ಸಾರಾಂಶ
ಸಾಧನೆ । ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.81.32 ಫಲಿತಾಂಶ । ಬಿಜಿಎಸ್‌ನ ಜಿ.ಜೆ. ಪೂಜಾ 621 ಅಂಕದೊಂದಿಗೆ ತಾಲೂಕಿಗೆ ಪ್ರಥಮ
ಕನ್ನಡಪ್ರಭ ವಾರ್ತೆ ಅರಕಲಗೂಡುಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.81.32 ಫಲಿತಾಂಶ ಪಡೆದಿರುವ ತಾಲೂಕಿನ ನಾಲ್ಕು ಶಾಲೆಗಳು ಶೇ 100 ರಷ್ಟು ಫಲಿತಾಂಶ ಪಡೆದಿವೆ.
ಬರಗೂರು ಮೊರಾರ್ಜಿ ವಸತಿ ಶಾಲೆ, ದೊಡ್ಡಮಗ್ಗೆ ಡಾ ಅಂಬೇಡ್ಕರ್ ವಸತಿಶಾಲೆ, ಅರಕಲಗೂಡಿನ ಬಿಜಿಎಸ್ ಆಂಗ್ಲ ಮಾಧ್ಯಮ ಶಾಲೆ, ರಚನ ವಿದ್ಯಾಲಯ ಹಾಗೂ ಗುಬ್ಬಿಕ್ರಾಸ್‌ನ ಬೇತಲ್ ಪಬ್ಲಿಕ್ ಶಾಲೆ ಶೇ 100 ಫಲಿತಾಂಶ ಪಡೆದಿವೆ.ಪಟ್ಟಣದ ಬಿಜಿಎಸ್ ಆಂಗ್ಲ ಮಾಧ್ಯಮ ಶಾಲೆಯ ಜಿ.ಜೆ.ಪೂಜಾ 621 ಅಂಕಗಳನ್ನು ಪಡೆದು ತಾಲೂಕಿಗೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಕೊಣನೂರಿನ ಎಂಕೆಎಸ್ ವಿದ್ಯಾ ನಿಕೇತನ ಶಾಲೆಯ ಕೆ.ಆರ್. ಭಾರ್ಗವಿ ಸುಚರಿತ, ಬಿಜಿಎಸ್ ಶಾಲೆಯ ವಿ.ಆರ್.ವರ್ಷರಾಜ್, ಗುಬ್ಬಿಕ್ರಾಸ್ ಬೇತಲ್ ಪಬ್ಲಿಕ್ ಶಾಲೆಯ ಜೆ.ವರುಣ್ ತಲಾ 614 ಅಂಕ ಪಡೆದು ದ್ವಿತೀಯ ಸ್ಥಾನ ಪಡೆದಿದ್ದಾರೆ. ಬರಗೂರು ಮೊರಾರ್ಜಿ ವಸತಿ ಶಾಲೆಯ ಹರ್ಷ 613, ಸಂತೆ ಮರೂರು ಸರ್ಕಾರಿ ಪ್ರೌಢಶಾಲೆಯ ನೀತು 608, ಎಸ್.ಕೆ. ಸುಪ್ರಿಯ 604, ಐಶ್ವರ್ಯ 597 ಅಂಕಗಳನ್ನು ಪಡೆದು ಉತ್ತಮ ಸಾಧನೆ ಮಾಡಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ದೇವರಾಜ್ ತಿಳಿಸಿದ್ದಾರೆ.
ತಾಲೂಕಿನ ಬರಗೂರು ಮೊರಾರ್ಜಿ ವಸತಿ ಶಾಲೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ 100 ಫಲಿತಾಂಶ ದೊರೆತಿದೆ.ಪರೀಕ್ಷೆ ಬರೆದಿದ್ದ 45 ವಿದ್ಯಾರ್ಥಿಗಳಲ್ಲಿ 21 ಮಂದಿ ಎ+ ಗ್ರೇಡ್, 21 ಮಂದಿ ಎ ಗ್ರೇಡ್, ಇಬ್ಬರು ಬಿ+ ಗ್ರೇಡ್, ಓರ್ವ ವಿದ್ಯಾರ್ಥಿ ಬಿ ಗ್ರೇಡ್ ಪಡೆದಿದ್ದಾರೆ, ಹರ್ಷ 613 (ಶೇ 98.08) ಅಂಕ ಗಳಿಸಿ ಶಾಲೆಗೆ ಮೊದಲ ಸ್ಥಾನ ಪಡೆದಿದ್ದಾರೆ.
ಬಿ.ಎಂ.ಕುಮಾರಿ ಶೇ 97.44, ಎ.ಎಂ.ಸಿಂಚನಾ ಶೇ 97.28, ಕೆ.ಎಚ್. ಮಿಥುನ್ ಶೇ 97.12, ಕೆ .ಎಸ್.ರಂಜನ್ ಕುಮಾರ್ ಶೇ 96.48, ಬಿ.ಆರ್.ಸಿಂಚನ ಶೇ 95.52, ಎ.ಆರ್.ಅರ್ಜುನ್ ಶೇ 95.52, ಆರ್.ಕೆ.ಉಷಾ ಶೇ 95.52 ಅಂಕ ಪಡೆದು ಉತ್ತಮ ಸಾಧನೆ ಮೆರೆದಿದ್ದಾರೆ ಎಂದು ಪ್ರಾಂಶುಪಾಲ ಜಿ.ಆರ್.ಗಿರೀಶ್ ತಿಳಿಸಿದ್ದಾರೆ.ಆಶಿತಾ ಡಿಸೋಜಾ ಅರೇಹಳ್ಳಿ ಹೋಬಳಿ ಟಾಪರ್ಅರೇಹಳ್ಳಿ: ಬೇಲೂರು ತಾಲೂಕಿನ ಅರೇಹಳ್ಳಿಯ ರೋಟರಿ ಶಾಲೆ ೨೦೨೩-೨೪ರ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಶೇ.೧೦೦ ಪ್ರಗತಿ ದಾಖಲಿಸಿದೆ. ಒಟ್ಟು ೨೫ ವಿದ್ಯಾರ್ಥಿಗಳಲ್ಲಿ ೧೧ ಡಿಸ್ಟಿಂಕ್ಷನ್, ೧೩ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಅನಿಲ್ ಡಿಸೋಜಾರವರ ಮಗಳಾದ ಆಶಿತಾ ಡಿಸೋಜಾ ೬೧೨ ಅಂಕಗಳನ್ನು ಗಳಿಸಿ ಹೋಬಳಿಗೆ ಪ್ರಥಮ ಸ್ಥಾನದ್ದಾರೆ. ಉತ್ತಮ ಫಲಿತಾಂಶದ ಮೂಲಕ ಶಾಲೆಗೆ ಕೀರ್ತಿ ತಂದ ವಿದ್ಯಾರ್ಥಿಗಳನ್ನು ಆಡಳಿತ ಮಂಡಳಿ, ಮುಖ್ಯ ಶಿಕ್ಷಕಿ, ಶಿಕ್ಷಕಿಯರು ಹಾಗೂ ಸಿಬ್ಬಂದಿ ಅಭಿನಂದಿಸಿದ್ದಾರೆ.