ಸಾರಾಂಶ
ಹನುಮಸಾಗರ: ಮಾನವೀಯತೆ ಎಂಬುದು ಪದವಲ್ಲ, ಅದು ಜೀವನದ ಧ್ಯೇಯ. ಸಣ್ಣ ಕೆಲಸದಲ್ಲೂ ಮಾನವೀಯತೆ ತೋರುವಾಗ ಸಮಾಜದಲ್ಲಿ ನಿಜವಾದ ಬದಲಾವಣೆ ಸಾಧ್ಯ ಎಂದು ಕಸಾಪ ಮಾಜಿ ಅಧ್ಯಕ್ಷ ಚಂದಪ್ಪ ಹಕ್ಕಿ ಹೇಳಿದರು.
ಗ್ರಾಮದ ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ ವೆಂಕಟರಾವ್ ಪಂತ ಹಾಗೂ ಚಂದಾಲಿಂಗಪ್ಪ ಬಾಚಲಾಪುರ ಅವರ ಸ್ಮರಣಾರ್ಥ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾನವೀಯ ಮೌಲ್ಯಗಳ ಕುರಿತು ಅವರು ಮಾತನಾಡಿದರು. ಮಕ್ಕಳಲ್ಲಿ ಮೌಲ್ಯಯುತ ಶಿಕ್ಷಣ ಬೆಳೆಸುವುದು ನಮ್ಮ ಮೊದಲ ಜವಾಬ್ದಾರಿ. ಸಂಸ್ಕೃತಿ–ಧರ್ಮ ಸಂಬಂಧ ಭಾರತೀಯತೆಯ ಬೆಳೆಸಬೇಕು ಎಂದರು.“ಸಂಸ್ಕೃತಿ ಮತ್ತು ಧರ್ಮ” ವಿಷಯವಾಗಿ ಬಸವರಾಜ ದಟ್ಟಿ ಮಾತನಾಡಿ, ಭಾರತೀಯ ಸಂಸ್ಕೃತಿ ಸಹಿಷ್ಣುತೆ, ಪರಸ್ಪರ ಗೌರವ ಮತ್ತು ಬಾಂಧವ್ಯದ ಸಂಕೇತ. ಧರ್ಮವಲ್ಲ, ಧಾರ್ಮಿಕತೆಯೇ ಮನುಜರನ್ನು ಒಗ್ಗೂಡಿಸುತ್ತದೆ ಎಂದರು.
ನಿಸರ್ಗ ಸಂಗೀತ ಶಾಲೆಯ ಅಧ್ಯಕ್ಷ ಮಲ್ಲಯ್ಯ ಕೋಮಾರಿ ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕನ್ನಡ ಸಾಹಿತ್ಯವು ಮಾನವೀಯತೆಯ ಸಾರವನ್ನು ವಿಶ್ವದ ಮುಂದೆ ತೋರಿಸಿದೆ. ಇಂತಹ ವೇದಿಕೆಗಳು ಮೌಲ್ಯಾಧಾರಿತ ಸಮಾಜ ನಿರ್ಮಾಣದ ದಿಕ್ಕಿನಲ್ಲಿ ಬೆಳಕಾಗುತ್ತವೆ ಎಂದರು.ತಾಲೂಕು ಕಸಾಪ ಅಧ್ಯಕ್ಷ ಲೆಂಕಪ್ಪ ವಾಲಿಕಾರ ಅಧ್ಯಕ್ಷತೆ ವಹಿಸಿದರು. ಮಹಮ್ಮದ್ ಅಬ್ದುಲ್ ಕರೀಂ ವಂಟೆಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿದ್ದಪ್ಪ ಹಕ್ಕಿ, ಹೋಬಳಿ ಅಧ್ಯಕ್ಷ ಮಂಜುನಾಥ ಗುಳೇದಗುಡ್ಡ, ಶಿವಶಂಕರ ಮೆದಿಕೇರಿ, ಚಂದಪ್ಪ ಹಕ್ಕಿ, ಇಂದಿರಾ ಗಾಂಧಿ ವಸತಿ ಶಾಲೆಯ ಶಿಕ್ಷಕ ಪ್ರಭಾಕರ ಮುದುಗಲ್ಲ, ಬಸವರಾಜ ಚೌಡಾಪುರ, ಕವಿತಾ ಬೆನಕನವಾರಿ, ಸುಧಾ ಗೌಡರ, ಅಮರೇಶ ಭೋವಿ, ಸಿಬ್ಬಂದಿ ಮೈಲಾರಪ್ಪ ಕರಪಡಿ, ಮುತ್ತು ಅಗಸಿಮುಂದಿನ, ಗ್ಯಾನಪ್ಪ ತಳವಾರ, ಬಿ.ಎಂ. ಚಿನಿವಾಲರ, ಶಾಮೀದ ವಾಲಿಕಾರ, ಕವಿತಾ ಬೆನಕನವಾರಿ ಸುನಂದಾ ಮೆದಿಕೇರಿ ಇತರರು ಇದ್ದರು.
;Resize=(128,128))
;Resize=(128,128))