ಚಿಕ್ಕಮಗಳೂರುಮಾನವ ಹಕ್ಕು ಪ್ರತಿಯೊಬ್ಬ ವ್ಯಕ್ತಿಯ ಘನತೆ, ಸಮಾನತೆ ಸಾರುತ್ತದೆ. ಸಮಾಜದ ಕಟ್ಟಕಡೆ ಮನುಷ್ಯನಿಗೆ ಬದುಕು, ಸ್ವಾತಂತ್ರ್ಯ, ಶಿಕ್ಷಣ, ಆರೋಗ್ಯ ಮತ್ತು ಘನತೆಯಿಂದ ಜೀವಿಸುವುದಕ್ಕೆ ಮಾನವ ಹಕ್ಕುಗಳು ಸ್ಪೂರ್ತಿ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ರಾಜೇಶ್ವರಿ ಎನ್.ಹೆಗಡೆ ಹೇಳಿದರು.
- ಲಾ ಕಾಲೇಜಿನಲ್ಲಿ ಮಾನವ ಹಕ್ಕುಗಳ ದಿನಾಚರಣೆ,
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಮಾನವ ಹಕ್ಕು ಪ್ರತಿಯೊಬ್ಬ ವ್ಯಕ್ತಿಯ ಘನತೆ, ಸಮಾನತೆ ಸಾರುತ್ತದೆ. ಸಮಾಜದ ಕಟ್ಟಕಡೆ ಮನುಷ್ಯನಿಗೆ ಬದುಕು, ಸ್ವಾತಂತ್ರ್ಯ, ಶಿಕ್ಷಣ, ಆರೋಗ್ಯ ಮತ್ತು ಘನತೆಯಿಂದ ಜೀವಿಸುವುದಕ್ಕೆ ಮಾನವ ಹಕ್ಕುಗಳು ಸ್ಪೂರ್ತಿ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ರಾಜೇಶ್ವರಿ ಎನ್.ಹೆಗಡೆ ಹೇಳಿದರು.ನಗರದ ಶ್ರೀ ಶಾರದಾ ಸ್ಕೂಲ್ ಆಫ್ ಲಾ ಕಾಲೇಜಿನಲ್ಲಿ ಬುಧವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಚಿಕ್ಕಮಗಳೂರು ವಕೀಲರ ಸಂಘ, ಜಿಲ್ಲಾ ಮಾನವ ಹಕ್ಕುಗಳ ಸಮಿತಿಯಿಂದ ಆಯೋಜಿಸಿದ್ಧ ಮಾನವ ಹಕ್ಕುಗಳ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.1948 ರಲ್ಲಿ ವಿಶ್ವಸಂಸ್ಥೆ ಅಂಗೀಕರಿಸಿದ ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆ ಮೊದಲು ಕಾನೂನು ದಾಖಲೆ. ಕಾಲ ಕ್ರಮೇಣ ಭಾರತ ಸೇರಿದಂತೆ ಪ್ರಪಂಚದಾದ್ಯಂತ ಮಾನವ ಹಕ್ಕುಗಳನ್ನು ಉತ್ತೇಜಿಸುವ ಮತ್ತು ರಕ್ಷಿಸುವ ಗುರಿ ಹೊಂದಿತು. ಭಾರತದಲ್ಲೂ ರಾಷ್ಟ್ರೀಯ ಮಾನವ ಆಯೋಗ ಸ್ಥಾಪಿಸಿ ಮಾನವ ಹಕ್ಕುಗಳಿಗೆ ಮಾನ್ಯತೆ ನೀಡಲಾಯಿತು ಎಂದರು.ಸಮಾಜದಲ್ಲಿನ ಜೀತ ಪದ್ಧತಿ, ಬಾಲ್ಯಾ ವೃತ್ತಿ ಹೋಗಲಾಡಿಸಲು ಮತ್ತು ದೌರ್ಜನ್ಯ ನಿಯಂತ್ರಣ ಕಾಯ್ದೆಗಳನ್ನು ಜಾರಿಗೊಳಿಸುವ ಮೂಲಕ ಮಾನವ ಹಕ್ಕುಗಳನ್ನು ರಕ್ಷಣೆ ಮಾಡಲಾಗುತ್ತಿದೆ. ಈ ಬಗ್ಗೆ ಭವಿಷ್ಯ ಪ್ರಜೆಗಳಾದ ಕಾನೂನು ವಿದ್ಯಾರ್ಥಿಗಳು ಹೆಚ್ಚು ಅಧ್ಯಯನ ನಡೆಸಿ ಮಾನವ ಹಕ್ಕನ್ನು ಸಂರಕ್ಷಿಸಬೇಕು ಎಂದರು.ದೇಶದ ಯುವ ಪೀಳಿಗೆ ಸದೃಢ ನಿರ್ಣಯ ಕೈಗೊಳ್ಳಬೇಕು. ಮಾನವ ಹಕ್ಕು ಉಲ್ಲಂಘಿಸುವವರ ವಿರುದ್ಧ ಗಟ್ಟಿಧ್ವನಿಯಿಂದ ಪ್ರಶ್ನಿಸುವ ಗುಣ ಬೆಳೆಸಿಕೊಳ್ಳಬೇಕು. ಜನತೆ ಅನ್ಯಾಯ ಅಥವಾ ದೌರ್ಜನ್ಯಕ್ಕೆ ಒಳಗಾದರೆ ಕಾನೂನಿನ್ವಯ ಸ್ಪಂದಿಸುವ ಮೂಲಕ ನೊಂದವರಿಗೆ ನ್ಯಾಯ ಒದಗಿಸುವ ಕಾರ್ಯ ಮಾಡಬೇಕಿದೆ ಎಂದು ತಿಳಿಸಿದರು.ಮಾನವ ಹಕ್ಕುಗಳ ಉಲ್ಲಂಘಿಸುವವರ ಚಿಂತೆ ನಮ್ಮದ್ದಲ್ಲ ಎಂಬ ಸ್ವಾರ್ಥ ಭಾವನೆಯಿಂದ ಜೀವಿಸದೇ, ಸ್ವಾತಂತ್ರ್ಯವಾಗಿ ಹಕ್ಕು ಚ್ಯುತಿಗೊಳಿಸುವವರ ವಿರುದ್ಧ ಧೈರ್ಯವಾಗಿ ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಸಮಾಜದ ಉಜ್ವಲ ಭವಿಷ್ಯಕ್ಕೆ ಇಂದಿನಿಂದಲೇ ವಿದ್ಯಾರ್ಥಿಗಳು ಅಣಿಯಾದರೆ ಸ್ವಾಸ್ಥ್ಯ ಸಮಾಜ ನಿರ್ಮಾಣ ಸಾಧ್ಯವಾಗಲಿದೆ ಎಂದು ಕಿವಿಮಾತು ಹೇಳಿದರು.ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವಿ.ಹನುಮಂತಪ್ಪ ಮಾತನಾಡಿ, ಜಾಗತೀಕ ಒಗ್ಗಟ್ಟು ಹಾಗೂ ಸಮ ಸಮಾಜ ಕಟ್ಟುವಲ್ಲಿ ಮಾನವ ಹಕ್ಕುಗಳ ಪಾತ್ರ ದೊಡ್ಡದು. ಹಕ್ಕುಗಳನ್ನು ಉಲ್ಲಂಘಿಸದೇ, ಸ್ನೇಹಿತರು ಹಾಗೂ ಕುಟುಂಬದೊಂದಿಗೆ ಉತ್ತಮ ಒಡನಾಟ ಹೊಂದಿದ್ದರೆ ಮಾನವ ಹಕ್ಕು ಸದೃಢವಾಗಿ ಬೇರೂರಲು ಸಾಧ್ಯ ಎಂದು ತಿಳಿಸಿದರು.ತಾಯಿ ಗರ್ಭದಲ್ಲಿ ಹೆಣ್ಣು ಭ್ರೂಣವಾದರೆ ಚಿಗುರಿನಲ್ಲೇ ನಾಶಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ. ಕುಟುಂಬದಿಂದಲೇ ಅಪಸ್ವರ ಹೆಚ್ಚಿದೆ. ಹೆಣ್ಣು ಗಂಡು ಅಥವಾ ಜಾತಿ ಧರ್ಮವೆಂದು ಮನುಷ್ಯನು ಅರ್ಜಿ ಹಾಕಿ ಜನಿಸುವುದಿಲ್ಲ. ಜನನದ ಬಳಿಕ ಕೀಳರಿಮೆ ಮಾಡುವುದು ಕೂಡಾ ಮಾನವ ಹಕ್ಕಿನ ಉಲ್ಲಂಘನೆ ಎಂದು ತಿಳಿಸಿದರು.ಚಿಕ್ಕಮಗಳೂರು ವಕೀಲರ ಸಂಘದ ಅಧ್ಯಕ್ಷ ಡಿ.ಬಿ.ಸುಜೇಂದ್ರ ಮಾತನಾಡಿ, ಮಾನವ ಹಕ್ಕಿನ ವಿವರಗಳು ಸಮುದ್ರದ ಆಳದಷ್ಟಿದೆ. ಈ ಹಕ್ಕಿಗಾಗಿ ಎಲ್ಲಾ ಕಾಯ್ದೆಗಳು ಜಾರಿಗೊಳಿಸಲು ಸಾಕಷ್ಟು ನಿಯಮ, ಇಲಾಖೆಗಳ ಸುತ್ತೋಲೆಗಳಿದ್ದು ಅನೇಕ ಸೆಕ್ಷನ್‌ನಷ್ಟು ಹೊಂದಿರುವ ರಾಷ್ಟ್ರೀಯ ಮಾನವ ಹಕ್ಕಿಗೆ ರಾಷ್ಟ್ರದ ಮುಖ್ಯ ನ್ಯಾಯಮೂರ್ತಿ ರೂವಾರಿಗಳಾಗಿದ್ದಾರೆ ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಶಾರದ ಸ್ಕೂಲ್ ಆಫ್ ಲಾ ಕಾಲೇಜಿನ ಪ್ರಾಂಶುಪಾಲ ಎಸ್.ಕುಮಾರ್ ವಹಿಸಿದ್ದರು. ಜಿಲ್ಲಾ ಮಾನವ ಹಕ್ಕುಗಳ ಸಮಿತಿ ಅಧ್ಯಕ್ಷ ಎಚ್.ಸಿ.ನಟರಾಜ್, ಕಾರ್ಯದರ್ಶಿ ಕೃಷ್ಣಯ್ಯಗೌಡ, ಶ್ರೀ ಶಾರದ ಸ್ಕೂಲ್ ಆಫ್ ಲಾ ಕಾಲೇಜಿನ ಸಂಸ್ಥಾಪಕ ಜಿ.ಆರ್.ಶ್ರವಣ್ ಉಪಸ್ಥಿತರಿದ್ದರು. 10 ಕೆಸಿಕೆಎಂ 3ಚಿಕ್ಕಮಗಳೂರಿನ ಶ್ರೀ ಶಾರದಾ ಸ್ಕೂಲ್ ಆಫ್ ಲಾ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ಧ ಮಾನವ ಹಕ್ಕುಗಳ ದಿನಾಚರಣೆಯನ್ನು ನ್ಯಾಯಾಧೀಶರಾದ ರಾಜೇಶ್ವರಿ ಎನ್.ಹೆಗಡೆ ಅವರು ಉದ್ಘಾಟಿಸಿ ಮಾತನಾಡಿದರು.