ಸಾರಾಂಶ
ಮಾದಕ ವಸ್ತುಗಳ ಬಳಕೆ ಆರೋಗ್ಯಕ್ಕೆ ಹಾನಿಕರ ಮತ್ತು ಮಾನವೀಯತೆ ಮರೆಸುತ್ತದೆ. ಆದ ಕಾರಣ ಇಂದಿನ ಯುವಜನಾಂಗ ಎಚ್ಚರದಿಂದ ಆರೋಗ್ಯಕರ ಹವ್ಯಾಸಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಮುಖಂಡ ಮುರುಳೀಧರ ಹಾಲಪ್ಪ ತಿಳಿಸಿದರು.
ಕನ್ನಡಪ್ರಭವಾರ್ತೆ ಮಧುಗಿರಿ
ಮಾದಕ ವಸ್ತುಗಳ ಬಳಕೆ ಆರೋಗ್ಯಕ್ಕೆ ಹಾನಿಕರ ಮತ್ತು ಮಾನವೀಯತೆ ಮರೆಸುತ್ತದೆ. ಆದ ಕಾರಣ ಇಂದಿನ ಯುವಜನಾಂಗ ಎಚ್ಚರದಿಂದ ಆರೋಗ್ಯಕರ ಹವ್ಯಾಸಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಮುಖಂಡ ಮುರುಳೀಧರ ಹಾಲಪ್ಪ ತಿಳಿಸಿದರು.ಇಲ್ಲಿನ ಎಂ.ಎನ್.ಕೆ .ಸಮುದಾಯ ಭವನದಲ್ಲಿ ಸತ್ಯಸಾಯಿ ಸೇವಾ ಸಂಸ್ಥಾನದಿಂದ ಸಾಯಿಬಾಬರ ಜನ್ಮ ಶತಮಾನೋತ್ಸವ ಪ್ರಯುಕ್ತ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಹಿರಿಯರು, ಗುರುಗಳು ಹಾಗೂ ಪೋಷಕರು ಯುವಜನಾಂಗ ದಾರಿ ತಪ್ಪದಂತೆ ಎಚ್ಚರ ವಹಿಸಿ ಸೂಕ್ತ ಮಾರ್ಗದರ್ಶನ ನೀಡುವ ಜೊತೆಗೆ ಮಕ್ಕಳು ತಪ್ಪು ಹೆಜ್ಜೆ ಇಡದಂತೆ ಪೋಷಕರು ಮುತುವರ್ಜಿ ವಹಿಸಬೇಕು. ಯುವ ಶಕ್ತಿ ದುಶ್ಚಟಗಳಿಗೆ ದಾಸರಾಗದೇ ಸದಾ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಪಣ ತೊಡಬೇಕು ಎಂದ ಅವರು, ಮುಂಬರುವ ದಿನಮಾನಗಳಲ್ಲಿ ಹಾಲಪ್ಪ ಪ್ರತಿಷ್ಠಾನದಿಂದ ದತ್ತಿ ನಿಧಿ ಸ್ಥಾಪಿಸುವ ಇಂಗಿತ ವ್ಯಕ್ತಪಡಿಸಿದರು.ಸತ್ಯಸಾಯಿ ಸೇವಾ ಸಂಸ್ಥೆಯ ರಾಜ್ಯಾಧ್ಯಕ್ಷ ವೆಂಕಟರಮಣರೆಡ್ಡಿ ಮಾತನಾಡಿ,ದುಶ್ಚಟಗಳ ವಿರುದ್ಧ ಅರಿವು ಮೂಡಿಸಬೇಕಿದೆ. ಎಲ್ಲರಲ್ಲೂ ಸಮಾಜಮುಖಿ ಭಾವನೆಗಳ ಕೊರತೆ ಎದ್ದು ಕಾಣುತ್ತಿದೆ. ಈ ನಿಟ್ಟಿನಲ್ಲಿ ಸಾಯಿಬಾಬ ಕಲಿಯುಗದ ಅವತಾರದ ವೈಶಿಷ್ಟತೆ ಅರಿಯಬೇಕು ಎಂದರು. ಕಾರ್ಯಕ್ರಮದಲ್ಲಿ ಧಾರ್ಮಿಕ ಮುಖಂಡ ಡಾ.ಎಂ.ಜಿ.ಶ್ರೀನಿವಾಸಮೂರ್ತಿ,ಜಿಲ್ಲಾ ಸತ್ಯಸಾಯಿ ಸೇವಾ ಸಂಸ್ಥಾನದ ಜಿಲ್ಲಾಧ್ಯಕ್ಷ ಶಿವಕುಮಾರ್,ಮುಖಂಡರಾದ ವೀರೇಂದ್ರ, ಬದರಿನಾಥ್, ಪಿವಿ.ಮೋಹನ್, ಜಿ.ವಿ.ನಾಗರಾಜು, ಸುರೇಶ್,ಲಕ್ಷ್ಮೀ, ಪ್ರಮೀಳಾ, ಇಂದಿರಾ, ಮಣಿ, ಜ್ಯೋತಿ ಸೇರಿದಂತೆ ಅನೇಕರು ಇದ್ದರು.