ಹುಳಿಗೆರೆ ಗ್ರಾಪಂಗೆ ಕೊತ್ತಿಗೆರೆ ಚಂದ್ರಪ್ಪ ಅಧ್ಯಕ್ಷ

| Published : Mar 30 2025, 03:04 AM IST

ಹುಳಿಗೆರೆ ಗ್ರಾಪಂಗೆ ಕೊತ್ತಿಗೆರೆ ಚಂದ್ರಪ್ಪ ಅಧ್ಯಕ್ಷ
Share this Article
  • FB
  • TW
  • Linkdin
  • Email

ಸಾರಾಂಶ

ಕಡೂರು, ತಾಲೂಕಿನ ಹುಳಿಗೆರೆ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಕೊತ್ತಿಗೆರೆ ಚಂದ್ರಪ್ಪ ಅವಿರೋಧವಾಗಿ ಆಯ್ಕೆಯಾದರು.

ಕನ್ನಡಪ್ರಭ ವಾರ್ತೆ, ಕಡೂರು

ತಾಲೂಕಿನ ಹುಳಿಗೆರೆ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಕೊತ್ತಿಗೆರೆ ಚಂದ್ರಪ್ಪ ಅವಿರೋಧವಾಗಿ ಆಯ್ಕೆಯಾದರು.

ಈ ಹಿಂದಿನ ಅಧ್ಯಕ್ಷರಾಗಿದ್ದ ಮಹಾಲಿಂಗಪ್ಪ ಅವರ ರಾಜೀನಾಮೆಯಿಂದ ಈ ಸ್ಥಾನ ತೆರವಾಗಿತ್ತು. ರಾಜೀನಾಮೆ ತೆರವಾದ ಹಿನ್ನೆಲೆಯಲ್ಲಿ ನಡೆದ ಅಧ್ಯಕ್ಷರ ಚುನಾವಣೆಯಲ್ಲಿ ಬಿಇಒ ಸಿದ್ದರಾಜು ನಾಯ್ಕರವರು ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ಚಂದ್ರಪ್ಪನವರ ಅ‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍ವಿರೋಧ ಆಯ್ಕೆ ಘೋಷಿಸಿದರು.

ಆ ಬಳಿಕ ನಡೆದ ಅಭಿನಂದನಾ ಸಮಾರಂಭದಲ್ಲಿ ನೂತನ ಅಧ್ಯಕ್ಷರನ್ನು ಅಭಿನಂದಿಸಿದ ಕಡೂರು ಬಿಜೆಪಿ ಮಂಡಲದ ಉಪಾಧ್ಯಕ್ಷ ಜಿಗಣೇಹಳ್ಳಿ ನೀಲಕಂಠಪ್ಪ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಚುನಾವಣೆಗಳು ಅನಿವಾರ್ಯ. ಅದಕ್ಕೆ ತಕ್ಕಂತೆ ರಾಜಕೀಯ ಕ್ಷೇತ್ರದಲ್ಲಿ ಚುನಾಯಿತ ಜನ ಪ್ರತಿನಿಧಿಯಾಗಿ ಆಯ್ಕೆಯಾಗಿ ಪಂಚಾಯ್ತಿ ವ್ಯಾಪ್ತಿಯ ಗ್ರಾಮಗಳ ಅಭಿವೃದ್ಧಿಗೆ ಮೂಲಭೂತ ಸೌಕರ್ಯ ಒದಗಿಸುವ ನಿಟ್ಟಲ್ಲಿ ಕೆಲಸ ಮಾಡಬೇಕು. ಅಧ್ಯಕ್ಷ ಸ್ಥಾನವೆಂಬುದು ಅಧಿಕಾರವಲ್ಲ. ಅದೊಂದು ಸೇವಾ ಕ್ಷೇತ್ರ ಮಾತ್ರ ಎಂದರು.

ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ಮೂಲಸೌಕರ್ಯ ಒದಗಿಸಿ ಅಲ್ಲಿನ ಸಮಸ್ಯೆ ಪರಿಹರಿಸಲು ಸಿಕ್ಕಿರುವ ಜವಾಬ್ದಾರಿ ಎಂಬುದನ್ನು ಕೆಲಸಗಳ ಮೂಲಕ ತೋರಿಸಬೇಕು ಎಂದರು‌. ಸಮಾರಂಭದಲ್ಲಿ ಗ್ರಾ.ಪಂ. ಉಪಾಧ್ಯಕ್ಷೆ ಶಕುಂತಲಾ, ಸದಸ್ಯರಾದ ಎಂ.ಸಿ.ಕುಮಾರ್, ಪಾರ್ವತಿ, ಸ್ವರ್ಣ,ಸಂತೋಷ್, ಸಾವಿತ್ರಮ್ಮ, ಮುಖಂಡರಾದ ಎಂ.ಕೆ.ಸತೀಶ್, ಕರಿಯಪ್ಪ, ಯಳಗೊಂಡನಹಳ್ಳಿ ಈಶ್ವರಪ್ಪ, ಎ.ಸಿ.ಚಂದನ ಹಾಗು ಗ್ರಾಮಸ್ಥರು ಇದ್ದರು.

29ಕೆಕೆಡಿಯು1.

ಕಡೂರು ತಾಲೂಕಿನ ಹುಳಿಗೆರೆ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಕೊತ್ತಿಗೆರೆ ಚಂದ್ರಪ್ಪನವರನ್ನು ಅಭಿನಂದಿಸಲಾಯಿತು.