ಇಂದಿನ ಒತ್ತಡದ ಬದುಕಿನಲ್ಲಿ ಮನುಷ್ಯ ಆರೋಗ್ಯ ರಕ್ಷಣೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಮಾಜಿ ಶಾಸಕ ಅರುಣಕುಮಾರ ಪೂಜಾರ ಹೇಳಿದರು.
ರಾಣಿಬೆನ್ನೂರು: ಇಂದಿನ ಒತ್ತಡದ ಬದುಕಿನಲ್ಲಿ ಮನುಷ್ಯ ಆರೋಗ್ಯ ರಕ್ಷಣೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಮಾಜಿ ಶಾಸಕ ಅರುಣಕುಮಾರ ಪೂಜಾರ ಹೇಳಿದರು.
ನಗರದ ಪೋಸ್ಟ್ ಸರ್ಕಲ್ ಬಳಿ ಲಕ್ಷ್ಮಿ ಸರ್ಜಿಕಲ್ ಆಸ್ಪತ್ರೆ ವತಿಯಿಂದ ಭಾನುವಾರ ವಿಶ್ವ ಸಂಧಿವಾತ ದಿನಾಚರಣೆ ಅಂಗವಾಗಿ ಪೋಸ್ಟ್ ಸರ್ಕಲ್ ಬಳಿಯಿಂದ ಬಸ್‌ನಿಲ್ದಾಣ ರಸ್ತೆಯ ಅನಂತ ಹೋಟೆಲ್‌ವರೆಗೆ ಏರ್ಪಡಿಸಿದ್ದ ಮಂಡಿಚಿಪ್ಪು ಶಸ್ತ್ರಚಿಕಿತ್ಸೆಗೆ ಒಳಗಾದವರ ವಾಕಥಾನ್‌ಗೆ ಚಾಲನೆ ನೀಡಿ ಮಾತನಾಡಿದರು. ಸಾಕಷ್ಟು ಜನರಲ್ಲಿ ವಯಸ್ಸಾದಂತೆ ಸಂಧಿವಾತ ತುಂಬಾ ಬಾಧಿಸುತ್ತದೆ. ಅದಕ್ಕಾಗಿ ಸೂಕ್ತ ಜೀವನ ಶೈಲಿ ಮತ್ತು ಚಿಕಿತ್ಸೆಯಿಂದ ಇದನ್ನು ನಿಯಂತ್ರಣದಲ್ಲಿಡಬಹುದು ಎಂದರು.ಮಂಡಿಚಿಪ್ಪಿನ ಶಸ್ತ್ರಚಿಕಿತ್ಸೆಗೆ ಒಳಗಾದ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸುಮಾರು ನೂರಕ್ಕೂ ಹೆಚ್ಚು ಜನರು ಆಗಮಿಸಿ ವಾಕ್‌ಥಾನದಲ್ಲಿ ಪಾಲ್ಗೊಂಡಿದ್ದರು. ಡಾ. ಸಂಜೀವ ಮುದ್ರಿ, ಡಾ. ಬಸವರಾಜ ಕೆಂಗೊಂಡ, ಡಾ. ಸುಮುಖ ಮುದ್ರಿ, ಡಾ. ಗೌರಿ ಮುದ್ರಿ, ಡಾ. ವಿ.ಎಂ.ಜೋಷಿ, ಕೆ.ಎನ್. ಪಾಟೀಲ, ಸಂಕಪ್ಪ ಮಾರನಾಳ ಮತ್ತಿತರರಿದ್ದರು.