ಸಾರಾಂಶ
ಅರಸೀಕೆರೆ: ಪ್ರಧಾನ ಮಂತ್ರಿ ಆವಾಸ್ ವಸತಿ ಯೋಜನೆ ಅವ್ಯವಹಾರದ ಪ್ರಮುಖ ಆರೋಪಿ ರಾಜೇಶ್‌ರನ್ನು ಪೊಲೀಸರು ನಗರದ ಖಾಸಗಿ ಲಾಡ್ಜ್‌ನಲ್ಲಿ ಬಂಧಿಸಿದ್ದಾರೆ. ತಾಪಂ ಇ.ಒ ಸೇರಿದಂತೆ ಉನ್ನತ ಅಧಿಕಾರಿಗಳ ಪಾಸ್‌ವರ್ಡ್‌ಗಳನ್ನು ದುರುಪಯೋಗ ಮಾಡಿಕೊಂಡು ಸಕಲೇಶಪುರ ಸೇರಿದಂತೆ 347 ಜನರ ಖಾತೆಗೆ ತಲಾ 30 ಸಾವಿರ ರು. ಹಣ ವರ್ಗಾಯಿಸಿದ್ದ ಆರೋಪ ಈತನ ಮೇಲೆ ಇದೆ. ಜೊತೆಗೆ, ತಾಲೂಕಿನ ಬಾಣಾವರ ಗ್ರಾಮ ಪಂಚಾಯಿತಿಯಲ್ಲಿ ಪಿಡಿಒ ಕುಮಾರಸ್ವಾಮಿ ಜತೆಗೂಡಿ ಫಲಾನುಭವಿಗಳನ್ನು ವಂಚಿಸಿ ಹಣ ಲಪಟಾಯಿಸಿದ್ದ ಪ್ರಕರಣವು ಸಕಲೇಶಪುರ ಠಾಣೆಯಲ್ಲಿ ದಾಖಲಾಗಿತ್ತು. ಖಚಿತ ಮಾಹಿತಿಯ ಆಧಾರದ ಮೇಲೆ ದಾಳಿ ನಡೆಸಿದ ಪೊಲೀಸರಿಗೆ ರಾಜೇಶ್ ಸಿಕ್ಕಿಬಿದ್ದಿದ್ದಾನೆ. ಆದರೆ, ಮತ್ತೋರ್ವ ಆರೋಪಿ ಬಾಣಾವರ ಪಿಡಿಒ ಕುಮಾರಸ್ವಾಮಿ ತಪ್ಪಿಸಿಕೊಂಡಿದ್ದಾನೆ. ನಗರದ ಲಾಡ್ಜ್‌ನಲ್ಲಿ ಅವ್ಯವಹಾರದ ಕಿಂಗ್‌ಪಿನ್ ಬಂಧನವಾಗಿರುವುದು ತಾಲೂಕಿನಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ರಾಜೇಶ್‌ಗೆ ಪ್ರಭಾವಿ ರಾಜಕಾರಣಿಯೊಬ್ಬರಿಂದ ರಕ್ಷಣೆ ಸಿಗುವ ಪ್ರಯತ್ನ ನಡೆದಿದ್ದರೂ, ಕಡೇ ಕ್ಷಣದಲ್ಲಿ ಅದು ಫಲ ನೀಡಿಲ್ಲ ಎಂಬ ಮಾತುಗಳು ಹರಿದಾಡುತ್ತಿವೆ.