ಸಾರಾಂಶ
ಯಡಿಯಾಪೂರ ಗ್ರಾಮದಲ್ಲಿ ಸಿದ್ದಲಿಂಗೇಶ್ವರ ದೇವಸ್ಥಾನಕ್ಕೆ ತನ್ನದೆ ಆದ ಐತಿಹ್ಯ ಇದೆ. ಇದು ಶ್ರದ್ಧಾ, ಭಕ್ತಿಯ ಕ್ಷೇತ್ರ ಆಗಿದೆ
ಕುಕನೂರು: ಮನುಕುಲದ ಒಳಿತು ಧರ್ಮದ ಹಾದಿಯಲ್ಲಿ ಇದೆ ಎಂದು ಗುರಗುಂಟಾ ಅಮರೇಶ್ವರದ ಶ್ರೀಗಜದಂಡ ಸ್ವಾಮೀಜಿ ಹೇಳಿದರು.
ತಾಲೂಕಿನ ಯಡಿಯಾಪೂರ ಗ್ರಾಮದ ಶ್ರೀಸಿದ್ದಲಿಂಗೇಶ್ವರ ದೇವಸ್ಥಾನದಲ್ಲಿ ಸಿದ್ದೇಶ್ವರ ಮೂರ್ತಿ ಪ್ರತಿಷ್ಠಾಪಿಸಿ ಆಶೀರ್ವಚನ ನೀಡಿದ ಅವರು, ಪ್ರತಿಯೊಬ್ಬರು ಭಕ್ತಿ ಮಾರ್ಗ ಹೊಂದಬೇಕು. ಭಕ್ತಿ ಮಾರ್ಗದಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ನಿತ್ಯ ದೇವರ ದರ್ಶನದಿಂದ ಸಿದ್ದಿ ಪ್ರಾಪ್ತಿ ಆಗುತ್ತದೆ. ಸಿದ್ದಿ ಎಂಬುದು ಏಕಾಗ್ರತೆ ಪ್ರತೀಕ. ಮನುಷ್ಯ ಪೂಜೆ, ಧಾರ್ಮಿಕ ಕಾರ್ಯದಲ್ಲಿ ತೊಡಗುವುದರಿಂದ ಧರ್ಮದ ಹಾದಿಯಲ್ಲಿ ಸದಾ ಇರಲು ಸಾಧ್ಯ ಎಂದರು.ಯಲಬುರ್ಗಾದ ಶ್ರೀಧರ ಮುರುಡಿ ಹಿರೇಮಠದ ಬಸವಲಿಂಗೇಶ್ವರ ಶಿವಾಚಾರ್ಯರು ಮಾತನಾಡಿ, ಯಡಿಯಾಪೂರ ಗ್ರಾಮದಲ್ಲಿ ಸಿದ್ದಲಿಂಗೇಶ್ವರ ದೇವಸ್ಥಾನಕ್ಕೆ ತನ್ನದೆ ಆದ ಐತಿಹ್ಯ ಇದೆ. ಇದು ಶ್ರದ್ಧಾ, ಭಕ್ತಿಯ ಕ್ಷೇತ್ರ ಆಗಿದೆ. ಮಾನವಾಭಿವೃದ್ಧಿಗೆ ಆಗಬೇಕಿದೆ. ಮಾನವ ಮಾನವೀಯತೆ ಮರೆಯುತ್ತಿದ್ದಾನೆ. ಹಿರಿಯರು ಹಾಕಿಕೊಟ್ಟ ಮಾರ್ಗ ಯುವ ಪಿಳೀಗೆ ಮರೆಯುತ್ತಿದೆ. ಇದರಿಂದ ಮಾನವೀಯತೆ ಎಂಬುದು ಕ್ಷೀಣ ಆಗುತ್ತಿದೆ. ಮಕ್ಕಳಿಗೆ ಸಂಸ್ಕಾರ ಕಲಿಸುವ ಕಾರ್ಯ ಆಗಬೇಕು ಎಂದರು.
ಕುಕನೂರಿನ ಅನ್ನದಾನೀಶ್ವರ ಶಾಖಾಮಠದ ಶ್ರೀಮಹಾದೇವ ಸ್ವಾಮೀಜಿ ಮಾತನಾಡಿ, ಮನುಷ್ಯನು ಪೂರ್ಣವಾಗಿ ಸಿದ್ದನಾಗಬೇಕಾದರೆ ಒಮ್ಮೆಯಾದರೂ ಯಡಿಯಾಪೂರದ ಸಿದ್ದಲಿಂಗೇಶ್ವರ ದೇವರ ದರ್ಶನ ಪಡೆಯಬೇಕು. ಇಲ್ಲಿಯ ಶಕ್ತಿ ಅಪಾರ ಎಂದರು.ದೇವಸ್ಥಾನದಲ್ಲಿ ಮೂರ್ತಿ ಪ್ರತಿಷ್ಠಾಪನಾ ಕಾರ್ಯ ಜರುಗಿತು. ದೇವಸ್ಥಾನದ ಮಂಡಳಿಯ ಅಂದಪ್ಪ ಜವಳಿ, ಹರೀಶ್ವರ, ಸಿದ್ದಯ್ಯ ಹಿರೇಮಠ ಹಾಗೂ ಗ್ರಾಮಸ್ಥರಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))