ಸಾರಾಂಶ
ಮನೆಯಂಗಳದಲ್ಲಿ ಶ್ರಾವಣ ಸಾಹಿತ್ಯ ಸಂಭ್ರಮ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ತರೀಕೆರೆಅಂಬೇಡ್ಕರ್ ಅವರು ಸಮ ಸಮಾಜದ ಬದುಕಿಗಾಗಿ ಮಾನವೀಯ ನೆಲೆಯಲ್ಲಿ ನಡೆಸಿದ ವಿಚಾರಗಳ ಮಂಥನ ಒಂದು ಆದರ್ಶವಾಗಿದೆ ಎಂದು ಅಜ್ಜಂಪುರ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಎಸ್. ಎನ್. ಆನಂದ್ ಹೇಳಿದರು.ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ತರೀಕೆರೆ, ಮತ್ತು ಮಹಿಳಾ ಘಟಕ, ನಗರ ಘಟಕ, ಹೋಬಳಿ ಘಟಕ ಹಾಗೂ ಯುವ ಘಟಕಗಳ ಸಂಯುಕ್ತಾಶ್ರಯದಲ್ಲಿ ಪಟ್ಟಣದ ಸಾಹಿತಿ ಮನಸುಳಿ ಮೋಹನ್ ಅವರ ಮನೆಯಂಗಳದಲ್ಲಿ ನಡೆದ ಶ್ರಾವಣ ಸಾಹಿತ್ಯ ಸಂಭ್ರಮದಲ್ಲಿ ಬುದ್ದ, ಬಸವ, ಅಂಬೇಡ್ಕರ್ ಚಿಂತನೆಯಲ್ಲಿ ಮಾನವೀಯ ನೆಲೆ ಎಂಬ ವಿಷಯ ಕುರಿತು ಮಾತನಾಡಿದರು.
ಮಾನವೀಯ ನೆಲೆಯಲ್ಲಿ ಚಿಂತಿಸಿದ ಬುದ್ಧ, ಬಸವ, ಅಂಬೇಡ್ಕರ್ ಅವರ ಮಾತುಗಳ ಮೂಲಕವೇ ಆ ಕಾಲ ಘಟ್ಟಹಾಗೂ ಪ್ರಸ್ತುತ ವಿಧ್ಯಮಾನಗಳನ್ನು ವಿಶ್ಲೇಷಣಾತ್ಮಕವಾಗಿ ವಿಮರ್ಶಿಸಿ, ಅರಿವು, ದುಃಖ, ದುಮ್ಮಾನದ ನೆನಪಿನ ಕಣಜವನ್ನೇ ತೆರೆದಿಟ್ಟರು.ಬಸವಣ್ಣನವರದು ಸಮ ಸಮಾಜ ನಿರ್ಮಾಣಕ್ಕೆಎಲ್ಲರೂ ಸಮಾನರು ಮೇಲು ಕೀಳೆಂಬ ಭಾವದಿಂದ ಮುಕ್ತವಾಗುವ ಚಿಂತನೆ. ಅಂಬೇಡ್ಕರ್ ಅವರ ಜೀವನ ಚಿತ್ರಣ ನಮಗೆ ಅಕ್ಷರ ಜ್ಞಾನದಿಂದ ನಮ್ಮ ಜನಗಳು ಬದಲಾಗಬೇಕು. ಸಾಕ್ಷರತೆಯಿಂದ ಬದುಕಿನ ದುರಂತ ಕಾಲ ಮರೆಯಾಗಿ ಮಾನವೀಯ ನೆಲೆಯಲ್ಲಿ ಬದುಕುವಂತಹ ಸಂವಿಧಾನ ನಮಗೆ ನೀಡುವ ಮೂಲಕ ಶಾಶ್ವತ ಮೌಲ್ಯ ಣಿಡಿದರು. ನಮ್ಮ ಬದುಕಿಗೆ ನೆಲೆಯಾಗಿ ಮಾರ್ಗದರ್ಶನ ಮಾಡಿದ ಈ ಮಾಹಾನ್ ವ್ಯಕ್ತಿಗಳ ಬಗ್ಗೆ ಚಿಂತಿಸುವುದು ಹಾಗೂ ನಾವು ಅವರ ವಿಚಾರ ಮಂಥನದಿಂದ ಸಮ ಸಮಾಜದ ಬದುಕಿಗೆ ಮಾನವೀಯ ನೆಲೆ ಒಂದು ಆದರ್ಶವಾಗಿದೆ ಎಂದು ಹೇಳಿದರು. ಪುರಸಭಾ ಸದಸ್ಯ ಟಿ.ಎಂ.ಬೋಜರಾದ್ ಮಾತನಾಡಿ ಶ್ರಾವಣ ಸಾಹಿತ್ಯ ಸಂಭ್ರಮದ ಔಚಿತ್ಯ ಹಾಗೂ ಈ ಮಾಸದಲ್ಲಿ ಮಳೆ,ಬೆಳೆ ಸಂಮೃದ್ಧಿ ಕಾಲದಲ್ಲಿ ಮನೆಯಂಗಳದಲ್ಲಿ ಸಾಹಿತ್ಯವೆಂಬ ಕಾರ್ಯಕ್ರಮ ನಡೆಯುತ್ತಿರುವುದು ಸಂತೋಷ ತಂದಿದೆ . ಮುಂದಿನ ಯುವ ಜನಾಂಗಕ್ಕೆ ದಾರಿ ದೀಪವಾಗುವಂತಹ ಸಂಭ್ರಮ ಇದಾಗಿದೆ, ಸಾಹಿತ್ಯದ ಮನಸುಗಳನ್ನು ಇಲ್ಲಿ ಸೇರಿಸಿ ಕನ್ನಡ ಸಾಹಿತ್ಯ ಪರಿಷತ್ತು ಉತ್ತಮ ಕೆಲಸ ಮಾಡುತ್ತಿದೆ ಎಂದು ಹೇಳಿದರು.ಪುರಸಭಾ ಮಾಜಿ ಅಧ್ಯಕ್ಷ ಟಿ.ಎಸ್. ಪ್ರಕಾಶ್ ವರ್ಮ ಮಾತನಾಡಿ ಇಂತಹ ಸಂಭ್ರಮದ ಸಾಹಿತ್ಯ ಸೊಬಗಿನ ಕಾರ್ಯಕ್ರಮ ಶ್ರಾವಣ ಮಾಸದಲ್ಲಿ ನಡೆಸುತ್ತಿರುವುದು ಅಭಿನಂದನಾರ್ಹ ಎಂದು ತಿಳಿಸಿದರು.
ಮುಖಂಡರಾದ ಸಿದ್ಧರಾಮಯ್ಯ ದೀಪ ಹಚ್ಚುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ತಾಲೂಕು ಕಸಾಪ ಅಧ್ಯಕ್ಷ ರವಿ ದಳವಾಯಿ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಮನಸುಳಿ ಮೊಹನ್ ಮತ್ತು ಕುಟುಂಬದವರು, ಮಹಿಳಾ ಘಟಕದ ಅಧ್ಯಕ್ಷೆ ಸುನೀತಾ ಕಿರಣ್, ನಿವೃತ್ತ ಇಒ ವಿಶಾಲಾಕ್ಷಮ್ಮ, ಪುರಸಭಾ ಸದಸ್ಯ ಟಿ. ದಾದಪೀರ್, ಪುರಸಭಾ ಸದಸ್ಯ ಎಪಿಎಂಸಿ ಮಾಜಿ ನಿರ್ದೇಶಕ ಶ್ರೀಧರ್, ಚಿಂತಕ ಕವಾಲಿ ಸೋಮಣ್ಣ, ಪತ್ರಕರ್ತ ನಾಗರಾಜ್, ಖಲೀಲ್, ಕನ್ನಡಶ್ರೀ ಭಗವಾನ್, ಚಂದ್ರ ಶೇಖರ್, ರೇವಣ್ಣ, ಹಿರಿಯ ಕಸಾಪ ಸದಸ್ಯ ರೇವಣ್ಣ, ಯುವ ಘಟಕದ ಅಧ್ಯಕ್ಷ ಪ್ರೇಮ್ ಕುಮಾರ್, ಮುಗಳಿ ಮಂಜಯ್ಯ, ಕಸಾಪ ನಿಕಟಪೂರ್ವ ಅದ್ಯಕ್ಷ ನವೀನ್ ಪೆನ್ನಯ್ಯ, ನಗರ ಘಟಕ ಅಧ್ಯಕ್ಷ ಟಿ. ಸಿ. ದರ್ಶನ್, ಉಪನ್ಯಾಸಕ ಎ. ದಾದಾಪೀರ್, ಚೇತನ ಗೌಡ, ಬೇಲೇನಹಳ್ಳಿ ಗ್ರಾಪಂ ಕಸಾಪ ಅಧ್ಯಕ್ಷ ದೇವರಾಜ್ ಸಹ್ಯಾದ್ರಿ ಭಾಗವಹಿಸಿದ್ದರು.11ಕೆಟಿಆರ್.ಕೆ.10ಃ
ತರೀಕೆರೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮಹಿಳಾ ಘಟಕ, ನಗರ ಘಟಕ, ಹೋಬಳಿ ಘಟಕ ಹಾಗೂ ಯುವ ಘಟಕಗಳ ಆಶ್ರಯದಲ್ಲಿ ಸಾಹಿತಿ ಮನಸುಳಿ ಮೋಹನ್ ಅವರ ಮನೆಯಂಗಳದಲ್ಲಿ ನಡೆದ ಶ್ರಾವಣ ಸಾಹಿತ್ಯ ಸಂಭ್ರಮದಲ್ಲಿ ಅಜ್ಜಂಪುರ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಎಸ್. ಎನ್. ಆನಂದ್, ತಾಲೂಕು ಕಸಾಪ ಅಧ್ಯಕ್ಷ ರವಿ ದಳವಾಯಿ, ಸಾಹಿತಿ ಮನಸುಳಿ ಮೋಹನ್ ಮತ್ತಿತರರು ಇದ್ದರು. --------------------