ತಾಲೂಕು ನಾಯಕರ ಸಂಘದಿಂದ ಬೃಹತ್ ಪ್ರತಿಭಟನೆ

| Published : Sep 27 2025, 02:00 AM IST

ತಾಲೂಕು ನಾಯಕರ ಸಂಘದಿಂದ ಬೃಹತ್ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಈಗಾಗಲೇ ಆರ್ಥಿಕವಾಗಿ, ಸಾಮಾಜಿಕವಾಗಿ ನೊಂದಿರುವ ನಾಯಕ ಜನಾಂಗದವರು ಸಮಾಜದ ಮುಖ್ಯವಾಹಿನಿಗೆ ಬರಲು ಪರಿತಪ್ಪಿಸುತ್ತಿದ್ದು

ಕನ್ನಡಪ್ರಭ ವಾರ್ತೆ ಕೆ.ಆರ್. ನಗರ ನಾಯಕ ಸಮಾಜವನ್ನು ಹೊರತುಪಡಿಸಿ ಇತರ ಯಾವುದೇ ಜಾತಿಯನ್ನು ಎಸ್ಟಿ ಮೀಸಲು ಪಟ್ಟಿಗೆ ಸೇರಿಸಬಾರದು ಎಂದು ಒತ್ತಾಯಿಸಿ ಸಾಲಿಗ್ರಾಮ ಮತ್ತು ಕೆ.ಆರ್. ನಗರ ತಾಲೂಕು ನಾಯಕರ ಸಂಘದ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಿದರು.ಎರಡು ತಾಲೂಕಿನ ನಾಯಕ ಸಮಾಜದ ನೂರಾರು ಮಂದಿ ಮುಖಂಡರು ಮತ್ತು ಸಮುದಾಯದ ಜನರು ವಾಲ್ಮೀಕಿ ನಾಯಕ ಸಮುದಾಯ ಭವನದಿಂದ ಭಿತ್ತಿ ಪತ್ರ ಹಿಡಿದು ಮೆರವಣಿಗೆ ಹೊರಟು ರಾಜ್ಯ ಸರ್ಕಾರದ ವಿರುದ್ದ ಧಿಕ್ಕಾರದ ಘೋಷಣೆಗಳನ್ನು ಮೊಳಗಿಸಿದರು.ಈಗಾಗಲೇ ಆರ್ಥಿಕವಾಗಿ, ಸಾಮಾಜಿಕವಾಗಿ ನೊಂದಿರುವ ನಾಯಕ ಜನಾಂಗದವರು ಸಮಾಜದ ಮುಖ್ಯವಾಹಿನಿಗೆ ಬರಲು ಪರಿತಪ್ಪಿಸುತ್ತಿದ್ದು, ಸರ್ಕಾರ ಇತರೆ ಸಮಾಜವನ್ನು ಎಸ್ಟಿ ಮೀಸಲು ಪಟ್ಟಿಗೆ ಸೇರ್ಪಡೆ ಮಾಡಲು ಹೊರಟಿರುವುದು ನಮ್ಮನ್ನು ದಮನ ಮಾಡುವ ಕೆಲಸವಾಗಿದ್ದು, ಇದಕ್ಕೆ ನಾವು ಅವಕಾಶ ನೀಡುವುದಿಲ್ಲ ಎಂದು ಪ್ರತಿಭಟನಾ ಕಾರರು ಧಿಕ್ಕಾರ ಕೂಗಿದರು.ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಕುರುಬ ಮತ್ತು ಇತರೆ ಸಮುದಾಯದವರನ್ನು ಎಸ್.ಟಿ. ಮೀಸಲು ಪಟ್ಟಿಗೆ ಸೇರಿಸಬೇಕು ಎಂದು ಶಿಫಾರಸ್ಸು ಪತ್ರವನ್ನು ಕೇಂದ್ರಕ್ಕೆ ಕಳುಹಿಸಿದಾಗ ಅದು ತಿರಸ್ಕೃತವಾಗಿತ್ತು, ಆದರೆ ಇದನ್ನು ಅರಿತಿರುವ ನಾಯಕ ಸಮಾಜದ 16 ಮಂದಿ ಶಾಸಕರು ಮೂಕ ಪ್ರೇಕ್ಷಕರಾಗಿ ಕುಳಿತಿರುವುದು ನಾಚಿಕೆಗೇಡು ಎಂದು ಪ್ರತಿಭಟನಾಕಾರರು ತಮ್ಮ ಅಸಮಾಧಾನ ಹೊರ ಹಾಕಿದರು.ಕೆ.ಆರ್‌. ನಗರ ತಾಲೂಕು ನಾಯಕ ಸಂಘದ ಅಧ್ಯಕ್ಷ ಸುಬ್ಬುಕೃಷ್ಣ ಮತ್ತು ಸಾಲಿಗ್ರಾಮ ತಾಲೂಕು ಸಂಘದ ಅಧ್ಯಕ್ಷ ಸಿ.ಸಿ. ಮಹದೇವ್ ಅವರು ಕೆಲವು ಅನ್ಯ ಸಮಾಜದವರು ಸರ್ಕಾರದ ಉದ್ದೇಶ ಮತ್ತು ನಿಯಮವನ್ನು ಮರೆಮಾಚಿ ಎಸ್.ಟಿ. ಪ್ರಮಾಣ ಪತ್ರವನ್ನು ಮಾಡಿಸಿಕೊಂಡು ಸರ್ಕಾರದ ಸವಲತ್ತು ಪಡೆಯುವುದರೊಂದಿಗೆ ನೌಕರಿಯನ್ನು ಗಿಟ್ಟಿಸಿಕೊಂಡಿದ್ದು, ಅಕ್ರಮದ ಬಗ್ಗೆ ಸಮಾಜದ ಶ್ರೀಗಳು ಧ್ವನಿ ಎತ್ತಿದ್ದರು, ಸರ್ಕಾರ ಈ ಬಗ್ಗೆ ಗಮನಹರಿಸುತ್ತಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.ಆನಂತರ ಪ್ರತಿಭಟನಾಕಾರರು ವಾಲ್ಮೀಕಿ ಸಮುದಾಯ ಭವನದಿಂದ ಮೆರವಣಿಗೆ ಹೊರಟು ಡಾ.ಬಿ.ಆರ್. ಅಂಬೇಡ್ಕರ್, ಕೃಷ್ಣ ರಾಜೇಂದ್ರ ಒಡೆಯರ್ ಮತ್ತು ಹಾಗೂ ಡಾ. ಬಾಬುಜಗಜೀವನ್ ರಾಮ್‌ ಅವರ ಪ್ರತಿಮೆಗಳಿಗೆ ಮಾಲಾರ್ಪಣೆ ಸಲ್ಲಿಸಿ, ಆ ನಂತರ ಗರುಡಗಂಭ ವೃತ್ತ, ಪುರಸಭೆ ವೃತ್ತ ದ ಮೂಲಕ ತಹಸೀಲ್ದಾರರ ಕಚೇರಿಯವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ, ಗಾಂಧಿ ಪ್ರತಿಮೆಗೆ ಗೌರವ ಸಲ್ಲಿಸಿ ತಹಸೀಲ್ದಾರ್‌ಅವರಿಗೆ ಮನವಿ ಸಲ್ಲಿಸಿದರು.ಕೆ.ಆರ್. ನಗರ ತಾಲೂಕು ಸಂಘದ ಉಪಾಧ್ಯಕ್ಷ, ಸುರೇಶ್, ಮಹದೇವನಾಯಕ, ಕಾರ್ಯದರ್ಶಿ ಗಣೇಶ್, ಸಹ ಕಾರ್ಯದರ್ಶಿ ಬೈರನಾಯಕ, ಖಜಾಂಚಿ ನಾಗರಾಜು, ಸಂಘಟನಾ ಕಾರ್ಯದರ್ಶಿ ದೇವರಾಜು, ನಾಯಕ ಸಮಾಜದ ಮುಖಂಡರಾದ ರಾಮನಾಯಕ, ಕೃಷ್ಣನಾಯಕ, ಬೆಟ್ಟನಾಯಕ, ಕುಚೇಲ, ಚಿಕ್ಕರಾಮನಾಯಕ, ಶಾಂತಕುಮಾರ್, ದಿನೇಶ್, ಗೋಪಾಲನಾಯಕ, ಕೃಷ್ಣ, ವೆಂಕಟೇಶ ನಾಯಕ, ಉದೇಶ್ ನಾಯಕ, ಪವನ್, ಶಿವು, ಸಿ.ಎಂ. ಮಂಜುನಾಥ್, ಶಿವಣ್ಣ, ದೇವೇಂದ್ರ, ರಾಘವೇಂದ್ರ, ಬಸವರಾಜು, ಕೃಷ್ಣಮೂರ್ತಿ, ದಾಮೋದರ್, ಕುಬೇರ, ಮಲ್ಲಿಕಾರ್ಜುನ ನಾಯಕ, ಶಿವಣ್ಣನಾಯಕ, ಸಮಾಜದ ನೂರರು ಮಂದಿ ಭಾಗವಹಿಸಿದ್ದರು.----------