ಹುಬ್ಬಳ್ಳಿಯಿಂದ ಬೆಂಗಳೂರು ಮತ್ತು ಹೈದರಾಬಾದ್‌ಗೆ ತೆರಳುವ ನಾಗರಿಕರಿಗೆ ಅನುಕೂಲ ಆಗುವಂತೆ ವಿಮಾನ ಸೇವೆ ಆರಂಭಿಸಲು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಏರ್‌ಲೈನ್ಸ್ ಅಧಿಕಾರಿಗಳೊಂದಿಗೆ ಚರ್ಚಿಸಿ ಗಮನ ಸೆಳೆದಿದ್ದರು. ಅದರಂತೆ fly91 ಸಂಸ್ಥೆ ಇದೀಗ ಈ ಮಾರ್ಗದಲ್ಲಿ ವಿಮಾನಯಾನಕ್ಕೆ ಅಣಿಯಾಗಿದೆ.
ಹುಬ್ಬಳ್ಳಿ:
ಹುಬ್ಬಳ್ಳಿ-ಬೆಂಗಳೂರು-ಹೈದರಾಬಾದ್ ನಡುವೆ ಏಪ್ರಿಲ್‌ನಿಂದ ಹೊಸ ವಿಮಾನಯಾನ (fly91) ಶುರುವಾಗಲಿದ್ದು ಸಾರ್ವಜನಿಕರಿಗೆ ಅನುಕೂಲವಾಗಲಿದೆ.ಏಪ್ರಿಲ್ 2ನೇ ವಾರದಿಂದಲೇ fly91 ವಿಮಾನ ಸೇವೆ ಆರಂಭವಾಗಲಿದ್ದು, ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸಂಸ್ಥೆ ಕಾರ್ಯಕ್ಕೆ ಸ್ಥಳಾವಕಾಶ ನೀಡಲಾಗಿದ್ದು, ಈಗಾಗಲೇ ವಿಮಾನಯಾನ ಸೇವೆಯ ಅಗತ್ಯ ಕಾರ್ಯ ಚಟುವಟಿಕೆ ಸಹ ಆರಂಭಿಸಿದೆ.
ಹುಬ್ಬಳ್ಳಿಯಿಂದ ಬೆಂಗಳೂರು ಮತ್ತು ಹೈದರಾಬಾದ್‌ಗೆ ತೆರಳುವ ನಾಗರಿಕರಿಗೆ ಅನುಕೂಲ ಆಗುವಂತೆ ವಿಮಾನ ಸೇವೆ ಆರಂಭಿಸಲು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಏರ್‌ಲೈನ್ಸ್ ಅಧಿಕಾರಿಗಳೊಂದಿಗೆ ಚರ್ಚಿಸಿ ಗಮನ ಸೆಳೆದಿದ್ದರು. ಅದರಂತೆ fly91 ಸಂಸ್ಥೆ ಇದೀಗ ಈ ಮಾರ್ಗದಲ್ಲಿ ವಿಮಾನಯಾನಕ್ಕೆ ಅಣಿಯಾಗಿದೆ.fly91 ಸಂಸ್ಥೆ ಹುಬ್ಬಳ್ಳಿ-ಬೆಂಗಳೂರು-ಹೈದರಾಬಾದ್ ಮಧ್ಯೆ ವಿಮಾನ ಹಾರಾಟ ಆರಂಭಿಸಲಿದ್ದು, ನಿತ್ಯ ಈ ಸೇವೆ ಲಭ್ಯವಾಗಲಿದೆ. ಮಧ್ಯಾಹ್ನ 3 ಗಂಟೆಗೆ ಹೈದರಾಬಾದ್ ಬಿಡುವ ವಿಮಾನವು 4.30ಕ್ಕೆ ಹುಬ್ಬಳ್ಳಿ ತಲುಪಲಿದೆ. ಹುಬ್ಬಳ್ಳಿಯಿಂದ 4.55 ಹೊರಟು 6.15ಕ್ಕೆ ಬೆಂಗಳೂರ ತಲುಪಲಿದೆ. ಅಲ್ಲಿಂದ ಸಂಜೆ 6.45ಕ್ಕೆ ಬಿಟ್ಟು ರಾತ್ರಿ 8.15ಕ್ಕೆ ಹುಬ್ಬಳ್ಳಿಗೆ ಆಗಮಿಸಲಿದೆ. ಇಲ್ಲಿಂದ ರಾತ್ರಿ 8.35ಕ್ಕೆ ಹೊರಟು 9.55ಕ್ಕೆ ಹೈದರಾಬಾದ್ ತಲುಪಲಿದೆ ಎಂದು ಸಂಸ್ಥೆಯು ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ತಮ್ಮ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ವಿಮಾನಯಾನ ಆರಂಭಿಸುತ್ತಿರುವುದಕ್ಕೆ ಸಚಿವ ಪ್ರಹ್ಲಾದ ಜೋಶಿ ಅವರು ಧನ್ಯವಾದ ತಿಳಿಸಿದ್ದಾರೆ.