ಸಾರಾಂಶ
ಮಾನ್ವಿ ಪಟ್ಟಣದ ಉದ್ಬವ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಕಾಯಕಯೋಗಿ ಶರಣ ಹೂಗಾರ ಮಾದಯ್ಯರ ಜಯಂತಿ ಕಾರ್ಯಕ್ರಮ ನಡೆಯಿತು.
ಮಾನ್ವಿ: ಪಟ್ಟಣದ ಉದ್ಬವ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಕಾಯಕಯೋಗಿ ಶರಣ ಶ್ರೀ ಹೂಗಾರ ಮಾದಯ್ಯನವರ ಜಯಂತಿ ಹಮ್ಮಿಕೊಳ್ಳಲಾಗಿತ್ತು.
ತಾಲೂಕು ಹೂಗಾರ ಸಮಾಜ, ವೀರಶೈವ ಲಿಂಗಾಯತ ಸಮಾಜ ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಸಂಯುಕ್ತಾಶ್ರಯದಲ್ಲಿ ನಡೆದ ಕಾರ್ಯಕ್ರಮವನ್ನು ಮಹಾಸಭಾ ತಾಲೂಕಾಧ್ಯಕ್ಷ ಅರುಣಕುಮಾರ ಚಂದಾ ಉದ್ಘಾಟಿಸಿ, ಮಾತನಾಡಿದರು. ಈ ವೇಳೆ ಮಾತನಾಡಿ, 12ನೇ ಶತಮಾನದಲ್ಲಿ ಬಸವಣ್ಣನವರ ಅನುಭವ ಮಂಟಪದಲ್ಲಿ ಪ್ರಮುಖ ಶರಣರಾಗಿದ್ದ ಶರಣ ಶ್ರೀ ಹೂಗಾರ ಮಾದಯ್ಯನವರು ಹೂಮಾರುವ ಕಾಯಕದೊಂದಿಗೆ ಅನೇಕ ವಚನ ರಚಿಸಿದ್ದಾರೆ. ಅವರ ತತ್ವಗಳನ್ನು ಪ್ರತಿಯೊಬ್ಬರು ಪಾಲಿಸಬೇಕಾಗಿದೆ ಎಂದು ತಿಳಿಸಿದರು.ಸಮಾಜದ ಹರಿಹರ ಪಾಟೀಲ್, ಬಸವರಾಜ ಹೂಗಾರ್ ಹರವಿ, ಶರಣಪ್ಪ ಹೂಗಾರ್, ಸಂತೋಷ ಹೂಗಾರ್, ವಿರುಪಾಕ್ಷಿ ಹೂಗಾರ್, ಶಿವಕುಮಾರ ಹೂಗಾರ್, ಪ್ರಕಾಶ ಹೂಗಾರ್, ಪರಣ್ಣ ಹೂಗಾರ್, ಸುರೇಶ ಹೂಗಾರ್, ಶಿವಕುಮಾರ, ವಿಜಯಕುಮಾರ ಸ್ವಾಮಿ ಸಂಕೇಶ್ವರ ಸೇರಿದಂತೆ ಇನ್ನಿತರರು ಇದ್ದರು.