ಗಂಜಾಂನ ಪ್ರಸಿದ್ಧ ಶ್ರೀನಿಮಿಷಾಂಬ ದೇವಾಲಯ ಸಮಿತಿ ಅಧ್ಯಕ್ಷ ದಯಾನಂದ್ ಹಾಗೂ ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಮಹೇಶ್ ನೇತೃತ್ವದಲ್ಲಿ ನಡೆದ ಏಣಿಕೆಯಲ್ಲಿ ದೇವಾಲಯದ 18 ಹುಂಡಿಗಳ ಏಣಿಕೆ ಮಾಡಲಾಗಿತ್ತು. 43,96,783 ರುಪಾಯಿ ಸಂಗ್ರಹವಾಗಿದೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಪಟ್ಟಣ ಹೊರವಲಯದ ಗಂಜಾಂನ ಪ್ರಸಿದ್ಧ ಶ್ರೀನಿಮಿಷಾಂಬ ದೇವಾಲಯದ ಭಕ್ತರ ಕಾಣಿಕೆ ಹುಂಡಿ ಎಣಿಕೆ ಕಾರ್ಯ ನಡೆಯಿತು.

ದೇವಾಲಯ ಸಮಿತಿ ಅಧ್ಯಕ್ಷ ದಯಾನಂದ್ ಹಾಗೂ ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಮಹೇಶ್ ನೇತೃತ್ವದಲ್ಲಿ ನಡೆದ ಏಣಿಕೆಯಲ್ಲಿ ದೇವಾಲಯದ 18 ಹುಂಡಿಗಳ ಏಣಿಕೆ ಮಾಡಲಾಗಿತ್ತು. 43,96,783 ರುಪಾಯಿ ಸಂಗ್ರಹವಾಗಿದೆ.

2025ರ ಅ.13ರಂದು ಹುಂಡಿ ಏಣಿಕೆ ನಡೆದಿತ್ತು. ಎರಡುವರೆ ತಿಂಗಳಿಗೆ ನಡೆಸಲಾದ ಎಣಿಕೆ ಕಾರ್ಯದಲ್ಲಿ ಭಕ್ತರಿಂದ ನೀಡಿರುವ ಕಾಣಿಕೆ ಹುಂಡಿಯಲ್ಲಿ 49 ಗ್ರಾಂ ಚಿನ್ನ ಹಾಗೂ 525 ಗ್ರಾಂ ಬೆಳ್ಳಿ ದೊರೆತಿದೆ.

ಶ್ರೀರಂಗಪಟ್ಟಣ ಕೆನರಾ ಬ್ಯಾಂಕ್‌ನ ವ್ಯವಸ್ಥಾಪಕ ರಮೇಶ್, ಪ್ರಾದೇಶಿಕ ವ್ಯವಸ್ಥಾಪಕ ಸಂತೋಷ್, ಸಿಬ್ಬಂದಿ, ಸ್ತ್ರೀಶಕ್ತಿ ಸಂಘದ ಮಹಿಳೆಯರು ಹಾಗೂ ದೇವಾಲಯದ ಸಿಬ್ಬಂದಿ ಏಣಿಕೆಯಲ್ಲಿ ಭಾಗಿಯಾಗಿದ್ದರು.

ಈ ವೇಳೆ ದೇವಾಲಯದ ಸಮಿತಿ ಸದಸ್ಯರಾದ ಸೂರ್ಯನಾರಾಯಣ ಭಟ್, ಬಾಲಸುಬ್ರಮಣ್ಯ, ಎಸ್ ಕೃಷ್ಣ, ಭಾಗ್ಯಮ್ಮ, ಟಿ.ಕೃಷ್ಣ, ದೇವಾಲಯದ ಅಧೀಕ್ಷಕಿ ರಮ್ಯ ಕೃಷ್ಣ, ಸಂದೀಪ್ ಸೇರಿದಂತೆ ಇತರ ದೇವಾಲಯದ ಸಿಬ್ಬಂದಿ ಎಣಿಕೆಯಲ್ಲಿ ಹಾಜರಿದ್ದರು.

ಜ.9ರಂದು ಸಿಡಿಹಬ್ಬದ ಪೂರ್ವಭಾವಿ ಸಭೆ

ಮಳವಳ್ಳಿ:

ಪಟ್ಟಣದ ಗ್ರಾಮದೇವತೆ ಶ್ರೀದಂಡಿನಮಾರಮ್ಮ ಹಾಗೂ ಶ್ರೀಪಟ್ಟಲದಮ್ಮ ಸಿಡಿಹಬ್ಬದ ಅಂಗವಾಗಿ ಪೂರ್ವಭಾವಿ ಸಭೆಯೂ ಉಪವಿಭಾಗಾಧಿಕಾರಿ ಶಿವಮೂರ್ತಿ ಅವರ ಅಧ್ಯಕ್ಷತೆಯಲ್ಲಿ ಜ.೯ರಂದು ಬೆಳಗ್ಗೆ ೧೧ ಗಂಟೆಗೆ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ನಡೆಯಲಿದೆ. ಪಟ್ಟಣದ ಮದ್ದೂರು ರಸ್ತೆಯ ದೊಡ್ಡಕರೆ ಸಮೀತ ನೆಲೆಸಿರುವ ಶ್ರೀದಂಡಿನಮಾರಮ್ಮನ ಹಬ್ಬವು ಜ.೨೭ರಂದು ಜರುಗಲಿದ್ದು, ಜ.೩೦,೩೧ರಂದು ಶ್ರೀ ಪಟ್ಟಲದಮ್ಮ ಸಿಡಿ ಹಬ್ಬವು ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಬಣೆಯಿಂದ ಜರುಗಲಿದೆ.

ಪ್ರತಿಯೊಂದು ಸಮುದಾಯದವರು ಒಂದೊಂದು ಜವಾಬ್ದಾರಿಯೊಂದಿಗೆ ಭಾವೈಕ್ಯತೆ ಸಂಕೇತವಾಗಿ ಆಚರಿಸಲ್ಪಡುವ ಸಿಡಿಹಬ್ಬದ ಅಂಗವಾಗಿ ಶಾಂತಿ ಸುವ್ಯವಸ್ಥೆ ಹಾಗೂ ಮೂಲಭೂತ ಸೌಲಭ್ಯದ ಬಗ್ಗೆ ಸಮಗ್ರವಾಗಿ ಚರ್ಚೆ ನಡೆಸಲು ಹಮ್ಮಿಕೊಂಡಿರುವ ಪೂರ್ವಭಾವಿ ಸಭೆಗೆ ಎಲ್ಲಾ ಸಮುದಾಯದ ಮುಖಂಡರು ಹಾಗೂ ಅಧಿಕಾರಿಗಳು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ತಹಸೀಲ್ದಾರ್ ಲೋಕೇಶ್‌ ಪ್ರಕಟಣೆಯಲ್ಲಿ ಕೋರಿದ್ದಾರೆ.