ಮಹಿಳೆಯರು ಆರ್ಥಿಕವಾಗಿ ದುರ್ಬಲವರ್ಗದವರು ಸೇರಿದಂತೆ ಜನಸಾಮಾನ್ಯರು ಕೂಡ ಯಾವುದೇ ದಿನ ಬೇಕಾದೂರ ಕಾನೂನು ಸೇವಾ ಪ್ರಾಧಿಕಾರಕ್ಕೆ ಭೇಟಿ ನೀ
ಕನ್ನಡಪ್ರಭ ವಾರ್ತೆ ಮೈಸೂರುಯಾವುದೇ ಸಮಸ್ಯೆ ಇದ್ದರೂ ಉಚಿತವಾಗಿ ಕಾನೂನು ನೆರವು ನೀಡಲು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸಿದ್ಧವಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆಯುವಂತೆ ಹಿರಿಯ ವಕೀಲರಾದ ಎಂ.ಎಸ್.ನವೀನ್ ಮನವಿ ಮಾಡಿದರು.ಮಾನವ ಹಕ್ಕುಗಳ ಸೇವಾ ಸಮಿತಿಯು ತನ್ನ 9ನೇ ವಾರ್ಷಿಕೋತ್ಸವ, ಮಾನವ ಹಕ್ಕುಗಳ ದಿನಾಚರಣೆ ಅಂಗವಾಗಿ ನಗರದ ರೋಟರಿ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಮಾನವರತ್ನ ಪ್ರಶಸ್ತಿ ಪ್ರದಾನ, ಕಾನೂನು ಅರಿವು- ನೆರವು ಕಾರ್ಯಕ್ರಮ, ಉಚಿತವಾಗಿ ನೇತ್ರ ತಪಾಸಣೆ, ರೈತರು, ಸೈನಿಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಅರು ಮಾತನಾಡಿ, ರೈತರು ಹಾಗೂ ಸೈನಿಕರ ಬಗ್ಗೆ ಅಪಾರವಾದ ಗೌರವವಿದೆ. ಸೈನಿಕರ ಕುಂದುಕೊರತೆ ನಿವಾರಣೆಗಾಗಿ ಸೈನಿಕ್ ಭವನದಲ್ಲಿ ಕ್ಲಿನಿಕ್ ತೆರೆಯಲಾಗಿದೆ. ಪ್ರತಿ ಗುರುವಾರ ಸೈನಿಕರು ಭೇಟಿ, ತಮ್ಮ ಯಾವುದೇ ಕುಂದುಕೊರತೆ ಇದ್ದರೂ ಉಚಿತ ಕಾನೂನು ನೆರವು ಪಡೆಯಬಹುದು ಎಂದರು.ಮಹಿಳೆಯರು ಆರ್ಥಿಕವಾಗಿ ದುರ್ಬಲವರ್ಗದವರು ಸೇರಿದಂತೆ ಜನಸಾಮಾನ್ಯರು ಕೂಡ ಯಾವುದೇ ದಿನ ಬೇಕಾದೂರ ಕಾನೂನು ಸೇವಾ ಪ್ರಾಧಿಕಾರಕ್ಕೆ ಭೇಟಿ ನೀಡಿ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎಂದರು.ಕರ್ನಾಟಕ ಸುಗಮ ಸಂಗೀತ ಪರಿಷತ್ ಜಿಲ್ಲಾಧ್ಯಕ್ಷ ನಾಗರಾಜ ವಿ. ಬೈರಿ ಮಾತನಾಡಿ, ವಿಶ್ವಾಸದ್ರೋಹ, ದಾರಿ ತಪ್ಪಿಸುವುದು, ಬ್ಲಾಕ್‌ಮೇಲ್ ಮಾಡುವುದು ಮೊದಲಾದ ವಿಷಯಗಳಿಗೆ ಸಂಬಂಧಿಸಿದಂತೆ ಜನರು ಉಚಿತ ಕಾನೂನು ನೆರವು ಪಡೆಯಬಹುದು ಎಂದರು.ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಕೆ.ಬಿ. ಲಿಂಗರಾಜು ಮಾತನಾಡಿ, ಎಲ್ಲೇ ಮಾನವ ಹಕ್ಕುಗಳ ಉಲ್ಲಂಘನೆಯಾದರೂ ಕಾನೂನಿನ ನೆರವು ಪಡೆಯಬಹುದು ಎಂದರು.ಸಾಕಷ್ಟು ಮಂದಿಗೆ ಕಾನೂನಿನ ಅರಿವಿಲ್ಲ. ಜೊತೆಗೆ ತಮಗೆ ಅನ್ಯಾಯವಾದಾಗ ಉಚಿತವಾಗಿ ಕಾನೂನು ನೆರವು ಪಡೆಯಬಹುದು ಎಂಬುದು ಗೊತ್ತಿಲ್ಲ. ಅಂಥವರಿಗೆ ಈ ರೀತಿಯ ಸಂಘ- ಸಂಸ್ಥೆಗಳು ಜಾಗೃತಿ ಮೂಡಿಸಬೇಕು ಎಂದು ಅವರು ಸಲಹೆ ಮಾಡಿದರು.ಸಮಿತಿಯ ರಾಜ್ಯಾಧ್ಯಕ್ಷ ಸೀತಾರಾಮೇಗೌಡ ಅಧ್ಯಕ್ಷತೆ ವಹಿಸಿದ್ದರು. ಕೊಡಗು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷೆ ಸಿ. ರೇಣುಕಾಂಬ ಮಾತನಾಡಿದರು. ಜಿಲ್ಲಾ ಸರ್ಕಾರಿ ವಕೀಲ ಅರ್ಜುನ್, ಉಡುಪಿಯ ಸಮಾಜ ಸೇವಕ ಕೃಷ್ಣ ಪೂಜಾರಿ, ಹಾಸನದ ಎಚ್.ಟಿ. ಪಾರ್ವತಿ ಮುಖ್ಯ ಅತಿಥಿಗಳಾಗಿದ್ದರು. ಸಮಿತಿಯ ಅಧ್ಯಕ್ಷ ಕಸ್ತೂರಿ ಚಂದ್ರು ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಟಿ. ಶಿವರಾಜ್, ನಟರಾಜ್, ಬಿ. ಅಮೀನಾ ಬೇಗಂ, ಎಲ್. ರೂಪಾ, ಮೌಲ್ಯಾ ಜಯಕುಮಾರ್, ತೇಜಸ್ ಪೃಥ್ವಿರಾಜ್, ಕರಾಟೆ ಕಿರಣ್, ಸಂತೋಷ್ ಅಂಥೋಣಿ ಮೊದಲಾದವರು ಭಾಗವಹಿಸಿದ್ದರು.-- ಬಾಕ್ಸ್-- -- ಪ್ರಶಸ್ತಿ ಪುರಸ್ಕೃತರು--ಇದೇ ಸಮಾರಂಭದಲ್ಲಿ ಕರ್ನಾಟಕ ಸುಗಮ ಸಂಗೀತ ಪರಿಷತ್ ಜಿಲ್ಲಾಧ್ಯಕ್ಷ ನಾಗರಾಜ ವಿ. ಬೈರಿ, .ಮೈಸೂರು ಕೈಗಾರಿಕಾ ಮತ್ತು ವಾಣಿಜ್ಯ ಸಂಸ್ಥೆ ಅಧ್ಯಕ್ಷ ಕೆ.ಬಿ. ಲಿಂಗರಾಜು, ಮಾನವ ಹಕ್ಕುಗಳ ಸೇವಾ ಸಮಿತಿ ರಾಜ್ಯಾಧ್ಯಕ್ಷ ಸೀತಾರಾಮೇಗೌಡ, ಬೆಂಗಳೂರಿನ ಸಮಾಜ ಸೇವಕ ಎನ್. ಸತ್ಯಪ್ರಕಾಶ್, ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮತ್ತಿತರರಿಗೆ ಮಾನವರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.