ಸಾರಾಂಶ
ನಮ್ಮಲ್ಲಿ ಶೇ.೬೦ ರಷ್ಟು ಜನರು ತಮ್ಮ ಜೀವನ ಶೈಲಿಯಿಂದಾಗಿ ಮೃತಪಡುತ್ತಿದ್ದು, ಅದರಲ್ಲಿಯೂ ಇತ್ತೀಚಿನ ಜನರು ಸ್ಕ್ರೀನ್ ಎಡಿಕ್ಸನ್ ಮತ್ತು ಒಟ್ಟಿ ತನದಿಂದ ಬಳಲುತ್ತಿದ್ದು, ತಮ್ಮ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.
ಕನ್ನಡಪ್ರಭ ವಾರ್ತೆ ಮಂಗಳೂರು
ಹೃದಯಾಘಾತ ಮತ್ತು ಬ್ರೈನ್ ಸ್ಟ್ರೋಕ್‌ಗೆ ಎಜಿಯೋಪ್ಲಾಸ್ಟ್ ಮತ್ತು ಎಂಜಿಯೋಗ್ರಾಂ ಚಿಕಿತ್ಸೆ ನೀಡುತ್ತಿದ್ದು, ಇದಕ್ಕಿಂದ ಹಬ್ ಆಡ್ ಸ್ಪೋಕ್ ಮಾದರಿ ಚಿಕಿತ್ಸೆ ಉತ್ತಮ ಎಂದು ಸಂಸದ, ಜಯದೇವ್ ಆಸ್ಪತ್ರೆಯ ಕಾಡ್ರಿಯಲಜಿಸ್ಟ್ ಡಾ. ಸಿ.ಎನ್. ಮಂಜುನಾಥ್ ಹೇಳಿದರು.ಅವರು ಶನಿವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ‘ಸ್ಪೆಕ್ಟ್ರಮ್-೨೦೨೪’ ೧೪ನೇ ಆವೃತ್ತಿಯನ್ನು ಉದ್ಘಾಟಿಸಿ ಮಾತನಾಡಿದರು.
ಜನಸಂಖ್ಯೆಯಲ್ಲಿ ಶೇ.೩೦ ರಷ್ಟು ಜನರು ಹೃದಯಾಘಾತದಿಂದ ಮತ್ತು ಬ್ರೈನ್ ಸ್ಟ್ರೋಕ್‌ನಿಂದ ೪೫ ವರ್ಷದ ಕೆಳಗಿನ ಜನರು ಮೃತಪಡುತ್ತಿದ್ದು, ಇದರಲ್ಲಿಯೂ ನಗರ ಪ್ರದೇಶದಲ್ಲಿ ಶೇ.೧೫ ರಷ್ಟು ಮಂದಿ ಮೃತಪಟ್ಟರೆ, ಗ್ರಾಮೀಣ ಪ್ರದೇಶದಲ್ಲಿ ಶೇ.೨೨ ರಷ್ಟು ಜನರು ಮೃತಪಡುತ್ತಿದ್ದಾರೆ. ಅದನ್ನು ನಿವಾರಿಸುವ ನಿಟ್ಟಿನಲ್ಲಿ ೨ ವರ್ಷಗಳ ಹಿಂದೆ ೪೫ ತಾಲೂಕು ಆಸ್ಪತ್ರೆಗಳಲ್ಲಿ ಹಬ್ ಆಡ್ ಸ್ಪೋಕ್ ಮಾದರಿ ಚಿಕಿತ್ಸೆಯನ್ನು ತೆರೆದಿದ್ದು, ಈ ವರ್ಷ ೯೦ಕ್ಕೆ ಏರಿಸಲು ಯೋಜನೆ ರೂಪುಗೊಂಡಿದ್ದು, ಇದರ ಅಡಿಯಲ್ಲಿ ೮ ಜಿಲ್ಲೆಗಳು ಬರಲಿವೆ ಎಂದರು.ನಮ್ಮಲ್ಲಿ ಶೇ.೬೦ ರಷ್ಟು ಜನರು ತಮ್ಮ ಜೀವನ ಶೈಲಿಯಿಂದಾಗಿ ಮೃತಪಡುತ್ತಿದ್ದು, ಅದರಲ್ಲಿಯೂ ಇತ್ತೀಚಿನ ಜನರು ಸ್ಕ್ರೀನ್ ಎಡಿಕ್ಸನ್ ಮತ್ತು ಒಟ್ಟಿ ತನದಿಂದ ಬಳಲುತ್ತಿದ್ದು, ತಮ್ಮ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.ಆಯುಷ್ಮಾನ್ ಭಾರತ್ ಯೋಜನೆಯಡಿ ನಮ್ಮ ದೇಶದಲ್ಲಿ ೬೦ ಕೋಟಿ ಜನರು ತಮ್ಮ ಹೆಸರನ್ನು ನೊಂದಾಯಿಸಿಕೊಂಡಿದ್ದು, ೭ ಕೋಟಿ ಜನರು ಇದರ ಪ್ರಯೋಜನವನ್ನು ಪಡೆಯುತ್ತಿದ್ದಾರೆ. ಈ ಯೋಜನೆಯನ್ನು ಪಡೆಯಲು ಆಸ್ಪತ್ರೆಗೆ ಬರುವ ಫಲಾನುಭವಿಗಳು ಎಲ್ಲಾ ರೀತಿಯಲ್ಲಿಯೂ ಚಿಕಿತ್ಸೆ ಉಚಿತವಾಗಿ ಸಿಗುತ್ತದೆ ಎಂದು ಭಾವಿಸಿ ಬರುತ್ತಾರೆ ಆದರೆ ಅಲ್ಲಿಯ ಕೆಲವೊಂದು ನಿಯಮಗಳನ್ನು ಕೇಳಿ ಬೇಸರಗೊಳ್ಳುತ್ತಾರೆ. ಸರ್ಕಾರ ಇದರ ನಿಯಮಗಳನ್ನು ಸಡಿಲಗೊಳಿಸಿ, ಈಗ ನೀಡುತ್ತಿರು ಅನುದಾನಕ್ಕಿಂತ ಹೆಚ್ಚಿನ ಅನುದಾನವನ್ನು ಕೋಂದ್ರ ಮತ್ತು ರಾಜ್ಯ ಸರ್ಕಾರ ಬಿಡುಗಡೆಗೊಳಿಸಬೇಕು ಎಂದು ಅವರು ಹೇಳಿದರು.ಡಾ. ಪ್ರಶಾಂತ್ ಮಾರ್ಲಾ ಹಾಗೂ ಡಾ. ಎ.ಜೆ. ಶೆಟ್ಟಿ ಮಾತನಾಡಿದರು. ಡಾ. ಬಿ.ವಿ. ಮಂಜುನಾಥ್ ಸ್ವಾಗತಿಸಿ, ಡಾ. ಪ್ರೀತಂ ಆಳ್ವ ವಂದಿಸಿದರು.ಕ್ಲಿನಿಕಲ್ ಮೆಡಿಸಿನ್ ಮರೆಯಾಗುತ್ತದೆಕ್ಲೀನಿಕಲ್ ಮೆಡಿಸಿನ್‌ನಲ್ಲಿ ಈಗ ತಂತ್ರಜ್ಞಾನ ಬೆಳೆದಂತೆ ಆನ್‌ಲೈನ್ ಮೂಲಕ ಚಿಕಿತ್ಸೆ ನೀಡಲು ಪ್ರಾರಂಭವಾಗಿದ್ದು, ಈ ಬೆಳವಣಿಗೆ ಒಳ್ಳೆಯದಲ್ಲ. ಯಾವಾಗಲೂ ನಾವು ರೋಗಿಯನ್ನು ಅರಿತು ಯಾವರೀತಿ ಚಿಕಿತ್ಸೆ ನೀಡಬೇಕು ಎಂದು ನಿರ್ದರಿಸಬೇಕು ಎಂದು ಡಾ. ಸಿ.ಎನ್. ಮಂಜುನಾಥ್ ಹೇಳಿದರು.೨೦೩೦ಕ್ಕೆ ವೈದ್ಯಕೀಯ ಕ್ಷೇತ್ರದಲ್ಲಿ ಉದ್ಯೋಗ ಕ್ಷಾಮ:ಈಗಾಗಲೇ ದೇಶದಲ್ಲಿ ೭೧೨ ಮೆಡಿಲಕ್ ಕಾಲೇಜುಗಳಿಂದ ಲಕ್ಷಾಂತರ ವೈದ್ಯರು ಪದವಿ ಪಡೆದು ಹೊರಬರುತ್ತಿದ್ದು, ಈಗಾಗಲೇ ೧೬ ಲಕ್ಷ ಅಲೋಕತಿ ಹಾಗೂ ೫ ಲಕ್ಷ ಆಯುರ್ವೇದ ಕ್ಷೇತ್ರದಲ್ಲಿ ವೈದ್ಯರು ಕಾರ್ಯ ನಿರ್ವಹಿಸುತ್ತಿದ್ದು, ೨೦೩೦ಕ್ಕೆ ವೈದ್ಯಕೀಯ ಪದವಿ ಪಡೆದವರು ಹೆಚ್ಚಾಗಿ ವೈದ್ಯಕೀಯ ಕ್ಷೇತ್ರದಲ್ಲಿ ಉದ್ಯೋಗಕ್ಕೆ ಕ್ಷಾಮ ಬರಲಿದೆ ಎಂದು ಡಾ. ಸಿ.ಎನ್. ಮಂಜುನಾಥ್ ಹೇಳಿದರು.