ತಾಯಿಗೆ ಅನ್ನ ಹಾಕದವನು ಕನ್ನಡಮ್ಮನನ್ನು ಹೇಗೆ ಉದ್ದಾರ ಮಾಡ್ತಾನೆ: ಸಣ್ಣಮ್ಮ

| Published : Oct 27 2024, 02:24 AM IST

ಸಾರಾಂಶ

ಹೆತ್ತಮ್ಮನ ಹೊಟ್ಟೆ ಉರಿಸಿದವನು ವೇದಿಕೆಯಲ್ಲಿ ಏನು ಭೋದನೆ ಮಾಡುತ್ತಾನೆ ಎಂದು ತಾಲೂಕು ದಬ್ಬೇಘಟ್ಟ ಹೋಬಳಿ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿರುವ ವಿಶ್ರಾಂತ ಅಧ್ಯಾಪಕ ಎಲ್.ಮಂಜಯ್ಯಗೌಡ ತಾಯಿ ಸಣ್ಣಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತುರುವೇಕೆರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ವಿಶ್ರಾಂತ ಅಧ್ಯಾಪಕ ಮಂಜಯ್ಯಗೌಡ ವಿರುದ್ಧ ಆಕ್ರೋಶಕನ್ನಡಪ್ರಭ ವಾರ್ತೆ ತುರುವೇಕೆರೆ

ಹೆತ್ತಮ್ಮ ನಾನು, ನನಗೆ ಅನ್ನ ಹಾಕದೇ, ನನ್ನನ್ನು ಮನೆಯಿಂದ ಹೊರಗೆ ಹಾಕಿದ್ದಾನೆ. ನೀನು ತಾಯಿ ಅಲ್ಲ. ನಾಯಿ ಅಂದಿದ್ದಾನೆ. ಕಾಲು ಕತ್ತರಿಸಿ ಹಾಕ್ತೀನಿ, ನೀನು ಯಾವತ್ತು ಸಾಯ್ತಿ, ಎಂದಿದ್ದಾನೆ, ಇಂತಹ ವ್ಯಕ್ತಿ ಕನ್ನಡಮ್ಮನನ್ನು ಹೇಗೆ ಉದ್ದಾರ ಮಾಡ್ತಾನೆ. ಹೆತ್ತಮ್ಮನ ಹೊಟ್ಟೆ ಉರಿಸಿದವನು ವೇದಿಕೆಯಲ್ಲಿ ಏನು ಭೋದನೆ ಮಾಡುತ್ತಾನೆ ಎಂದು ತಾಲೂಕು ದಬ್ಬೇಘಟ್ಟ ಹೋಬಳಿ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿರುವ ವಿಶ್ರಾಂತ ಅಧ್ಯಾಪಕ ಎಲ್.ಮಂಜಯ್ಯಗೌಡ ತಾಯಿ ಸಣ್ಣಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನನ್ನ ಮಗ ಮಂಜಯ್ಯಗೌಡ ನನ್ನನ್ನು ಬೀದಿಗೆ ಹಾಕಿದ್ದಾನೆ. ಮತ್ತೊಬ್ಬ ಮಗ ನನ್ನನ್ನು ನೋಡಿಕೊಳ್ಳದೇ ಹೋಗಿದ್ದರೆ ನಾನು ಕೆರೆ ಕಟ್ಟೆ ಪಾಲು ಆಗಬೇಕಿತ್ತು. ಹೆತ್ತ ತಾಯಿಗೆ ಗೌರವ ನೀಡದ ಅವನು ಕನ್ನಡ ಸಾಹಿತ್ಯ ಪರಿಷತ್ ಸಮ್ಮೇಳನದ ಅಧ್ಯಕ್ಷನಾಗಲು ನಾಲಾಯಕ್. ಆಸ್ತಿ ಹಂಚಿಕೆ ಸಂಬಂಧ ಗ್ರಾಮದ ಹಿರಿಯರು ನನ್ನ ಪಾಲಿಗೆಂದು ಒಂದಿಷ್ಟು ಜಮೀನು ಬಿಡಿಸಿದ್ದರು. ಅದನ್ನೂ ಅವನೇ ತೆಗೆದುಕೊಂಡಿದ್ದಾನೆ ಎಂದರು.

ಪ್ರತಿ ತಿಂಗಳು ೫ ಸಾವಿರ ರು. ಕೊಡಬೇಕೆಂದು ಹಿರಿಯರು ಹೇಳಿದ್ದರು. ಅದನ್ನೂ ಕೊಡುತ್ತಿಲ್ಲ. ಇಂತಹ ಕೀಳು ಸ್ವಭಾವದವನಿಂದ ಜನರು ಏನು ನಿರೀಕ್ಷಿಸಲು ಸಾಧ್ಯ. ಕನ್ನಡ ಉಪನ್ಯಾಸಕನಾಗಿರುವ ಮಂಜಯ್ಯಗೌಡನ ಬಾಯಿಯಲ್ಲಿ ಕೆಟ್ಟ ಶಬ್ದಗಳು ಬರುತ್ತವೆ. ಮೊದಲು ತಾಯಿಗೆ ಗೌರವ ಕೊಡುವುದನ್ನು ಕಲಿಯಲಿ. ನಂತರ ಕನ್ನಡಮ್ಮನಿಗೆ ಗೌರವ ಕೊಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.ದಬ್ಬೇಘಟ್ಟ ಹೋಬಳಿ ಸಮ್ಮೇಳನಾಧ್ಯಕ್ಷನಾಗಿ ಏನು ಸಂದೇಶ ನೀಡಲಿದ್ದಾನೆ. ಇವನಿಗೆ ಯಾವ ನೈತಿಕತೆ ಇದೆ. ನಾಲ್ಕು ಜನರಿಗೆ ಬುದ್ದಿ ಹೇಳಬೇಕಿದ್ದ ಈ ಮನುಷ್ಯ ಹೆತ್ತಮ್ಮನನ್ನು ನಿಕೃಷ್ಟವಾಗಿ ಕಾಣುತ್ತಿದ್ದಾನೆ. ನನಗೆ ಮೋಸ ಮಾಡಿ ಆಸ್ತಿ ಬರೆಸಿಕೊಂಡಿದ್ದಾನೆ. ಎಲ್ಲಾ ಆಸ್ತಿಯೂ ಇವನಿಗೇ ಬೇಕು ಎಂಬ ದುರಾಸೆ ಇದೆ ಎಂದರು