ಕೂಡ್ಲಿಗಿ ಸಹಕಾರಿ ಬ್ಯಾಂಕ್ ಅಧ್ಯಕ್ಷರಾಗಿ ಹುರುಳಿಹಾಳ್ ಬಸವೇಶ್ವರ ಆಯ್ಕೆ

| Published : Mar 04 2024, 01:21 AM IST

ಕೂಡ್ಲಿಗಿ ಸಹಕಾರಿ ಬ್ಯಾಂಕ್ ಅಧ್ಯಕ್ಷರಾಗಿ ಹುರುಳಿಹಾಳ್ ಬಸವೇಶ್ವರ ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಮಾತನಾಡಿದ ಹುರುಳಿಹಾಳ್ ಬಸವೇಶ್ವರ, ಸಾಮಾನ್ಯ ರೈತರು, ಹಳ್ಳಿಯ ಜನರ ಪರವಾಗಿ ಕೆಲಸ ಮಾಡುತ್ತೇನೆ ಎಂದರು.

ಕೂಡ್ಲಿಗಿ: ಕೂಡ್ಲಿಗಿ ತಾಲೂಕು ಶ್ರೀ ಕೊಟ್ಟೂರೇಶ್ವರ ಸಹಕಾರಿ ಬ್ಯಾಂಕ್‌ನ ನೂತನ ಅಧ್ಯಕ್ಷರಾಗಿ ಹುರುಳಿಹಾಳ್ ಟಿ. ಬಸವೇಶ್ವರ, ಉಪಾಧ್ಯಕ್ಷರಾಗಿ ದಿಬ್ಬದಹಳ್ಳಿ ಸಿದ್ದೇಶ್ ಶನಿವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಕೂಡ್ಲಿಗಿ ಶಾಸಕ ಡಾ. ಎನ್.ಟಿ. ಶ್ರೀನಿವಾಸ್, ಕೊಟ್ಟೂರಿನ ಹಿರಿಯ ಧುರೀಣರಾದ ಎಂ.ಎಂ.ಜೆ. ಹರ್ಷವರ್ಧನ್, ಜಿ.ಪಂ. ಮಾಜಿ ಉಪಾಧ್ಯಕ್ಷ ಪಿ.ಎಚ್. ದೊಡ್ಡರಾಮಣ್ಣ ಹಾಗೂ ತಾಲೂಕಿನ ಹಿರಿಯ ಮುಖಂಡರ ಸಹಕಾರದಿಂದ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಸುಸೂತ್ರವಾಗಿ ನಡೆಯಿತು.

ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಮಾತನಾಡಿದ ಹುರುಳಿಹಾಳ್ ಬಸವೇಶ್ವರ, ಸಾಮಾನ್ಯ ರೈತರು, ಹಳ್ಳಿಯ ಜನರ ಪರವಾಗಿ ಕೆಲಸ ಮಾಡುತ್ತೇನೆ. ರೈತಪರ ಬ್ಯಾಂಕ್ ಆಗಿ ಪರಿವರ್ತಿಸಲು ನಿರಂತರ ಶ್ರಮವಹಿಸುತ್ತೇನೆ ಎಂದು ಹೇಳಿದರು. ನೂತನ ಉಪಾಧ್ಯಕ್ಷ ದಿಬ್ಬದಹಳ್ಳಿ ಸಿದ್ದೇಶ್ ಮಾತನಾಡಿ, ರೈತರ ಪರವಾಗಿ ಕೆಲಸ ಮಾಡಲು ಉತ್ತಮ ಅವಕಾಶ ಎಂದು ತಿಳಿದುಕೊಂಡಿದ್ದೇನೆ ಎಂದರು. ಕಾಂಗ್ರೆಸ್, ಬಿಜೆಪಿ ಮುಖಂಡರು ಹಾಜರು: ಪಿಎಲ್‌ಡಿ ಬ್ಯಾಂಕ್‌ಗೆ ಟಿ. ಬಸವೇಶ್ವರ, ಉಪಾಧ್ಯಕ್ಷರಾಗಿ ದಿಬ್ಬದಹಳ್ಳಿ ಸಿದ್ದೇಶ್ ಅವಿರೋಧ ಆಯ್ಕೆಯ ಸಂದರ್ಭದಲ್ಲಿ ಕೂಡ್ಲಿಗಿ ಹಾಗೂ ಕೊಟ್ಟೂರು ತಾಲೂಕಿನ ಕಾಂಗ್ರೆಸ್ ಹಾಗೂ ಬಿಜೆಪಿ ಮುಖಂಡರು ಹಾಜರಾಗಿದ್ದರು.ಜಿಪಂ ಮಾಜಿ ಸದಸ್ಯರಾದ ದೊಡ್ಡರಾಮಣ್ಣ, ಪಿಎಲ್‌ಡಿ ಬ್ಯಾಂಕ್‌ನ ಮಾಜಿ ಅಧ್ಯಕ್ಷ ಹೊಸಹಳ್ಳಿ ಸತೀಶ್, ಕೊಟ್ಟೂರಿನ ಹಿರಿಯ ಮುಖಂಡರಾದ ಎಂಜಿನಿಯರ್ ಶರಣಪ್ಪ, ಹೊಸಹಳ್ಳಿ ಸೂರ್ಯಪ್ರಕಾಶ್, ಬಿ.ಎಸ್. ವೀರೇಶ್, ಕೊಟ್ಟೂರು ಎಪಿಎಂಸಿ ಮಾಜಿ ಅಧ್ಯಕ್ಷ ಜರ್ಮಲಿ ಶಶಿಧರ, ಎನ್.ವಿ. ತಮ್ಮಣ್ಣ, ಬೂದಿ ಶಿವಕುಮಾರ್ ತಾಪಂ ಮಾಜಿ ಅಧ್ಯಕ್ಷ ಜೆ.ಸಿ. ಧನಂಜಯ, ಜಿಪಂ ಮಾಜಿ ಸದಸ್ಯರಾದ ಟಿ. ರೇಚಣ್ಣ, ಹುರುಳಿಹಾಳ್ ರೇವಣ್ಣ, ಕೂಡ್ಲಿಗಿ ಪಪಂ ಸದಸ್ಯ ಕಾವಲಿ ಶಿವಪ್ಪ ನಾಯಕ, ಪಪಂ ಮಾಜಿ ಉಪಾಧ್ಯಕ್ಷ ಬೋರ್‌ವೆಲ್ ತಿಪ್ಪೇಸ್ವಾಮಿ, ಯುವ ಮುಖಂಡರಾದ ಎಕ್ಕೆಗುಂದಿ ನಾಗರಾಜ, ಕುರಿಹಟ್ಟಿ ರಾಮಣ್ಣ, ಜಿ. ಓಬಣ್ಣ, ನಿಂಬಳಗೆರೆ ರಾಜೇಂದ್ರಗೌಡ, ಬ್ಯಾಂಕ್ ವ್ಯವಸ್ಥಾಪಕ ಎಂ. ಸಾಮ್ಯನಾಯ್ಕ, ಬ್ಯಾಂಕ್ ನಿರ್ದೇಶಕರಾದ ಎಂ.ಎಸ್. ಪಂಕಜ, ಡಿ. ನಾಗೇಶ್, ಬಿ.ಡಿ. ಸೋಮಣ್ಣ, ಎ.ಆರ್. ಚಂದ್ರಶೇಖರಯ್ಯ, ಡಾ. ಜಿ.ಕೆ. ದಯಾನಂದ, ಟಿ. ಲೋಕರಾಜ, ಜಿ.ಆರ್. ಸಿದ್ದೇಶ್ವರ, ಕೆ. ಸಿದ್ದಪ್ಪ, ಕೆ. ಶಿವಪ್ಪ, ಕೆ. ವಸಂತ, ಪಿ.ಎಚ್. ರಾಘವೇಂದ್ರ, ಆರ್.ಎಂ. ಸರಮಸ್ ಹುಸೇನ್, ಕೆ. ಮೂರ್ತಿ ಉಪಸ್ಥಿತರಿದ್ದರು.