ಸಾರಾಂಶ
ಕನ್ನಡಪ್ರಭ ವಾರ್ತೆ ಗುಬ್ಬಿ
ಸಮರ್ಪಕ ವಿದ್ಯುತ್ ಒದಗಿಸಬೇಕೆಂದು ಒತ್ತಾಯಿಸಿ ನೂರಾರು ರೈತರು ತಾಲೂಕಿನ ನಿಟ್ಟೂರು ಬೆಸ್ಕಾಂ ಕಚೇರಿಯ ಮುಂದೆ ಬೃಹತ್ ಪ್ರತಿಭಟನೆ ಮಾಡಿದರು.ಇದೇ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಮುಖಂಡ ಪಂಚಾಕ್ಷರಿ ರಾಜ್ಯ ಸರ್ಕಾರ ರೈತರ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದು, ಕೃಷಿ ಮಾಡುವ ರೈತರಿಗೆ ಅನ್ಯಾಯ ಮಾಡುತ್ತಿದೆ. ಇಂಧನ ಸಚಿವ ಡಿ.ಕೆ. ಶಿವಕುಮಾರ್ ವಿದ್ಯುತ್ ರೈತರಿಗೆ ವಿದ್ಯುತ್ ನೀಡದೆ ಅನ್ಯಾಯವೆಸಗುತ್ತಿದ್ದಾರೆ. ಸೋಲಾರ್ ಕಂಪನಿಗಳೊಂದಿಗೆ ಡೀಲ್ ಮಾಡಿಕೊಂಡು ರೈತರಿಗೆ ಮರಣ ಶಾಸನ ಬರೆಯಲು ಮುಂದಾಗಿದ್ದಾರೆ ಎಂದು ಕಿಡಿಕಾರಿದರು.
ಮುಖಂಡ ಎಸ್.ಡಿ. ಡಿಲೀಪ್ ಕುಮಾರ್ ಮಾತನಾಡಿ, ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಗ್ಯಾರಂಟಿ ಎಂದು ರೈತರ, ಬಡವರ ಬದುಕನ್ನೇ ನಾಶಮಾಡಲು ಹೊರಟಿದೆ. ರೈತರ ಬದುಕಿನ ಜೊತೆ ಸರ್ಕಾರ ಚೆಲ್ಲಾಟವಾಡುತ್ತಿದ್ದು, ಅನ್ನ ಬೆಳೆಯುವ ರೈತನ ಬಾಳಿಗೆ ಮಣ್ಣು ಹಾಕಲು ಹೊರಟಿದೆ. ಸರ್ಕಾರ ಹೇಳುವುದೇ ಒಂದು ಅಧಿಕಾರಿಗಳು ಮಾಡುತ್ತಿರುವುದು ಇನ್ನೊಂದು ರೈತರಿಗೆ ಪ್ರತಿನಿತ್ಯ ಏಳು ಗಂಟೆಗಳ ಕಾಲ ತ್ರಿ ಫೇಸ್ ಹಾಗೂ ಸಂಜೆ 6 ಗಂಟೆಯಿಂದ ಬೆಳಗ್ಗೆ 6 ವರೆಗೆ ಸಿಂಗಲ್ ಫೇಸ್ ನೀಡಬೇಕು. ಇಲ್ಲದೆ ಹೋದರೆ ದೊಡ್ಡ ಮಟ್ಟದ ಹೋರಾಟ ಮಾಡುವುದಂತೂ ಸತ್ಯ ಅಧಿಕಾರಿಗಳು ಸರಿಯಾದ ರೀತಿಯಲ್ಲಿ ರೈತರಿಗೆ ಸ್ಪಂದನೆ ನೀಡದೆ ಹೋದರೆ ರಸ್ತೆ ತಡೆದು ಪ್ರತಿಭಟನೆಯನ್ನು ಸಹ ಮಾಡುತ್ತೇವೆ ಎಂದು ತಿಳಿಸಿದರು.ಬೆಸ್ಕಾಂ ಇ ಇ ಪ್ರಶಾಂತ್ ಕೊಡ್ಲಗಿ ಮಾತನಾಡಿ, ರೈತರಿಗೆ ಯಾವುದೇ ರೀತಿಯ ಸಮಸ್ಯೆ ಆಗದಂತೆ ಇನ್ನೂ ಮುಂದೆ ವಿದ್ಯುತ್ ನೀಡಲಾಗುತ್ತದೆ. ಪ್ರತಿ ದಿನ ಏಳು ಗಂಟೆ ತ್ರಿ ಫೇಸ್ ವಿದ್ಯುತ್ ನೀಡಲು ಮುಂದಾಗುತ್ತೇವೆ ಮತ್ತು ರಾತ್ರಿ ವೇಳೆಯಲ್ಲಿ ತೋಟದ ಮನೆಗಳಿಗೂ ಸಹ ಸಿಂಗಲ್ ಫೇಸ್ ನೀಡುತ್ತೇವೆ. ಹಳೆಯ ವಿದ್ಯುತ್ ತಂತಿಗಳನ್ನು ಬದಲಾವಣೆ ಮಾಡಲಾಗುತ್ತದೆ ಎಂದು ಆಶ್ವಾಸನೆ ನೀಡಿದ್ದಾರೆ.
ಪ್ರತಿಭಟನೆಯಲ್ಲಿ ಮುಖಂಡರಾದ ಬೈರಪ್ಪ, ಗಿರಿಶಿವಶಂಕರ್ ಬಾಬು, ಪರಮೇಶ್, ಓಂಕಾರ್, ಕುಮಾರ್ ಸ್ವಾಮಿ,ಸೇರಿದಂತೆ ನೂರಾರು ರೈತರು ಇದ್ದರು. ನಿಟ್ಟೂರು ಎಸ್ ಒ ರಾಜೇಶ್, ಹೊಸಕೆರೆ ಎಸ್ ಒ ಕಾಂತರಾಜು, ಕಡಬ ಸೇರಿದಂತೆ ಹಲವು ಬೆಸ್ಕಾಂ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
17 ಜಿ ಯು ಬಿ 2ಗುಬ್ಬಿ ತಾಲೂಕಿನ ನಿಟ್ಟೂರು ಬೆಸ್ಕಾಂ ಕಚೇರಿಯ ಮುಂದೆ ಮರ್ಪಕ ವಿದ್ಯುತ್ ಒದಗಿಸಬೇಕೆಂದು ಒತ್ತಾಯಿಸಿ ನೂರಾರು ರೈತರು ಬೃಹತ್ಸ ಪ್ರತಿಭಟನೆ ಮಾಡಿದರು.