ಕನ್ನಡಪ್ರಭ ವಾರ್ತೆ ಹುಕ್ಕೇರಿ ಗ್ರಾಹಕ ಸದಸ್ಯರು ಹಾಗೂ ಠೇವಣಿದಾರರ ಸಹಕಾರದಿಂದ ಹುಕ್ಕೇರಿ ಅರ್ಬನ್ ಕೋ ಆಪ್ ಬ್ಯಾಂಕ್ 2025-26ರಲ್ಲಿ ₹1.79 ಕೋಟಿ ಲಾಭ ಗಳಿಸಿದೆ ಎಂದು ಬ್ಯಾಂಕ್ ಅದ್ಯಕ್ಷ ಚಂದ್ರಶೇಖರ ಪಾಟೀಲ ಹೇಳಿದರು.
ಕನ್ನಡಪ್ರಭ ವಾರ್ತೆ ಹುಕ್ಕೇರಿ
ಗ್ರಾಹಕ ಸದಸ್ಯರು ಹಾಗೂ ಠೇವಣಿದಾರರ ಸಹಕಾರದಿಂದ ಹುಕ್ಕೇರಿ ಅರ್ಬನ್ ಕೋ ಆಪ್ ಬ್ಯಾಂಕ್ 2025-26ರಲ್ಲಿ ₹1.79 ಕೋಟಿ ಲಾಭ ಗಳಿಸಿದೆ ಎಂದು ಬ್ಯಾಂಕ್ ಅದ್ಯಕ್ಷ ಚಂದ್ರಶೇಖರ ಪಾಟೀಲ ಹೇಳಿದರು.ಪಟ್ಟಣದಲ್ಲಿ ಸಿ.ಎಸ್.ತುಬಚಿ ಶಿಕ್ಷಣ ಸಂಸ್ಥೆಯ ಚಿಣ್ಣರ ಭವನದಲ್ಲಿ ಶನಿವಾರ 98ನೇ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, ಹಿರಿಯರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ಆಡಳಿತವನ್ನು ಮುಂದುವರೆಸಿ ಸದಸ್ಯರ, ಗ್ರಾಹಕರ ಸಹಕಾರದೊಂದಿಗೆ ಸಿಬ್ಬಂದಿಗಳ ಪರಿಶ್ರಮದಿಂದ ಬ್ಯಾಂಕು ಪ್ರಗತಿ ಪಥದಲ್ಲಿ ಮುಂದುವರೆದಿದೆ ಎಂದರು.
ಸದಸ್ಯರ ಹಿತಾಸಕ್ತಿಗೆ ಅಗತ್ಯ ಸಾಲಗಳನ್ನು ವಿತರಿಸುತ್ತಿದ್ದೇವೆ. ಸದಸ್ಯರು ಸಮಯಕ್ಕೆ ಸರಿಯಾಗಿ ಸಾಲ, ಬಡ್ಡಿ ಪಾವತಿಸಿ ಬ್ಯಾಂಕಿನ ಪ್ರಗತಿಗೆ ಸಹಕರಿಸಲು ವಿನಂತಿಸಿದ ಅವರು, ಕೆಲ ಬ್ಯಾಂಕ್ ಸದಸ್ಯರು ಆಡಳಿತ ಮಂಡಳಿಯವರೊಂದಿಗೆ ಸಂವಾದ ನಡೆಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡರು.ಪ್ರಭಾರ ಪ್ರಧಾನ ವ್ಯವಸ್ಥಾಪಕ ಕೆ.ಬಿ.ಬಂದಾಯಿ ಪ್ರಸ್ತಾವಿಕವಾಗಿ ಮಾತನಾಡಿ ವರದಿ ವಾಚನ ಮಾಡಿದರು. ನಂತರ ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ಸತ್ಕರಿಸಿ ಪ್ರೋತ್ಸಾಹಿಸಲಾಯಿತು.
ಉಪಾಧ್ಯಕ್ಷ ಪ್ರಭು ಸಾಂಬಾರೆ, ನಿರ್ದೇಶಕರಾದ ಶಿವಾನಂದ ನೂಲಿ, ಶಂಕರಗೌಡ ಪಾಟೀಲ, ಗೌರವ್ವ ನಾಯಿಕ, ರಾಜು ಬಾಗಲಕೋಟಿ, ಮಲ್ಲಿಕಾರ್ಜುನ ಕೋಟ್ಯಾಗೋಳ, ಮೌನೇಶ್ವರ ಪೋತದಾರ, ಮಲ್ಲಿಕಾರ್ಜುನ ತೇರಣಿ, ಮಹಾದೇವ ಖಡಬಡಿ, ಸುವರ್ಣ ಹುಂಡೆಕರ ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ವಿವಿಧ ಶಾಖೆಗಳ ವ್ಯವಸ್ಥಾಪಕರಾದ ಬಸವರಾಜ ಗುಳ್ಳ, ಅನೀಲ ಮುನ್ನೋಳ್ಳಿ, ರವಿಂದ್ರ ಬಾಳಿಕಾಯಿ, ನೀತಾ ಸರದಾರ, ಲೆಕ್ಕಾಧಿಕಾರಿ ಪ್ರೇಮಾ ರಾಜನ್ನವರ ಮತ್ತು ಸಿಬ್ಬಂದಿ, ಗ್ರಾಹಕರು ಹಾಜರಿದ್ದರು.
ಸರ್ಕಾರದ ನಿಯಮಾವಳಿ ಪ್ರಕಾರ ಹತ್ತು ವರ್ಷ ಮೇಲ್ಪಟ್ಟ ನಿರ್ದೆಶಕರು ಮೂರು ವರ್ಷಗಳ ಕಾಲ ಆಡಳಿತದಿಂದ ದೂರು ಉಳಿಯಬೇಕು ಎಂಬ ಆದೇಶದಿಂದ ನಿರ್ದೇಶಕರಾದ ವಿಜಯ ರವದಿ, ಸೋಮಶೇಖರ ಪಟ್ಟಣಶೇಟ್ಟಿ, ಸಿದ್ದೇಶ್ವರ ಹೇದ್ದೂರಶೆಟ್ಟಿ, ಸುಭಾಷ ಪಾಟೀಲ ರಾಜಿನಾಮೆ ನೀಡಿದ್ದರಿಂದ ಸಭೆಯಿಂದ ದೂರು ಉಳಿದರು.