ಅಂಜಲಿ ಹತ್ಯೆ: ಆರೋಪಿಗೆ ಎನ್ಕೌಂಟರ್ ಮಾಡಲು ಒತ್ತಾಯ

| Published : May 20 2024, 01:34 AM IST

ಅಂಜಲಿ ಹತ್ಯೆ: ಆರೋಪಿಗೆ ಎನ್ಕೌಂಟರ್ ಮಾಡಲು ಒತ್ತಾಯ
Share this Article
  • FB
  • TW
  • Linkdin
  • Email

ಸಾರಾಂಶ

ಟೋಕರೆ ಕೋಲಿ ಸಮಾಜ ಸಂಘದ ಜಿಲ್ಲಾಧ್ಯಕ್ಷ ಜಗನ್ನಾಥ ಜಮಾದಾರ್ ಹಾಗೂ ಅಂಬಿಗರ ಚೌಡಯ್ಯ ಯುವ ಸೇನೆ ಸಂಸ್ಥಾಪಕ ಅಧ್ಯಕ್ಷ ಸುನೀಲ ಭಾವಿಕಟ್ಟಿ ಮುಖ್ಯಮಂತ್ರಿಗೆ ಬರೆದ ಮನವಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಬೀದರ್‌

ಹುಬ್ಬಳ್ಳಿಯ ವಿರಾಪೂರ್ ಓಣೆಯ ನಿವಾಸಿ ಅಂಜಲಿ ಅಂಬಿಗೇರ್ ಅವರನ್ನು ಹತ್ಯೆಗೈದ ಆರೋಪಿಗೆ ಎನ್ಕೌಂಟರ್ ಮಾಡಬೇಕು ಹಾಗೂ ಮೃತಳ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಟೋಕರೆ ಕೋಲಿ ಸಮಾಜ ಸಂಘದ ಜಿಲ್ಲಾಧ್ಯಕ್ಷ ಜಗನ್ನಾಥ ಜಮಾದಾರ್ ಹಾಗೂ ಅಂಬಿಗರ ಚೌಡಯ್ಯ ಯುವ ಸೇನೆ ಸಂಸ್ಥಾಪಕ ಅಧ್ಯಕ್ಷ ಸುನೀಲ ಭಾವಿಕಟ್ಟಿ ಮುಖ್ಯಮಂತ್ರಿಗೆ ಬರೆದ ಮನವಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದರು.

ಮನವಿ ಪತ್ರದಲ್ಲಿ, ಹಂತಕ ವಿಶ್ವನಾಥ ಅಲಿಯಾಸ್ ಗೀರಿಶ್ ಸಾವಂತ (21) ಹುಬ್ಬಳ್ಳಿಯ ಎಲ್ಲಾಪೂರ್ ಓಣಿಯ ನಿವಾಸಿಯಾಗಿದ್ದು, ವೀರಾಪೂರ್ ಓಣಿಯ ನಿವಾಸಿಯಾಗಿರುವ ಅಂಜಲಿ ಅಂಬಿಗೇರ್ ಮನೆಗೆ ತೆರಳಿ ಅವಳನ್ನು ಜಾಕುವಿನಿಂದ ಇರಿದು ಕೊಲೆಗೈದಿದ್ದಾನೆ. ಇಂತಹ ಘಟನೆಗಳು ಪದೆ ಪದೆ ನಡೆಯುತ್ತಿರುವುದು ಆತಂಕದ ವಿಷಯವಾಗಿದೆ ಎಂದಿದ್ದಾರೆ.

ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಹದಗೆಟ್ಟು ಹೋಗುತ್ತಿದೆ. ಇತ್ತೀಚೆಗೆ ನೇಹಾ ಹಿರೇಮಠ ಕೊಲೆಯ ಘಟನೆ ಮಾಸುವ ಮುನ್ನವೇ ಮತ್ತೊಂದು ಹೀನಾಯ ಘಟನೆ ನಡೆದಿರುವುದು ದುರಂತದ ಸಂಗತಿಯಾಗಿದೆ. ಸರ್ಕಾರ ಈ ನಿಟ್ಟಿನಲ್ಲಿ ಕಠಿಣ ಕ್ರಮಕ್ಕೆ ಮುಂದಾಗಬೇಕಿದೆ. ಅಲ್ಲದೇ ಕೊಲೆ ಹಂತಕರನ್ನು ಮತ್ತು ಬಲತ್ಕಾರಿಗಳನ್ನು ಎನ್ಕೌಂಟರ್ ಮಾಡಬೇಕೆಂದು ಆಗ್ರಹಿಸಿದರು.

ಮುಂಬರುವ ದಿನಗಳಲ್ಲಿ ಟೋಕರೆ ಕೋಳಿ ಸಮಾಜ ಸಂಘ ಹಾಗೂ ಅಂಬಿಗರ ಚೌಡಯ್ಯ ಯುವ ಸೇನೆಯಿಂದ ಹೋರಾಟ ಮಾಡಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಸಿದ್ದಾರೆ.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಸುನೀಲ ಖಾಶೆಂಪೂರ, ಪ್ರಧಾನ ಕಾರ್ಯದರ್ಶಿ ಪಾಂಡುರಂಗ ಗುರುಜಿ, ಶಿವರಾಜ ಬಂಬುಳಗಿ, ರಮೇಶ ಖಾಸೆಂಪೂರ್, ಶನ್ಮೂಖಪ್ಪಾ ಶೇಕಾಪೂರ್, ಸಿದ್ದು ಖಾಸೆಂಪೂರ್, ಅರುಣಕುಮಾರ ಅರ್ಕಿ, ಲಾಲಪ್ಪಾ ಕೋರಿ, ಕಿರಣ ಕೌಠಾ, ವಿಶ್ವನಾಥ ಕೌಠಾ, ನಾಗೇಶ ವಾಲಿಕಾರ್, ಶ್ರೀಕಾಂತ ಬಸಂತಪೂರೆ ಇತರರು ಇದ್ದರು.