ಜಾತಿ ಗಣತಿ ಹೆಸರಿನಲ್ಲಿ ಧರ್ಮ ಒಡೆಯಲು ಹುನ್ನಾರ

| Published : Sep 23 2025, 01:04 AM IST

ಜಾತಿ ಗಣತಿ ಹೆಸರಿನಲ್ಲಿ ಧರ್ಮ ಒಡೆಯಲು ಹುನ್ನಾರ
Share this Article
  • FB
  • TW
  • Linkdin
  • Email

ಸಾರಾಂಶ

ಎರಡು ತಿಂಗಳ ಹಿಂದೆಯಷ್ಟೆ ನಾಗಮೋಹನದಾಸ್ ಆಯೋಗದಿಂದ ₹150 ಕೋಟಿ ಖರ್ಚು ಮಾಡಿ ಸಮೀಕ್ಷೆ ನಡೆಸಿದ್ದ ಒಳಮೀಸಲು ವರ್ಗೀಕರಣದ ಮೂಲಕ ಸಮಸ್ಯೆಗಳನ್ನು ಜೀವಂತವಾಗಿರಿಸಿದ್ದು, ಪ್ರಸ್ತುತ ಸಮೀಕ್ಷಾ ಪಟ್ಟಿಯಲ್ಲಿ ಇಲ್ಲದ ಜಾತಿಗಳನ್ನು ಸೃಷ್ಟಿಸಿರುವುದು ಖಂಡನೀಯ.

ನವಲಗುಂದ:

ರಾಜ್ಯ ಸರ್ಕಾರಕ್ಕೆ ಜಾತಿ ಗಣತಿ ಮಾಡುವ ಹಕ್ಕು ಇಲ್ಲದಿದ್ದರೂ ಜಾತಿ ಹೆಸರಿನಲ್ಲಿ ರಾಜ್ಯದ ಜನತೆಯಲ್ಲಿ ಒಡಕು ಮೂಡಿಸುವ ಮೂಲಕ ಮುಗ್ಧ ಜನರನ್ನು ದಾರಿ ತಪ್ಪಿಸುವ ಕಾರ್ಯ ಮಾಡುತ್ತಿದೆ ಎಂದು ಮಾಜಿ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಆರೋಪಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾತಿ ಗಣತಿ ಹೆಸರಿನಲ್ಲಿ ಧರ್ಮಗಳನ್ನು ಒಡೆಯಲು ಹುನ್ನಾರಕ್ಕೆ ಮುಂದಾಗಿದೆ ಎಂದರು.

ಎರಡು ತಿಂಗಳ ಹಿಂದೆಯಷ್ಟೆ ನಾಗಮೋಹನದಾಸ್ ಆಯೋಗದಿಂದ ₹150 ಕೋಟಿ ಖರ್ಚು ಮಾಡಿ ಸಮೀಕ್ಷೆ ನಡೆಸಿದ್ದ ಒಳಮೀಸಲು ವರ್ಗೀಕರಣದ ಮೂಲಕ ಸಮಸ್ಯೆಗಳನ್ನು ಜೀವಂತವಾಗಿರಿಸಿದ್ದು, ಪ್ರಸ್ತುತ ಸಮೀಕ್ಷಾ ಪಟ್ಟಿಯಲ್ಲಿ ಇಲ್ಲದ ಜಾತಿಗಳನ್ನು ಸೃಷ್ಟಿಸಿರುವುದು ಖಂಡನೀಯ ಎಂದರು.ಜಾತಿ ಗಣತಿಯಲ್ಲಿ ಶಿಕ್ಷಕರು ಗಣತಿಗೆ ಬಂದಾಗ ಧರ್ಮ ಎಂಬ ಕಾಲಂನಲ್ಲಿ ಹಿಂದೂ ಎಂದು ಎಲ್ಲರೂ ಕಡ್ಡಾಯವಾಗಿ ಬರೆಯಿಸಿ, ಉಪ ಜಾತಿ ಕಾಲಂನಲ್ಲಿ ನೀವು ಯಾವ ಉಪಜಾತಿಗೆ ಸೇರಿದ್ದಿರೋ ಅದನ್ನು ಬರೆಯಿಸಿ ಎಂದರು. ಸಂಭ್ರಮಾಚರಣೆ...

ಕೇಂದ್ರ ಸರ್ಕಾರ ಜಿಎಸ್‌ಟಿ ಕಡಿತಗೊಳಿಸಿದ್ದರಿಂದ ವ್ಯಾಪಾರಸ್ಥರು ಹಾಗೂ ಬಿಜೆಪಿ ಕಾರ್ಯಕರ್ತರೊಂದಿಗೆ ಸೇರಿ ಮಾಜಿ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ವಿಜಯೋತ್ಸವ ಆಚರಿಸಿದರು.

ಈ ವೇಳೆ ಬಿಜೆಪಿ ತಾಲೂಕು ಅಧ್ಯಕ್ಷ ಗಂಗಪ್ಪ ಮನಮಿ, ತಾಲೂಕು ಯುವ ಘಟಕ ಅಧ್ಯಕ್ಷ ಸಾಯಿಬಾಬಾ ಆನೆಗುಂದಿ, ಷಣ್ಮುಖ ಗುರಿಕಾರ, ಎಸ್.ಬಿ. ದಾನಪ್ಪನಗೌಡರ, ಸಿದ್ದನಗೌಡ ಪಾಟೀಲ, ಸುರೇಶ ಗಾಣಿಗೇರ, ಸಿದ್ದಣ್ಣ ಕೆಟಗೇರಿ, ದೇವರಾಜ ದಾಡಿಭಾಯಿ ಮತ್ತಿತರರಿದ್ದರು.