರಿಗೆ 6ನೇ ಗ್ಯಾರಂಟಿಯಾಗಿ ಪಟ್ಟಾ ನೀಡಲಾಗುವುದು ಎಂದು ಶಾಸಕ ಯಾಸೀರ್ ಅಹ್ಮದ ಖಾನ್ ಪಠಾಣ ಭರವಸೆ ನೀಡಿದರು.

ಸವಣೂರು: ಜನರ ಮನ ಮುಟ್ಟುವ ಕಾರ್ಯಗಳನ್ನು ಕೈಗೊಳ್ಳಲು ಕಂಕಣಬದ್ಧನಾಗಿದ್ದೇನೆ ಎಂದು ಶಾಸಕ ಯಾಸೀರ್ ಅಹ್ಮದ ಖಾನ್ ಪಠಾಣ ತಿಳಿಸಿದರು.ತಾಲೂಕಿನ ಬೇವಿನಹಳ್ಳಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.ಗ್ರಾಮಕ್ಕಾಗಿ ಸುಮಾರು ₹60 ಲಕ್ಷ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತದೆ. ಕ್ಷೇತ್ರದ ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ಮನೆಗಳಿವೆ. ಆದರೆ, ಆ ಮನೆಗಳಿಗೆ ಪಟ್ಟಾ ಬುಕ್ ಇಲ್ಲ. ಆದ್ದರಿಂದ ಕ್ಷೇತ್ರದಲ್ಲಿ 20 ಸಾವಿರ ಜನರಿಗೆ 6ನೇ ಗ್ಯಾರಂಟಿಯಾಗಿ ಪಟ್ಟಾ ನೀಡಲಾಗುವುದು ಎಂದರು.

ಗ್ರಾಮದ ವಿವಿಧ ದೇವಸ್ಥಾನಗಳ ನಿರ್ಮಾಣವನ್ನು ಹಂತ- ಹಂತವಾಗಿ ಕೈಗೊಳ್ಳಲಾಗುವುದು. ಗ್ರಾಮದ ಸಣ್ಣ ಕೆರೆಯನ್ನು ಅಭಿವೃದ್ಧಿಗೊಳಿಸಿ ವಿನೂತನ ಕೆರೆಯಾಗಿ ನಿರ್ಮಿಸಲಾಗುವುದು. ಬೇವಿನಹಳ್ಳಿ ಶಾಲೆಯ ಪಹಣಿಯಲ್ಲಿನ ಲೋಪದೋಷ ಸರಿಪಡಿಸಿ 4 ಎಕರೆ ಜಮೀನನ್ನು ಮೀಸಲಿಡಿಸಿ ಸೂಕ್ತ ದಾಖಲಾತಿಗಳನ್ನು ಒದಗಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ತಹಸೀಲ್ದಾರ್ ರವಿಕುಮಾರ ಕೊರವರ, ಗ್ಯಾರಂಟಿ ಅನುಷ್ಠಾನ ಸಮೀತಿ ತಾಲೂಕು ಅಧ್ಯಕ್ಷ ಸುಭಾಷ್ ಮಜ್ಜಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಜೆ. ಮುಲ್ಲಾ, ತಾಪಂ ಕೆಡಿಪಿ ಸದಸ್ಯರಾದ ರವಿ ಕರಿಗಾರ, ನವೀನ ಬಂಡಿವಡ್ಡರ, ಶಿರಬಡಗಿ ಗ್ರಾಪಂ ಅಧ್ಯಕ್ಷ ತೇಜಪ್ಪ ಕಡೇಮನಿ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ನಾಗಪ್ಪ ತಿಪ್ಪಕ್ಕನವರ, ಗ್ರಾಪಂ ಸದಸ್ಯರಾದ ಪೂಜಾ ಕರಿಗಾರ, ಸವಿತಾ ಲಮಾಣಿ, ಮಹದೇವಪ್ಪ ಲಮಾಣಿ, ನಾಗಪ್ಪ ತಿಮ್ಮಾಪೂರ, ಶರಣಬಸಪ್ಪ ಪರಮ್ಮನವರ, ಲಕ್ಷ್ಮಣ ಮಾದರ ಪ್ರಮುಖರಾದ ಮುತ್ತಣ್ಣ ಅಂಬಲಿ, ರಾಮಣ್ಣ ಅಗಸರ, ಮಹಾಂತಯ್ಯ ಹಿರೇಮಠ, ಪರಮೇಶಪ್ಪ ಮಾದರ, ಮೌಲಾಸಾಬ ಹೊಂಬರಡಿ, ಮಹೇಶ ಅಪ್ಪಣ್ಣವರ, ನಾಗಪ್ಪ ಚೌಹಾಣ, ಮಹದೇವಪ್ಪ ಮಲ್ಲೂರ, ಈರಣ ಲಮಾಣಿ ಇತರರು ಇದ್ದರು.