ಮಾನವ ಕುಲ ಒಂದಾಗಿ ಬಾಳಬೇಕು

| Published : Apr 19 2025, 12:35 AM IST

ಸಾರಾಂಶ

ದೇಶ ಅಭಿವೃದ್ಧಿಯಾಗಬೇಕಾದರೇ ನಾವೆಲ್ಲ ಒಂದಾಗಿರಬೇಕು ಎಂದು ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ಹೇಳಿದರು.

ಕನ್ನಡಪ್ರಭ ವಾರ್ತೆ ಬೈಲಹೊಂಗಲ

ದೇಶ ಅಭಿವೃದ್ಧಿಯಾಗಬೇಕಾದರೇ ನಾವೆಲ್ಲ ಒಂದಾಗಿರಬೇಕು ಎಂದು ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ಹೇಳಿದರು.

ಪಟ್ಟಣದ ಮುರಗೋಡ ರಸ್ತೆಯ ಶ್ರೀಮಾತಾ ದುರ್ಗಾ ಮಾತಾ ಪರಮೇಶ್ವರಿ ದೇವಸ್ಥಾನದ 15ನೇ ವರ್ಷದ ಜಾತ್ರಾ ಮಹೋತ್ಸವ ಹಾಗೂ ಧರ್ಮಸಭೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಠ-ಮಾನ್ಯಗಳ ಮಾರ್ಗದರ್ಶನದಲ್ಲಿ ಮಾನವ ಕುಲ ಒಂದಾಗಿ ಬಾಳಬೇಕು. ಶ್ರೀದುರ್ಗಾ ಮಾತೆ ಆಶೀರ್ವಾದದಿಂದ ಈ ನಾಡಿಗೆ ಸಕಾಲಕ್ಕೆ ಮಳೆ, ಬೆಳೆಗಳಾಗಿ ಎಲ್ಲರೂ ಸಮೃದ್ಧಿ ಸಂತೃಪ್ತಿಯಿಂದ ಜೀವನ ನಡೆಸಲಿ. ಈ ಭಾಗದಲ್ಲಿ ಪ್ರತಿ ವರ್ಷವೂ ಜಾತಿ ಮತ ಪಂಥಗಳೆನ್ನದೇ ಸಾವಿರಾರು ಭಕ್ತರನ್ನು ಸೇರಿಸಿ ಭಕ್ತಿ ವೈಭವದ ಜಾತ್ರೆ ನಡೆಸುತ್ತ ಬಂದಿರುವ ಮಹಾಂತೇಶ ಶಾಸ್ತ್ರೀ ಆರಾದ್ರಿಮಠರ ಕಾರ್ಯ ಶ್ಲಾಘನೀಯವಾಗಿದೆ ಎಂದರು.ಹುಕ್ಕೇರಿ ಹಿರೇಮಠದ ಡಾ.ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಮುರಗೋಡ ನೀಲಕಂಠ ಸ್ವಾಮೀಜಿ, ಕಿತ್ತೂರು ಕಲ್ಮಠದ ಮಡಿವಾಳ ರಾಜಯೋಗಿಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕರಾದ ಮಹಾಂತೇಶ ಕೌಜಲಗಿ, ಬಾಬಾಸಾಹೇಬ್‌ ಪಾಟೀಲ ಮಾತನಾಡಿದರು. ಮಾಜಿ ಶಾಸಕರಾದ ಡಾ.ವಿಶ್ವನಾಥ ಪಾಟೀಲ, ಜಗದೀಶ ಮೆಟಗುಡ್ಡ, ಪುರಸಭೆ ಅಧ್ಯಕ್ಷ ವಿಜಯ ಬೋಳನ್ನವರ, ಶಿವಾನಂದ ಕುಡಸೋಮನ್ನವರ, ಪುರಸಭೆ ಸದಸ್ಯ ಬಸವರಾಜ ಜನ್ಮಟ್ಟಿ, ಎಫ್.ಎಸ್.ಸಿದ್ದನಗೌಡರ, ಶಂಕರ ಮಾಡಲಗಿ, ಡಾ.ಎಸ್.ಎಸ್.ಸಿದ್ದನ್ನವರ, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎನ್.ಪ್ಯಾಟಿ, ಸೋಮನಾಥ ಸೊಪ್ಪಿಮಠ, ಪ್ರಮೋದಕುಮಾರ ವಕ್ಕುಂದಮಠ, ಈಶ್ವರ ಹೋಟಿ, ರಾಜು ಕುಡಸೋಮನ್ನವರ, ಶ್ರೀಶೈಲ ಯಡಳ್ಳಿ, ಬಿಗ್ ಬಾಸ್ ಕಲಾವಿದೆ ಗೌತಮಿ ಜಾಧವ ಸೇರಿದಂತೆ ಅನೇಕರು ಇದ್ದರು. ಧರ್ಮಾಧಿಕಾರಿ ಡಾ.ಮಹಾಂತೇಶ ಶಾಸ್ತ್ರಿ ಆರಾದ್ರಿಮಠ ಸ್ವಾಗತಿಸಿದರು. ಮುತ್ತುರಾಜ ಮತ್ತಿಕೊಪ್ಪ ನಿರೂಪಿಸಿದರು.