ಸಾರಾಂಶ
ವರದಕ್ಷಿಣೆ ಕಿರುಕುಳದಿಂದ ಬೇಸತ್ತು ಗೃಹಿಣಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಲೂರು ತಾಲೂಕಿನ ಹಳ್ಳಿಯೂರು ಗ್ರಾಮದಲ್ಲಿ ನಡೆದಿದೆ. ಧನ್ಯಶ್ರೀ (20) ಆತ್ಮಹತ್ಯೆಗೆ ಶರಣಾದ ಮಹಿಳೆ. ಧನ್ಯಶ್ರೀ ಸಕಲೇಶಪುರ ತಾಲೂಕಿನ ಬ್ಯಾಕೆರೆಗಡಿ (ಜನ್ನಾಪುರ) ಗ್ರಾಮದವರು. ಎರಡು ವರ್ಷದ ಹಿಂದೆ ಹಳ್ಳಿಯೂರು ಗ್ರಾಮದ ಪ್ರೇಮ್‌ಕುಮಾರ್‌ನನ್ನು ಪ್ರೀತಿಸಿ ಮದುವೆಯಾಗಿದ್ದರು. ಕಳೆದ ಒಂದು ವರ್ಷದಿಂದ ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದ ಎನ್ನುವ ಆರೋಪ ಪ್ರೇಮ್ ಕುಮಾರ್ ಮೇಲಿದೆ. ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಾಸನ: ವರದಕ್ಷಿಣೆ ಕಿರುಕುಳದಿಂದ ಬೇಸತ್ತು ಗೃಹಿಣಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಲೂರು ತಾಲೂಕಿನ ಹಳ್ಳಿಯೂರು ಗ್ರಾಮದಲ್ಲಿ ನಡೆದಿದೆ.
ಧನ್ಯಶ್ರೀ (20) ಆತ್ಮಹತ್ಯೆಗೆ ಶರಣಾದ ಮಹಿಳೆ. ಧನ್ಯಶ್ರೀ ಸಕಲೇಶಪುರ ತಾಲೂಕಿನ ಬ್ಯಾಕೆರೆಗಡಿ (ಜನ್ನಾಪುರ) ಗ್ರಾಮದವರು. ಎರಡು ವರ್ಷದ ಹಿಂದೆ ಹಳ್ಳಿಯೂರು ಗ್ರಾಮದ ಪ್ರೇಮ್‌ಕುಮಾರ್‌ನನ್ನು ಪ್ರೀತಿಸಿ ಮದುವೆಯಾಗಿದ್ದರು. ಕಳೆದ ಒಂದು ವರ್ಷದಿಂದ ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದ ಎನ್ನುವ ಆರೋಪ ಪ್ರೇಮ್ ಕುಮಾರ್ ಮೇಲಿದೆ. ಧನ್ಯಶ್ರೀ ಭಾನುವಾರ ತವರು ಮನೆಯಿಂದ ವಾಪಸ್ ಬಂದಿದ್ದರು. ವರದಕ್ಷಿಣೆ ತಂದಿಲ್ಲ ಎಂದು ಪತಿ ಪ್ರೇಮ್ ಕುಮಾರ್ ಜಗಳ ಮಾಡಿ ಧನ್ಯಶ್ರೀ ಮೇಲೆ ಹಲ್ಲೆ ಮಾಡಿದ್ದಾಗಿ ಆರೋಪಿಸಲಾಗಿದೆ. ಪತಿ ಜೊತೆ ಅತ್ತೆ ಭವಾನಿ, ಮಾವ ಪ್ರದೀಪ್ ಕೂಡ ಹಲ್ಲೆ ಮಾಡಿರುವುದಾಗಿ ದೂರಲಾಗಿದೆ.ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.