ಹುಳಿಯಾರು ಸಂತೆ ಸ್ಥಳಾಂತರ: ಮೂಲ ಸೌಕರ್ಯದ ಭರವಸೆ

| Published : Oct 28 2025, 12:03 AM IST

ಹುಳಿಯಾರು ಸಂತೆ ಸ್ಥಳಾಂತರ: ಮೂಲ ಸೌಕರ್ಯದ ಭರವಸೆ
Share this Article
  • FB
  • TW
  • Linkdin
  • Email

ಸಾರಾಂಶ

ಸೋಮವಾರದಂದು ರೈತ ಸಂಘ ಹಾಗೂ ಸಂಘಟನೆಗಳು ಟ್ರ್ಯಾಕ್ಟರ್‌ನಲ್ಲಿ ಕಸ ತುಂಬಿಕೊಂಡು ನಾಡಕಚೇರಿ ಮುಂದೆ ಸುರಿಯಲು ಪ್ರತಿಭಟನೆ ಹಮ್ಮಿಕೊಂಡಿತ್ತು.

ಕನ್ನಡಪ್ರಭ ವಾರ್ತೆ ಹುಳಿಯಾರು

ಪಟ್ಟಣದಲ್ಲಿನ ವಾರದ ಸಂತೆ ಸ್ಥಳಾಂತರ ಮತ್ತು ಮೂಲ ಸೌಕರ್ಯ ಹಾಗೂ ಕಸ ವಿಲೇವಾರಿ ಘಟಕ ಸ್ಥಾಪನೆಗಾಗಿ ರಾಜ್ಯ ರೈತ ಸಂಘ ಸಂಘಟನೆಗಳ ಬೆಂಬಲದೊಂದಿಗೆ ಕಳೆದ 19 ದಿನಗಳಿಂದ ನಡೆಸುತ್ತಿರುವ ಅಹೋರಾತ್ರಿ ಧರಣಿಯ ಫಲವಾಗಿ ಸಂತೆ ಸ್ಥಳಾಂತರ ಮಾಡುವುದಾಗಿ ಅಧಿಕಾರಿಗಳು ಹೇಳಿದ್ದು, ರೈತರಿಗೆ ಮೊದಲನೇ ಜಯವಾಗಿದೆ. ಇನ್ನುಳಿದ ಬೇಡಿಕೆಗಳು ಈಡೇರುವವರೆಗೂ ಹೋರಾಟ ಮುಂದುವರಿಯದಾಗಿ ರೈತ ಸಂಘ ಹಾಗೂ ಸಂಘಟನೆಗಳು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.ಪಟ್ಟಣದಲ್ಲಿ ಕಸ ವಿಲೇವಾರಿ ಹಾಗೂ ಮೂಲಸೌಕರ್ಯ ಸಮಸ್ಯೆ ವಿರುದ್ಧ ನಾಗರಿಕರು ಮತ್ತು ಸಂಘ-ಸಂಸ್ಥೆಗಳು ಕಳೆದ 19 ದಿನಗಳಿಂದ ಹೋರಾಟ ನಡೆಸುತ್ತಿದ್ದು ಸೋಮವಾರದಂದು ರೈತ ಸಂಘ ಹಾಗೂ ಸಂಘಟನೆಗಳು ಟ್ರ್ಯಾಕ್ಟರ್‌ನಲ್ಲಿ ಕಸ ತುಂಬಿಕೊಂಡು ನಾಡಕಚೇರಿ ಮುಂದೆ ಸುರಿಯಲು ಪ್ರತಿಭಟನೆ ಹಮ್ಮಿಕೊಂಡಿತ್ತು. ಇದನ್ನರಿತ ಅಧಿಕಾರಿಗಳಾದ ತಾಲೂಕು ದಂಡಾಧಿಕಾರಿ, ತುಮಕೂರು ಯೋಜನಾ ನಿರ್ದೇಶಕ ಹಾಗು ಕೃಷಿ ಉತ್ಪನ್ನ ಮಾರುಕಟ್ಟೆಯ ಉಪ ನಿರ್ದೇಶಕ ಧರಣಿ ಸ್ಥಳಕ್ಕೆ ಬಂದು ಧರಣಿ ನಿರತರೊಂದಿಗೆ ಮಾತುಕತೆ ನಡೆಸಿ ವಾರದ ಸಂತೆಯನ್ನ ಕೃಷಿ ಮಾರುಕಟ್ಟೆಗೆ ವರ್ಗಾಯಿಸಿಕೊಡಲು ನಾವು ಬದ್ದರಿದ್ದು ಒಂದು ವಾರದ ಅವಧಿ ಕಳಿದಾಗ ಪ್ರತಿಭಟನಾ ನಿರತರಾದ ಕೆಆರ್‌ಎಸ್ ಪಕ್ಷದ ಭಟ್ಟರಹಳ್ಳಿ ಮಲ್ಲಿಕಾರ್ಜುನ್ ನಿಮಗೆ ಸಾಮಾನ್ಯ ಜ್ಙಾನ ಇಲ್ಲವೆ ಈ ಕೂಡಲೇ ಈ ಮೇಲ್ ಮುಖಾಂತರ ಸಂದೇಶ ರವಾನಿಸಿ ನಾವು ಈ ಬರುವ ವಾರದ ಸಂತೆಯನ್ನು ಅಲ್ಲಿಯೇ ಮಾಡುವುದಾಗಿ ತಿಳಿಸಿದಾಗ ಸಂತೆ ಸ್ಥಳಾಂತರದ ಸಮಸ್ಸೆಗೆ ಪರಿಹಾರ ಸಿಕ್ಕಿತು.

ಪಟ್ಟಣದ ಬಹುದೊಡ್ಡ ಸಮಸ್ಸೆಯಾದ ಕಸ ವಿಲೇವಾರಿಗೆ ಮುಕ್ತಿ ಸಿಗದ ಹಿನ್ನೆಲೆಯಲ್ಲಿ ರೈತ ಸಂಘ ಹಾಗೂ ಸಂಘಟನೆಗಳು ಪಟ್ಟಣದಲ್ಲಿ ಬಿದ್ದಿರುವ ಕಸವನ್ನು ಟ್ರ್ಯಾಕ್ಟರ್‌ನಲ್ಲಿ ತುಂಬಿಕೊಂಡು ನಾಡಕಚೇರಿ ಮುಂದೆ ಸುರಿಯಲು ವಿನೂತನ ಪ್ರತಿಭಟನೆಗೆ ಮುಂದಾದರು. ಇದನ್ನರಿತ ಪೋಲೀಸರು ಬ್ಯಾರಿಕೇಡ್ ಗಳನ್ನು ಅಡ್ಡ ಇಟ್ಟು ಪ್ರತಿಭಟನಾಕಾರರನ್ನು ತಡೆದರು.

ಪ್ರತಿಭಟನಾ ಕಾವು ಹೆಚ್ಚಾಗುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ತಿಪಟೂರು ಉಪವಿಭಾಗಾಧಿಕಾರಿ ಸಪ್ತಶ್ರೀ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿ 15 ದಿನಗಳಲ್ಲಿ ಶಾಶ್ವತ ಕಸ ವಿಲೇವಾರಿ ಜಾಗ ಗುರುತಿಸುವ ಭರವಸೆ ನೀಡಿದರು. ಜೊತೆಗೆ ತಾಂತ್ರಿಕ ಸಮಿತಿ ರಚನೆ ಹಾಗೂ ಸಾರ್ವಜನಿಕ ಶೌಚಾಲಯವನ್ನು ತಕ್ಷಣ ತೆರೆಯುವ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಸಂತೆ ಜಾಗ ಸ್ಥಳಾಂತರಕ್ಕೆ ತಾತ್ವಿಕ ಒಪ್ಪಿಗೆ ನೀಡಿದರು. ಆದರೆ ಪಟ್ಟು ಬಿಡದ ಹೋರಾಟಗಾರರು ನಾವು ಪ್ರತಿಭಟನೆಯನ್ನು ಶಾಂತಿಯುತವಾಗಿ ನಡೆಸುತ್ತಿದ್ದೇವೆ. ಹೋರಾಟ ನಮ್ಮ ಹಕ್ಕು ನಾವು ಸಾಂಕೇತಿಕವಾಗಿ ನಾಡಕಚೇರಿ ಮುಂದೆ ಕಸ ಸುರಿಯೋದಾಗಿ ಮಾತುಕತೆ ನಡೆಸಿದರು. ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿ ಬ್ಯಾರಿಕೇಡ್‌ಗಳನ್ನು ಅಡ್ಡ ಇಟ್ಟು ಪ್ರತಿಭಟನಾಕಾರರನ್ನು ತಡೆದರು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ರಸ್ತೆಯ ಮಧ್ಯೆಯೇ ನಿಂತು ನಾಡಕಚೇರಿಗೆ ಆರತಿ ಮಾಡಿ ಓಕಳಿ ಎರಚಿ ಹಿಂತಿರುಗಿದರು.