ಮಾನವರು ಅಗತ್ಯ ಕಲೆ, ಸಂಸ್ಕೃತಿ ಮೈಗೂಡಿಸಿಕೊಳ್ಳುವಲ್ಲಿ ವಿಫಲ: ಆರ್.ಟಿ.ಒ ಅಧಿಕಾರಿ ಸಂಘದ ಮಲ್ಲಿಕಾರ್ಜುನ್

| Published : Nov 01 2025, 01:45 AM IST

ಮಾನವರು ಅಗತ್ಯ ಕಲೆ, ಸಂಸ್ಕೃತಿ ಮೈಗೂಡಿಸಿಕೊಳ್ಳುವಲ್ಲಿ ವಿಫಲ: ಆರ್.ಟಿ.ಒ ಅಧಿಕಾರಿ ಸಂಘದ ಮಲ್ಲಿಕಾರ್ಜುನ್
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನಲ್ಲಿ ರಂಗಭೂಮಿ ಚಟುವಟಿಕೆಗಳು ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿವೆ. ಇದರಿಂದ ಯುವ ಕಲಾವಿದರು ಹೊರ ಬರುತ್ತಿದ್ದಾರೆ. ಕೆಲವು ರಂಗಭೂಮಿ ಸಂಘಟಕರು ಎಲ್ಲಾ ನಾಟಕ ತಂಡದ ಕಲಾವಿದರನ್ನು ಒಗ್ಗೂಡಿಸಿ, ಪಟ್ಟಣದಲ್ಲಿ ಕಳೆದ ಹತ್ತಾರು ದಿನಗಳಿಂದ ನಾಟಕೋತ್ಸವದ ಹೆಸರಿನಲ್ಲಿ ನಾಟಕಗಳನ್ನು ಅಭಿನಯಿಸುತ್ತಾ ಕಲಾಭಿಮಾನಿಗಳಿಗೆ ನಾಟಕಗಳತ್ತ ಆಕರ್ಷಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಮಾನವರು ತಾಂತ್ರಿಕತೆಯಲ್ಲಿ ಮುಂದುವರಿಯುತ್ತಿದ್ದರೂ ಶಾಂತಿಯ ಸಮಾಜಕ್ಕೆ ಅಗತ್ಯವಾದ ಕಲೆ ಮತ್ತು ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದು ರಾಜ್ಯ ಆರ್.ಟಿ.ಒ ಅಧಿಕಾರಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ್ ಅಭಿಪ್ರಾಯಪಟ್ಟರು.

ಪಟ್ಟಣದ ಶ್ರೀ ರಂಗ ಚಿತ್ರಮಂದಿರ ಆವರಣದಲ್ಲಿ ಡಾ.ರಾಜ್ ಕುಮಾರ್ ಕಲಾಸಂಘ ಏರ್ಪಡಿಸಿದ ನಾಟಕೋತ್ಸವದಲ್ಲಿ ಶ್ರೀ ಜೈ ಭುವನೇಶ್ವರಿ ಕಲಾ ಸಂಘದಿಂದ ಅಭಿನಯಿಸಿದ ಸಂಪೂರ್ಣ ರಾಮಾಯಣ ಪೌರಾಣಿಕ ನಾಟಕ ಉದ್ಘಾಟಿಸಿ ಮಾತನಾಡಿದರು.

ತಾಲೂಕಿನಲ್ಲಿ ರಂಗಭೂಮಿ ಚಟುವಟಿಕೆಗಳು ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿವೆ. ಇದರಿಂದ ಯುವ ಕಲಾವಿದರು ಹೊರ ಬರುತ್ತಿದ್ದಾರೆ. ಕೆಲವು ರಂಗಭೂಮಿ ಸಂಘಟಕರು ಎಲ್ಲಾ ನಾಟಕ ತಂಡದ ಕಲಾವಿದರನ್ನು ಒಗ್ಗೂಡಿಸಿ, ಪಟ್ಟಣದಲ್ಲಿ ಕಳೆದ ಹತ್ತಾರು ದಿನಗಳಿಂದ ನಾಟಕೋತ್ಸವದ ಹೆಸರಿನಲ್ಲಿ ನಾಟಕಗಳನ್ನು ಅಭಿನಯಿಸುತ್ತಾ ಕಲಾಭಿಮಾನಿಗಳಿಗೆ ನಾಟಕಗಳತ್ತ ಆಕರ್ಷಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದರು.

ಕಲಾವಿದರಿಗೆ ನಿರಾಸೆಯಾಗದಂತೆ ನಾಟಕವನ್ನು ನೋಡುವವರ ಸಂಖ್ಯೆಯೂ ಹೆಚ್ಚುತ್ತಿರುವುದನ್ನು ನೋಡಿದರೆ ಅಧುನಿಕ ತಂತ್ರಜ್ಞಾನದ ಯುಗದಲ್ಲೂ ನಮ್ಮ ಪೌರಾಣಿಕ ನಾಟಕಗಳು ಜನಮನದಲ್ಲಿ ನಿಂತಿವೆ ಎನ್ನುವುದು ಸಾಬೀತಾಗುತ್ತಿದೆ ಎಂದು ಹೇಳಿದರು.

ತಾಲೂಕು ಡಾ.ರಾಜ್ ಕುಮಾರ್ ಕಲಾ ಸಂಘದಿಂದ ಮೊದಲ ಬಾರಿಗೆ ನಾಟಕೋತ್ಸವ ನಡೆಯುತ್ತಿದೆ. ಟಿವಿ, ಮೊಬೈಲ್ ಹಾವಳಿಯಲ್ಲೂ ಪಟ್ಟಣದಲ್ಲಿ ನಾಟಕ ಪ್ರದರ್ಶನ ಕಾಣುತ್ತಿರುವುದು ಮೆಚ್ಚುಗೆಯ ವಿಚಾರ ಎಂದು ತಿಳಿಸಿದರು.ಈ ವೇಳೆ ಡಾ.ರಾಜ್ ಕುಮಾರ್ ಕಲಾಸಂಘದ ಅಧ್ಯಕ್ಷ ಎಲ್.ಐ.ಸಿ ಕುಮಾರ್, ಹಿರಿಯ ಕಲಾವಿದ ಸಿ.ಎಚ್.ನಾಗರಾಜು, ಹರಿಹರಪುರ ಮಹದೇವೇಗೌಡ, ಶಿವಮೂರ್ತಿ, ಹರೀಶ್, ಶಂಕರೇಗೌಡ, ಕಾಳಯ್ಯ, ನಂದೀಶ್, ಚನ್ನಬಸಪ್ಪ, ಸಿದ್ದರಾಜು, ಪ್ರಭಾಕರ್, ಎಚ್.ವೈ. ರವಿ, ನಂಜುಂಡ ಸೇರಿ ಹಲವರು ಉಪಸ್ಥಿತರಿದ್ದರು.