ಹುಣಸಗಿ: ಶಾಲಾ ವಾಹನ ಡಿಕ್ಕಿ, ಮಕ್ಕಳಿಗೆ ಗಾಯ

| Published : Jul 01 2025, 12:47 AM IST

ಸಾರಾಂಶ

Hunasagi: School vehicle collides, children injured

ಕನ್ನಡಪ್ರಭ ವಾರ್ತೆ ಹುಣಸಗಿ

ಪಟ್ಟಣದ ಹೊರವಲಯದಲ್ಲಿರುವ ಆಶೀರ್ವಾದ ಗ್ಲೋಬಲ್ ಶಾಲಾ ವಾಹನವೊಂದು ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಹಲವು ಮಕ್ಕಳಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಪಟ್ಟಣದ ಬಸವೇಶ್ವರ ವೃತ್ತದ ಹತ್ತಿರ ಸುಮಾರು 9.30 ಕ್ಕೆ ಶಾಲಾ ಮಕ್ಕಳನ್ನು ಕರೆದುಕೊಂಡು ಬಸವೇಶ್ವರ ನಗರದ ಎರಡನೇ ರಸ್ತೆಯಿಂದ ತಾಳಿಕೋಟಿ-ಸುರಪೂರ ಮುಖ್ಯ ರಸ್ತೆ ಕ್ರಾಸ್ ಮಾಡುತ್ತಿರುವಾಗ, ವಾಹನ ಚಾಲಕ ಮೊಬೈಲಿನಲ್ಲಿ ಮಾತನಾಡುತ್ತ, ಎದುರಿಗೆ ನಿಂತಿದ್ದ ಲಾರಿಗೆ ರಭಸವಾಗಿ ಡಿಕ್ಕಿ ಹೊಡೆದ ಪರಿಣಾಮ ವಾಹನದಲ್ಲಿರುವ ಹಲವು ಮಕ್ಕಳಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಕನ್ನಡಪ್ರಭ ಪತ್ರಿಕೆಗೆ ಮಾಹಿತಿ ತಿಳಿಸಿದ್ದಾರೆ. ಡಿಕ್ಕಿ ಹೊಡೆದ ಪರಿಣಾಮ ಶಾಲಾ ವಾಹನ ಮುಂಭಾಗ ಜಖಂಗೊಂಡಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಲಿಲ್ಲ ಎಂದು ತಿಳಿದುಬಂದಿದೆ.

---000---