ಸಾರಾಂಶ
ಗಂಡು-ಹೆಣ್ಣು ಸಂಸಾರದ ಬಂಡಿಯನ್ನು ಎಳೆಯುವ ಎರಡು ಚಕ್ರಗಳು ಇದ್ದಂತೆ. ಇಬ್ಬರ ಪಾತ್ರವು ಇಲ್ಲಿ ಪ್ರಮುಖವಾಗಿವೆ ಎಂದು ಹೂವಿನ ಶಿಗ್ಲಿಯ ವಿರಕ್ತಮಠದ ಚನ್ನವೀರ ಮಹಾಸ್ವಾಮಿಗಳು ಹೇಳಿದರು.
ಲಕ್ಷ್ಮೇಶ್ವರ: ಗಂಡು-ಹೆಣ್ಣು ಸಂಸಾರದ ಬಂಡಿಯನ್ನು ಎಳೆಯುವ ಎರಡು ಚಕ್ರಗಳು ಇದ್ದಂತೆ. ಇಬ್ಬರ ಪಾತ್ರವು ಇಲ್ಲಿ ಪ್ರಮುಖವಾಗಿವೆ ಎಂದು ಹೂವಿನ ಶಿಗ್ಲಿಯ ವಿರಕ್ತಮಠದ ಚನ್ನವೀರ ಮಹಾಸ್ವಾಮಿಗಳು ಹೇಳಿದರು.
ಸಮೀಪದ ಹೂವಿನ ಶಿಗ್ಲಿಯ ವಿರಕ್ತಮಠದ 45ನೇ ಜಾತ್ರಾ ಮಹೋತ್ಸವದ ಅಂಗವಾಗಿ ಸೋಮವಾರ ನಡೆದ ಸಾಮೂಹಿಕ ವಿವಾಹ ಹಾಗೂ ಧರ್ಮಸಭೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬಡವರ ಪಾಲಿಗೆ ಆಡಂಬರದ ಮದುವೆಗಳು ಸಾಲದ ಕೂಪಕ್ಕೆ ತಳ್ಳುತ್ತವೆ. ತಂದೆ-ತಾಯಿಗಳ ಸೇವೆ ಮಾಡುವ ಹೆಂಡತಿ ಹಾಗೂ ತನ್ನ ಸಂಸಾರವನ್ನು ಸದಾ ಕಾಯ್ದುಕೊಂಡು ಸಾಗುವ ಗಂಡ-ಹೆಂಡತಿ ಇಬ್ಬರು ಒಂದು ಬಂದಿಯ ಎರಡು ಚಕ್ರಗಳು ಇದ್ದಹಾಗೆ. ಗಂಡು ಹೆಣ್ಣುಗಳ ಅನುಸರಿಸಿಕೊಂಡು ಹೋಗುವುದರಲ್ಲಿ ಜೀವನದ ಸಾರ್ಥಕತೆ ಅಡಗಿದೆ. ಹೆತ್ತ ತಂದೆ ತಾಯಿಗಳನ್ನು ಮನೆಯಲ್ಲಿ ಚೆನ್ನಾಗಿ ಜೋಪಾನ ಮಾಡಿ ಸಾಕುವ ಮನೆತನವು ಸ್ವರ್ಗಕ್ಕೆ ಕಿಚ್ಚು ಹಚ್ಚುವ ಸಾಮರ್ಥ್ಯ ಹೊಂದಿದೆ. ಆದ್ದರಿಂದ ಸಂಸ್ಕಾರ ಹೊಂದಿರುವ ಮನೆಗಳು ಕಡಿಮೆಯಾಗುತ್ತಿರುವುದು ನೋವಿನ ಸಂಗತಿಯಾಗಿದೆ. ನಿಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ಹಾಗೂ ಶಿಕ್ಷಣ ನೀಡುವ ಕಾರ್ಯವನ್ನು ನೀವು ಮಾಡಬೇಕು ಎಂದು ಹೇಳಿದರು. ಈ ವೇಳೆ ಸವಣೂರಿನ ದೊಡ್ಡಹುಣೇಸಮಠದ ಚನ್ನಬಸವ ಸ್ವಾಮಿಗಳು ಮಾತನಾಡಿದರು. ಸಭೆಯಲ್ಲಿ ಚಂಬಣ್ಣ ಬಾಳಿಕಾಯಿ, ಬಸಣ್ಣ ಬೆಂಡಿಗೇರಿ, ಪಾಂಡುರಂಗ ಶೇಠ, ಶಿವಪ್ರಕಾಶ ಲಿಂಬಯ್ಯಸ್ವಾಮಿಮಠ ಸೇರಿದಂತೆ ಅನೇಕರು ಇದ್ದರು.;Resize=(128,128))
;Resize=(128,128))
;Resize=(128,128))