ಸಾರಾಂಶ
ಸಿ.ಎ. ಇಟ್ನಾಳಮಠ
ಕನ್ನಡಪ್ರಭ ವಾರ್ತೆ ಅಥಣಿಸರಕಾರಿ ಹಾಗೂ ಅನುದಾನಿತ ಶಾಕೆಯ 1 ರಿಂದ 10ನೇ ತರಗತಿಯ ಮಕ್ಕಳಿಗೆ ಸರ್ಕಾರ ಉಚಿತವಾಗಿ ಪಠ್ಯಪುಸ್ತಕ ಪೂರೈಸುತ್ತದೆ. ಆದರೆ, ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಶಾಲಾ ಮುಖ್ಯಶಿಕ್ಷಕರು ಸೇರಿ ಈ ಯೋಜನೆಯಲ್ಲೂ ಗೋಲ್ ಮಾಲ್ ಮಾಡುತ್ತಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.ಸದ್ಯ ಇದು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಅಥಣಿ ತಾಲೂಕು ವ್ಯಾಪ್ತಿಯಲ್ಲಿ ಇಂತಹ ಅವ್ಯವಹಾರ ನಡೆದಿರುವುದು ಬೆಳಕಿದೆ ಬಂದಿದ್ದು, ರಾಜ್ಯವ್ಯಾಪಿ ಇಂತಹುದೇ ಅವ್ಯವಹಾರ ನಡೆದಿರುವ ಆರೋಪಗಳು ಕೇಳಿಬರುತ್ತಿವೆ.
ಗೋಲ್ ಮಾಲ್ ನಡೆದಿದ್ದು ಹೇಗೆ ?ಪ್ರತಿವರ್ಷ ರಾಜ್ಯದ ಸರಕಾರಿ ಹಾಗೂ ಅನುದಾನಿಕ 1 ರಿಂದ 10 ತರಗತಿ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರದಿಂದಲೇ ಉಚಿತವಾಗಿ ಪಠ್ಯ ಪುಸ್ತಕಗಳನ್ನು ಪೊರೈಕೆ ಮಾಡಲಾಗುತ್ತದೆ. ಶಾಲೆಗಳು ಹಾಜರಾತಿ ಆಧಾರದ ಮೇಲೆ ಇಲಾಖೆಗೆ ಪಠ್ಯಪುಸ್ತಕ ಬೇಡಿಕೆಯ ವರದಿ ಸಲ್ಲಿಸುತ್ತವೆ. ಶಾಲೆಗಳು ನೀಡಿರುವ ದಾಖಲೆಗಳ ಪ್ರಕಾರ ಶೇ,100ರಷ್ಟು ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ ಪೂರೈಕೆ ಮಾಡಲಾಗಿದೆ. ಆದರೆ, ಶಾಲಾ ಹಂತದಲ್ಲಿ ವಿಚಾರಣೆ ನಡೆಸಿದಾಗ ಅನೇಕ ವಿದ್ಯಾರ್ಥಿಗಳಿಗೆ ಸರಕಾರದ ಉಚಿತ ಪುಠ್ಯ ಪುಸ್ತಕಗಳು ಪೂರೈಕೆ ಆಗಿಲ್ಲ. ಪ್ರವೇಶ ಪಡೆದು ವಲಸೆ ಮತ್ಯಾವುದೋ ಕಾರಣಕ್ಕೆ ತರಗತಿಗೆ ಹಾಜರಾಗದಿರುವುದು, ಅಥವಾ ಪ್ರವೇಶ ಪಡೆದು ತಡವಾಗಿ ತರಗತಿಗೆ ಹಾಜರಾದ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ ಪೂರೈಕೆ ಮಾಡಿಲ್ಲ. ಇಂತಹ ಮಕ್ಕಳು ಪಠ್ಯಪುಸ್ತಕಗಳಿಂದ ವಂಚಿತರಾಗಿದ್ದಾರೆ. ಇಂತಹ ಅನೇಕ ದೂರುಗಳು ಇಲಾಖೆಗೆ ಸಲ್ಲಿಕೆಯಾಗಿವೆ.
ಇಲಾಖೆಗೆ ಮರಳಿಸದೇ ಪಠ್ಯಪುಸ್ತಕ ಮಾರಾಟ:ಸರಕಾರ ನಿಯಮದ ಪ್ರಕಾರ ಸರಕಾರಿ ಹಾಗೂ ಅನುದಾನಿತ ಶಾಲೆ ಮಕ್ಕಳಿಗೆ ಸರ್ಕಾರವೇ ಉಚಿತವಾಗಿ ಪಠ್ಯಪುರಸ್ತಕ ವಿತರಿಸುತ್ತದೆ. ಅನುದಾನ ರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ವಿದ್ಯಾರ್ಥಿಗಳಿಗೆ ಪುಸ್ತಕದ ಮುಖಬೆಲೆಯಂತೆ ಮಾರಾಟ ಮಾಡಿ ಆ ಹಣವನ್ನು ಸರಕಾರಕ್ಕೆ ಕಟ್ಟಲಾಗುತ್ತದೆ. ಆಯಾ ಶಾಲೆಗಳ ಮುಖ್ಯಶಿಕ್ಷಕರು ಪ್ರವೇಶ ಪಡೆದ ಎಲ್ಲ ಮಕ್ಕಳ ಹೆಸರಿನಲ್ಲಿ ಪಠ್ಯಪುಸ್ತಕ ಬೇಡಿಕೆ ಸಲ್ಲಿಸಿ ಪುಸ್ತಕ ತರಿಸಿಕೊಳ್ಳುತ್ತಾರೆ. ಆದರೆ, ಅನೇಕ ಕಾರಣಗಳಿಂದ ಹಾಜರಾತಿ ಪಡೆದ ಎಲ್ಲ ಮಕ್ಕಳು ಸಮಯಕ್ಕೆ ಸರಿಯಾಗಿ ತರಗತಿಗಳಿಗೆ ಹಾಜರಾಗುವುದಿಲ್ಲ. ಅಂತಹ ಮಕ್ಕಳ ಪಠ್ಯಪುಸ್ತಕಗಳು ಉಳಿದುಕೊಳ್ಳುತ್ತವೆ. ಹೀಗೆ ಉಳಿದ ಪುಸ್ತಕಗಳನ್ನು ಇಲಾಖೆಗೆ ಮರಳಿಸಬೇಕು. ಆದರೆ, ಎಲ್ಲ ಶಾಲೆಗಳ ದಾಖಲಾತಿ ಪರಿಶೀಲಿಸಿದರೆ ಶೇ.100ರಷ್ಟು ಪುಸ್ತಕ ಪೂರೈಕೆ ಆಗಿರುವುದನ್ನು ತೋರಿಸಲಾಗಿದೆ. ಅಸಲಿಯಾಗಿ ಯಾವುದೇ ಶಾಲೆಯಲ್ಲಿ ಶೇ.100ರಷ್ಟು ವಿದ್ಯಾರ್ಥಿಗಳಿಗೆ ಪಠ್ಯಪುರಸ್ತಕ ವಿತರಣೆ ಆಗಿಲ್ಲ. ಹೀಗೆ ಉಳಿಯುವ ಪುಸ್ತಕಗಳನ್ನು ಅನುದಾನ ರಹಿತ ಶಾಲಾ ಮಕ್ಕಳಿಗೆ ಅಕ್ರಮವಾಗಿ ಮಾರಾಟ ಮಾಡಿರುವುದು ಕಂಡುಬಂದಿದೆ. ಜೊತೆಗೆ ಇವುಗಳ ಸಾಗಾಣಿಕೆ ವೆಚ್ಚದಲ್ಲೂ ಗೋಲ್‌ಮಾಲ್ ನಡೆದಿರುವುದು ಬೆಳಕಿಗೆ ಬಂದಿದ್ದು, ಈ ಕುರಿತಾಗಿ ಶಿಕ್ಷಣ ಇಲಾಖೆಗೆ ಅನೇಕ ದೂರುಗಳು ಬಂದಿದ್ದು, ಉಪನಿರ್ದೇಶಕರು ಅವ್ಯವಹಾರ ಪತ್ತೆಗೆ ತನಿಖಾ ತಂಡ ರಚಿಸಿ ವರದಿ ಸಲ್ಲಿಸುವಂತೆ ಸೂಚನೆ ನೀಡಿದ್ದಾರೆ.
ಖಾಸಗಿ ಅನುದಾನಿತ ಶಾಲೆಯಲ್ಲಿ ಸುಮಾರು 1000 ವಿದ್ಯಾರ್ಥಿಗಳಿಗೆ ಪುಸ್ತಕ ಬೇಡಿಕೆ ಇದ್ದರೆ. ಕೆವಲ 500 ವಿದ್ಯಾರ್ಥಿಗಳಿಂದ ಬೇಡಿಕೆ ಪತ್ರ ಪಡೆದು ಇನ್ನುಳಿದವುಗಳನ್ನು ದಾಖಲೆ ರಹಿತವಾಗಿ ಮಾರಾಟ ಮಾಡಿ ಹಣ ಲಪಟಾಯಸಿರುವ ಆರೋಪ ಕೇಳಿಬಂದಿದೆ. ಈ ಅವ್ಯವಹಾರ ಕಳೆದ 5 ವರ್ಷಗಳಿಂದಲೂ ನಡೆಯುತ್ತಲಿದ್ದು, ಈಗ ಈ ಕುರಿತು ದೂರುಗಳು ಬರುತ್ತಿರುವ ಹಿನ್ನೆಲೆ ಶಿಕ್ಷಣ ಇಲಾಖೆ ಉಪನಿರ್ದೇಶಕರು ತನಿಖೆಗೆ ಆದೇಶಿಸಿದ್ದಾರೆ.ಸಾಗಾಣಿಕೆ ವೆಚ್ಚದಲ್ಲೂ ಗೋಲಮಾಲ್
ಸರಕಾರಿ ಶಾಲೆಗಳಿಗೆ ಮತ್ತು ಅನುದಾನಿತ ಖಾಸಗಿ ಶಾಲೆಗಳಿಗೆ ಉಚಿತ ಪುಸ್ತಕವನ್ನು ಶಿಕ್ಷಣ ಇಲಾಖೆ ಆಯಾ ಶಾಲೆಗಳಿಗೆ ಸಾರಿಗೆ ಮೂಲಕ ತಲುಪಿಸಬೇಕು. ಆದರೆ, ಇದರ ಬದಲಾಗಿ ಶಿಕ್ಷಕರೇ ತಾಲೂಕು ಕಚೇರಿಗೆ ಬಂದು ಸ್ವಂತ ಹಣ ಖರ್ಚಿನಲ್ಲಿ ಪುಸ್ತಕ ತಗೆದುಕೊಂಡು ಹೋಗಿ ತಮ್ಮ ಶಾಲೆಗಳ ಮಕ್ಕಳಿಗೆ ಪುಸ್ತಕ ವಿತರಿಸಿದ್ದಾರೆ. ಆದರೆ, ಶಿಕ್ಷಣ ಇಲಾಖೆ ಅಧಿಕಾರಿಗಳು ಸಾಗಣಿಕೆ ವೆಚ್ಚವನ್ನು (ಟ್ರಾನ್ಸ್‌ಪೋರ್ಟ್ ಚಾರ್ಜ್) ಹಾಕಿ ನಕಲಿ ಬಿಲ್ ಸೃಷ್ಟಿಸಿ ಹಣ ಲಪಟಾಯಿಸುತ್ತಿರುವುದು ಬೆಳಕಿಗೆ ಬಂದಿದೆ.ಪುಸ್ತಕ ಸಾಗಿಸಲು ಗಡಿಬಿಡಿ: ಪುಸ್ತಕ ವಿತರಣೆಯಲ್ಲಿ ನಡೆದಿರುವ ಅವ್ಯವಹಾರದ ತನಿಖೆಗೆ ಡಿಡಿಪಿಐ ತಂಡ ರಚನೆ ಮಾಡಿ ಅವ್ಯವಹಾರ ಪತ್ತೆಗೆ ಆದೇಶ ನೀಡಿರುವ ಸುದ್ದಿ ತಾಲೂಕಿನಾದ್ಯಂತ ಹಬ್ಬಿ ಅನೇಕ ಶಾಲೆಗಳ ಶಿಕ್ಷಕರು ಲಗುಬಗೆಯಿಂದ ಮಾರಾಟಕ್ಕೆಂದು ಉಳಿಸಿಕೊಂಡ ಪುಸ್ತಕಗಳನ್ನು ಸಂಗ್ರಹಿಸಿಟ್ಟುಕೊಂಡ ಕೋಣೆಗಳಿಂದ ರಾತ್ರಿ ವೇಳೆ ಸಾಗಾಟ ಮಾಡುತ್ತಿರುವುದು ನಮ್ಮ ಪ್ರತಿನಿಧಿ ಹಲವು ಶಾಲೆಗಳಿಗೆ ಭೇಟಿ ನೀಡಿದ ವೇಳೆ ಗಮನಕ್ಕೆ ಬಂದಿದೆ.ನಾನು ಅಧಿಕಾರ ವಹಿಸಿಕೊಂಡು 1 ತಿಂಗಳಾಗಿದೆ. ಪುಠ್ಯಪುಸ್ತಕ ವಿತರಣೆಯಲ್ಲಿ ಅವ್ಯವಹಾರ ನಡೆದಿವ ಬಗ್ಗೆ ದಾಖಲೆ ಸಹಿತ ದೂರು ಬಂದಿವೆ.ಈ ಕುರಿತು ಕೆಲವು ದಾಖಲೆಗಳು ಲಭ್ಯವಾಗಿವೆ. ಪ್ರಕರಣದ ತನಿಖೆ ನಡೆಸಲು ತನಿಖಾ ತಂಡ ನೇಮಿಸಿದ್ದೇನೆ. ಸಮಗ್ರ ವರದಿ ತರಿಸಿಕೊಂಡು ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು.
- ಸೀತಾರಾಮ ಡಿಡಿಪಿಐ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಪುಠ್ಯಪುಸ್ತಕ ಅಕ್ರಮ ಮಾರಾಟ ಕೇವಲ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗೆ ಸೀಮಿತವಾಗಿಲ್ಲ ಇಡೀ ರಾಜ್ಯ ವ್ಯಾಪಿ ಈ ಹಗರಣ ನಡೆದಿದೆ. ಇದರ ಬಗ್ಗೆ ಸಿಒಡಿ ಇಲ್ಲವೆ ಸಿಬಿಐ ತನಿಖೆ ನಡೆಸಬೇಕು. ಇಲ್ಲವಾದರೆ ಶಿಕ್ಷಣ ಇಲಾಖೆ ಕಚೇರಿಗಳಿಗೆ ಬೀಗ ಜಡಿದು ಕರವೇ ಉಗ್ರ ಹೋರಾಟ ಮಾಡಲಿದೆ.-ಜಗನಾಥ ಭಾಮನೆ ಕರವೇ ಜಿಲ್ಲಾ ಕಾರ್ಯದರ್ಶಿ