ಹಿಂದೂ ಸಮ್ಮೇಳನ ಅಂಗವಾಗಿ ಜ. 10ರಂದು ಮಧ್ಯಾಹ್ನ 3 ಗಂಟೆಗೆ ಭಾರತಮಾತೆಯ ಭಾವಚಿತ್ರ ಹಾಗೂ ಸ್ತಬ್ಧಚಿತ್ರಗಳ ಭವ್ಯ ಶೋಭಾಯಾತ್ರೆ ಜರುಗಲಿದೆ.

ಮುಂಡರಗಿ: ಹಿಂದು ಸಮಾಜದ ವಿವಿಧ ಪಂಗಡಗಳನ್ನು ಒಗ್ಗೂಡಿಸಿ ಸಂಘಟಿತಗೊಳಿಸುವುದು ಹಾಗೂ ಸಮಾಜ ಪರಿವರ್ತನೆಗಾಗಿ ಜ.10ರಂದು ಪಟ್ಟಣದಲ್ಲಿ ಬೃಹತ್ ಹಿಂದೂ ಸಮ್ಮೇಳನ ಆಯೋಜಿಸಲಾಗಿದೆ ಎಂದು ಹಿಂದೂ ಸಮ್ಮೇಳನ ಸಮಿತಿ ಅಧ್ಯಕ್ಷ ಶ್ರೀನಿವಾಸ ಉಪ್ಪಿನಬೆಟಗೇರಿ ತಿಳಿಸಿದರು.ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಿಂದೂ ಸಮ್ಮೇಳನ ಅಂಗವಾಗಿ ಜ. 10ರಂದು ಮಧ್ಯಾಹ್ನ 3 ಗಂಟೆಗೆ ಭಾರತಮಾತೆಯ ಭಾವಚಿತ್ರ ಹಾಗೂ ಸ್ತಬ್ಧಚಿತ್ರಗಳ ಭವ್ಯ ಶೋಭಾಯಾತ್ರೆ ಜರುಗಲಿದೆ. ಪಟ್ಟಣದ ಕೋಟೆ ಆಂಜನೇಯ ದೇವಸ್ಥಾನದಿಂದ ಹೊರಡಲಿದೆ. ಡಾ. ಅನ್ನದಾನೀಶ್ವರ ಸ್ವಾಮೀಜಿ ಶೋಭಾಯಾತ್ರೆ ಉದ್ಘಾಟಿಸುವರು. ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ನಂದಿಕೋಲು ಸಮ್ಮಾಳ, ಭಜನೆ, ಲಂಬಾಣಿ ಮೇಳ ಸೇರಿದಂತೆ ವಿವಿಧ ದೇಶಿ ಜನಪದ ಮೇಳಗಳು ಭಾಗವಹಿಸಲಿವೆ.

ನಂತರ ಸಂಜೆ 6 ಗಂಟೆಗೆ ಜ.ಅ. ವಿದ್ಯಾ ಸಮಿತಿಯ ಕಾಲೇಜು ಮೈದಾನದಲ್ಲಿ ಸಾರ್ವಜನಿಕ ಕಾರ್ಯಕ್ರಮ ನಡೆಯಲಿದೆ. ಸಾರ್ವಜನಿಕ ಕಾರ್ಯಕ್ರಮದ ಸಾನ್ನಿಧ್ಯವನ್ನು ಶ್ರೀಮಠದ ಉತ್ತರಾಧಿಕಾರಿ ಡಾ. ಮಲ್ಲಿಕಾರ್ಜುನ ಸ್ವಾಮೀಜಿ ವಹಿಸುವರು. ಕರ್ನಾಟಕ ಉತ್ತರ ಮತ್ತು ದಕ್ಷಿಣ ಪ್ರಾಂತ ಪ್ರಚಾರ ಪ್ರಮುಖ ಅರುಣಕುಮಾರ ಜೀ ದಿಕ್ಸೂಚಿ ಭಾಷಣ ಮಾಡಲಿದ್ದಾರೆ ಎಂದರು.ಸಂಘದ ಪ್ರಮುಖರಾದ ಎಸ್.ಆರ್. ರಿತ್ತಿ, ಆನಂದಗೌಡ ಪಾಟೀಲ, ಡಾ. ಕುಮಾರಸ್ವಾಮಿ ಹಿರೇಮಠ ಮಾತನಾಡಿ, ಸಂಘ ಶತಾಬ್ದಿ ನಿಮಿತ್ತ ಈ ಹಿಂದೂ ಸಮ್ಮೇಳನ ಮೂಲಕ ಹಿಂದು ನಾಗರಿಕತೆ ಸಂಸ್ಕೃತಿ ಬಗ್ಗೆ ಅರಿವು ಮೂಡಿಸುವುದು ಇದರ ಉದ್ದೇಶ. ಜಾತಿ, ಮತ, ಪಂಥಗಳಿಂದ ದೂರವಾಗಿರುವವರನ್ನು ಒಗ್ಗೂಡಿಸಿ ಸಂಘಟಿತ ಹಾಗೂ ಸಶಕ್ತ ಅಖಂಡ ಹಿಂದೂ ಸಮಾಜ ಕಟ್ಟಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆದ್ದರಿಂದ ಕಾರ್ಯಕ್ರಮದ ಯಶಸ್ವಿಗೆ ಹಿಂದುಗಳು ಸಂಘಟಿತರಾಗಿ ಭಾಗವಹಿಸಬೇಕು ಎಂದರು.

ಸುದ್ದಿಗೋಷ್ಠಿಯಲ್ಲಿ ಶಿವಪ್ಪ ಚಿಕ್ಕಣ್ಣನವರ, ಮಂಜುನಾಥ ಇಟಗಿ, ಶ್ರೀನಿವಾಸ ಕಟ್ಟಿಮನಿ, ಅಜ್ಜಪ್ಪ ಲಿಂಬಿಕಾಯಿ, ಅನಂತ ಚಿತ್ರಗಾರ, ರವಿ ಲಮಾಣಿ, ದುರರ್ಗೋಜಿ ಗಣಚಾರಿ, ಶ್ರೀನಿವಾಸ ಅಬ್ಬಿಗೇರಿ, ಅವಿನಾಶ ಗೋಟಕಿಂಡಿ, ಜಗದೀಶ ಸೋನಿ, ವೀರಣ್ಣ ತುಪ್ಪದ, ಯಲ್ಲಪ್ಪ ಗಣಚಾರಿ, ಈಶ್ವರಪ್ಪ ಕವಲೂರ, ಭರಮಗೌಡ ನಾಡಗೌಡ, ಎನ್.ವಿ. ಹಿರೇಮಠ, ಸಂಜೀವ ಲದ್ದಿ, ಅಶೋಕ ಹಂದ್ರಾಳ, ಗುರುರಾಜ ಜೋಶಿ, ಈರಣ್ಣ ಗಡಾದ, ಪ್ರಕಾಶ ಕುಂಬಾರ, ದೇವಪ್ಪ ರಾಮೇನಹಳ್ಳಿ, ನಾಗರಾಜ ಕೊರ್ಲಹಳ್ಳಿ, ನಾಗರಾಜ ಹೊಸಮನಿ, ಸಂತೋಷ ಬಳ್ಳೊಳ್ಳಿ, ಶರಣಪ್ಪ ಕಲ್ಲೂರ, ಪಾಂಡುರಂಗ ಮುಖ್ಯೆ, ಸಿದ್ದು ದೇಸಾಯಿ, ಶರಣಪ್ಪ ಬೆಲ್ಲದ, ಪ್ರಕಾಶ ಪಾಟೀಲ, ಪವನ ಮೇಟಿ, ಮಾರುತಿ ಗಾಳಿ, ಸೋಮಶೇಖರ ಬಡಿಗೇರ, ಕಾಳಪ್ಪ ಕಮ್ಮಾರ, ಹನುಮಂತ ದೊಡ್ಡಮನಿ ಉಪಸ್ಥಿತರಿದ್ದರು.