ಹಿಂದೂ ಸಮ್ಮೇಳನ ಸಂಚಾಲನಾ ಸಮಿತಿ ಬಸವೇಶ್ವರ ಭಾಗದಿಂದ ಜ.24ರಂದು ನಗರದಲ್ಲಿ ಭವ್ಯ ಶೋಭಾಯಾತ್ರೆ ಹಾಗೂ ಬೃಹತ್ ಹಿಂದೂ ಸಮ್ಮೇಳನ ಕಾರ್ಯಕ್ರಮ ನಡೆಯಲಿದೆ ಎಂದು ಹಿಂದೂ ಸಮ್ಮೇಳನ ಸಂಚಾಲನಾ ಸಮಿತಿ ಅಧ್ಯಕ್ಷ ಸುರೇಶ ದೇಸಾಯಿ ಹೇಳಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ಹಿಂದೂ ಸಮ್ಮೇಳನ ಸಂಚಾಲನಾ ಸಮಿತಿ ಬಸವೇಶ್ವರ ಭಾಗದಿಂದ ಜ.24ರಂದು ನಗರದಲ್ಲಿ ಭವ್ಯ ಶೋಭಾಯಾತ್ರೆ ಹಾಗೂ ಬೃಹತ್ ಹಿಂದೂ ಸಮ್ಮೇಳನ ಕಾರ್ಯಕ್ರಮ ನಡೆಯಲಿದೆ ಎಂದು ಹಿಂದೂ ಸಮ್ಮೇಳನ ಸಂಚಾಲನಾ ಸಮಿತಿ ಅಧ್ಯಕ್ಷ ಸುರೇಶ ದೇಸಾಯಿ ಹೇಳಿದರು.ನಗರದ ಶ್ರೀ ಹೇಮರೆಡ್ಡಿ ಕಲ್ಯಾಣ ಮಂಟಪದ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜ.24ರಂದು ಮಧ್ಯಾಹ್ನ 3ಕ್ಕೆ ನಗರದ ಮುರಾಣಕೇರಿ ಶ್ರೀ ಈಶ್ವರಲಿಂಗ ದೇವಸ್ಥಾನದಿಂದ ಆರಂಭವಾಗಿ ಶ್ರೀ ಹೇಮರೆಡ್ಡಿ ಕಲ್ಯಾಣ ಮಂಟಪದ ಹಿಂಬದಿಯಲ್ಲಿರುವ ಬಿಡಿಎ ಮೈದಾನಕ್ಕೆ ಆಗಮಿಸಲಿದೆ. ಬಳಿಕ ಸಂಜೆ 5.30ಕ್ಕೆ ಅಲ್ಲಿಯೇ ಬೃಹತ್ ಹಿಂದೂ ಸಮ್ಮೇಳನ ನಡೆಯಲಿದೆ. ದಿವ್ಯ ಸಾನ್ನಿಧ್ಯವನ್ನು ಆಲಮೇಲದ ಶ್ರೀ ಗುರು ಸಂಸ್ಥಾನಮಠದ ಚಂದ್ರಶೇಖರ ಶಿವಾಚಾರ್ಯರು, ಕನ್ನೂರ ಶಾಂತಿ ಕುಟೀರದ ಸಾಧಕರಾದ ಶ್ರೀಕೃಷ್ಣ, ಬುರಣಾಪುರ ಆರೂಢಾಶ್ರಮದ ಯೋಗೇಶ್ವರಿ ಮಾತಾಜಿ ಹಾಗೂ ಕೆಸರಟ್ಟಿ ಶಂಕರಲಿಂಗ ಗುರುಪೀಠದ ಶ್ರೀ ಸೋಮಲಿಂಗ ಮಹಾಸ್ವಾಮೀಜಿ ವಹಿಸಲಿದ್ದಾರೆ. ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಸಂಸ್ಥೆ ಅಧ್ಯಕ್ಷ ಸುರೇಶ ದೇಸಾಯಿ ಅಧ್ಯಕ್ಷತೆ ವಹಿಸಲಿದ್ದಾರೆ. ಧರ್ಮ ಜಾಗರಣಾ ಪ್ರಾಂತ ಟೋಳಿ ಹಣಮಂತ ಮಳಲಿ ಮುಖ್ಯ ವಕ್ತಾರರಾಗಿ ಹಾಗೂ ರಾಷ್ಟ್ರ ಸೇವಿಕಾ ಸಮಿತಿ ವಿಭಾಗ ಕಾರ್ಯವಾಹಿಕಾ ಮಹಿಳಾ ಪ್ರತಿನಿಧಿಯಾಗಿ ಭಾಗವಹಿಸಲಿದ್ದಾರೆ. ನಾಳೆ ಕನಸಿಗೆ ಇಂದು ಬೀಜ ಬಿತ್ತೋಣ, ಹಿಂದೂ ಸಮಾಜ ಸಂಘಟಿಸೋಣ ಎಂಬ ಧ್ಯೇಯದೊಂದಿಗೆ ನಡೆಸಲಾಗುತ್ತಿರುವ ಈ ಬೃಹತ್ ಹಿಂದೂ ಸಮ್ಮೇಳನಕ್ಕೆ ತಾಯಂದಿರು, ತರುಣರು, ಮಕ್ಕಳು, ಗಣ್ಯರು ಎಲ್ಲರೂ ಭಾಗವಹಿಸಬೇಕೆಂದು ಸಮಿತಿಯಿಂದ ವಿನಂತಿಸಿದರು.
ಜಗತ್ತಿನ ದೊಡ್ಡ ಸ್ವಯಂಸೇವಕ ಸಂಘಟನೆಯಾಗಿರುವ ಆರ್‌ಎಸ್‌ಎಸ್ ಆರಂಭವಾಗಿ 100 ವರ್ಷ ತುಂಬಿದ್ದು, ಅದನ್ನೇ ವೆಭವಿಕರಿಸದೆ, ಹಿಂದೂ ಸಮಾಜ ಜಾತಿ ಬೇಧಗಳನ್ನು ಬದಿಗಿಟ್ಟು ನಾವೆಲ್ಲ ಹಿಂದು, ನಾವೆಲ್ಲ ಒಂದು ಎನ್ನುವ ಭಾವ ಪ್ರತಿಯೊಬ್ಬರಲ್ಲಿ ಬರಲು ಸಾಕಷ್ಟು ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ. ಹಾಗಾಗಿ ಪಂಚ ಪರಿವರ್ತನೆ ಎಂಬ ಹೆಸರಿನಲ್ಲಿ ಸಮಾಜಕ್ಕೆ 05 ವಿಷಯಗಳಾದ ಸಾಮರಸ್ಯ, ಪರಿಸರ ಸಂರಕ್ಷಣೆ, ಕುಟುಂಬ ಪ್ರಭೋದನೆ, ಸ್ವದೇಶಿ, ನಾಗರಿಕ ಕರ್ತವ್ಯ ವಿಚಾರಗಳನ್ನು ಜಾರಿ ತರಲು ಕರೆಕೊಟ್ಟಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಸಮಿತಿ ಉಪಾಧ್ಯಕ್ಷರಾದ ರವೀಂದ್ರ ಜಮ್ಮನಕಟ್ಟಿ, ಆನಂದ ಪತ್ತಾರ, ಡಾ.ಪ್ರಾಣೇಶ ಜಾಹಗಿರದಾರ, ಕಾರ್ಯದರ್ಶಿ ಲಿಂಗರಾಜ ಹಿರೇಮಠ, ಉಪೇಂದ್ರ ದೇಸಾಯಿ, ಮಹಾದೇವ ದೊಡಮನಿ, ಡಾ.ಬಾಬುರಾಜೇಂದ್ರ ನಾಯಿಕ, ಡಾ.ಎಲ್.ಬಿ.ಪಾಟೀಲ, ಎಸ್.ಎಸ್.ಪಾಟೀಲ, ಕರಬಸಪ್ಪ ಅರಕೇರಿ, ಸಂಗಮೇಶ ಮುರಗೋಡ, ನಾರಾಯಣಸಿಂಗ ಹಜೇರಿ, ಭುವನೇಶ್ವರಿ ಕೋರವಾರ, ಸುನಿತಾರಾಣಿ ಪಟೀಲ, ವಿಜಯ ಜೋಶಿ ಇದ್ದರು.
