ಗುಡಿಸಲು ಸುಟ್ಟು ಕುಟುಂಬಗಳಿಗೆ ಶೀಘ್ರ ಮನೆ ನಿರ್ಮಾಣ: ಡಾ.ಜಿ.ಪರಮೇಶ್ವರ್‌

| Published : Apr 29 2024, 01:38 AM IST

ಗುಡಿಸಲು ಸುಟ್ಟು ಕುಟುಂಬಗಳಿಗೆ ಶೀಘ್ರ ಮನೆ ನಿರ್ಮಾಣ: ಡಾ.ಜಿ.ಪರಮೇಶ್ವರ್‌
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನ ಹೊಳವನಹಳ್ಳಿ ಹೋಬಳಿ ಚಿಂಪುಗಾನಹಳ್ಳಿಯಲ್ಲಿ ಗುಡಿಸಲು ಸುಟ್ಟಿರುವ ಸ್ಥಳಕ್ಕೆ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಕೊರಟಗೆರೆ

ತಾಲೂಕಿನ ಹೊಳವನಹಳ್ಳಿ ಹೋಬಳಿ ಚಿಂಪುಗಾನಹಳ್ಳಿಯಲ್ಲಿ ಗುಡಿಸಲು ಸುಟ್ಟಿರುವ ಸ್ಥಳಕ್ಕೆ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಸ್ವಂತ ಪರಿಹಾರ ನೀಡಿದ್ದು, ನೀತಿ ಸಂಹಿತೆ ಮುಗಿದ ನಂತರ ಮನೆ ನಿರ್ಮಿಸಿಕೊಡುವ ಭರವಸೆ ನೀಡಿದರು. ತಾಲೂಕಿನ ಹೊಳವನಹಳ್ಳಿ ಹೋಬಳಿ ಚಿಂಪುಗಾನಹಳ್ಳಿಯ ಹೊರವಲಯದಲ್ಲಿ ಏ.26 ರಂದು 10 ಗುಡಿಸಲುಗಳಿಗೆ ಬೆಂಕಿ ಬಿದ್ದು ಸಂಪೂರ್ಣ ಸುಟ್ಟು ಹೋಗಿದ್ದವು. ಕ್ಷೇತ್ರದ ಶಾಸಕ ಡಾ.ಜಿ.ಪರಮೇಶ್ವರ್‌ ಗುಡಿಸಲು ಸುಟ್ಟ ಸ್ಥಳಕ್ಕೆ ಭೇಟಿ ನೀಡಿದರು. ಗುಡಿಸಲು ಸುಟ್ಟ ಪ್ರತಿಯೊಂದು ಕುಟುಂಬದ ಪಟ್ಟಿ ಪಡೆದು ನೊಂದ ಕುಟುಂಬಗಳಿಗೆ ಸ್ವಂತ ಪರಿಹಾರ ನೀಡಿದರು.

ಈ ಕುರಿತು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಮಾತನಾಡಿ, ಈ ಸ್ಥಳದಲ್ಲಿ ಈ ಬೆಂಕಿ ಅನಾಹುತ ಎರಡನೇ ಬಾರಿ ಆಗಿದೆ. ಮೊದಲ ಬಾರಿಯೂ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಇವರಿಗೆ ಮನೆ ಕಟ್ಟಿಕೊಳ್ಳಲು ನೀವೇಶನಗಳನ್ನು ಗುರುತಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದೆ. ಗುಡಿಸಲು ಸುಟ್ಟ ಕುಟುಂಬದ ಬಹುತೇಕರು ಪರಿಶಿಷ್ಠ ಜಾತಿ ಮತ್ತು ಹಾವಾಡಿಗ ಕುಟುಂಬಗಳಾಗಿವೆ ಎಂದರು.

ಅಧಿಕಾರಿಗಳು ಈ ಗ್ರಾಮಕ್ಕೆ ಹೊಂದಿಕೊಂಡಿರುವ 9 ಎಕರೆ ಸರ್ಕಾರಿ ಜಮೀನನ್ನು ಗುರುತಿಸಿದ್ದಾರೆ. ಚುನಾವಣಾ ನೀತಿ ಸಂಹಿತೆ ಮುಗಿದ ತಕ್ಷಣ ಈ ಭಾಗದಲ್ಲಿ ಗುಡಿಸಲಿನಲ್ಲಿರುವ ಕುಟುಂಬಗಳಿಗೆ ಮೊದಲು ನಿವೇಶನಗಳನ್ನು ನೀಡಿ ಆಶ್ರಯ ಯೋಜನೆಗಳಲ್ಲಿ ಮನೆ ನಿರ್ಮಿಸಿ ಕೊಡಲಾಗುವುದು. ನಂತರ ಉಳಿದ ನಿವೇಶನಗಳನ್ನು ಗ್ರಾಮದಲ್ಲಿ ಬಡವರನ್ನು ಗುರುತಿಸಿ ನೀಡಲಾಗುವುದು ಎಂದು ಭರವಸೆ ನೀಡಿದರು.ಕ್ಷೇತ್ರಕ್ಕೆ ಸಾವಿರಾರು ಮನೆಗಳನ್ನು ತಂದರೂ ನಮ್ಮಲ್ಲಿ ಅವಿಭಕ್ತ ಕುಟುಂಬಗಳು ಕಡಿಮೆಯಾಗಿ ಎಲ್ಲರೂ ಚಿಕ್ಕ ಚಿಕ್ಕ ಕುಟುಂಬಗಳಾಗಿ ಹೊರಬರುತ್ತಿದ್ದಾರೆ. ಅದಕ್ಕಾಗಿ ನಾವುಗಳು ಕ್ಷೇತ್ರದಾಂದ್ಯತ ನಿವೇಶನ ಗುರುತಿಸಿ ಮನೆ ಕಟ್ಟಿಕೊಡುವ ಕೆಲಸ ಮಾಡುತ್ತಿದ್ದೇವೆ. ಆದರೆ ಹಲವು ಕಡೆ ಖಾಲಿ ಇರುವ ಸರ್ಕಾರಿ ಜಮೀನುಗಳಲ್ಲಿ ಗುಡಿಸಲು ಹಾಕಿಕೊಂಡರೆ ನಿವೇಶನ ನೀಡುತ್ತಾರೆ, ಎನ್ನುವ ಮನೋಭಾವ ಹಲವರಲ್ಲಿದೆ. ಇದಕ್ಕೆ ಸ್ಥಳೀಯರು ಹಾಗೂ ಜನಪ್ರತಿನಿಧಿಗಳು ಜನರಿಗೆ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದ್ದು, ಇವುಗಳು ಊರ್ಜಿತವಾಗುವುದಿಲ್ಲ ಎಂದು ಹೇಳಿದರು.

ಸ್ಥಳ ಪರಿಶೀಲನೆ ಮಾಡಿ ಅರ್ಹತೆ ಉಳ್ಳವರಿಗೆ ಮಾತ್ರ ನೀವೇಶನ ನೀಡಲಾಗುವುದು. ಸದ್ಯಕ್ಕೆ ಗುಡಿಸಲು ಸುಟ್ಟ ಕುಟುಂಬಗಳಿಗೆ ಬದುಕಲು ತಾತ್ಕಾಲಿಕ ಸಹಾಯ ಮಾಡಲಾಗಿದೆ. ಈ ಕುಟುಂಬಗಳಿಗೆ ಪಾವಗಡದ ಶ್ರೀ ಜಪಾನಂದ ಸ್ವಾಮೀಜಿ, ಸಿದ್ದರಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಎಲೆರಾಂಪುರದ ಡಾ. ಹುನುಮಂತನಾಥ ಸ್ವಾಮೀಜಿ, ಗೊರವನಹಳ್ಳಿ ಮಹಾಲಕ್ಷ್ಮೀ ಟ್ರಸ್ಟ್, ಕ್ಯಾಮೇನಹಳ್ಳಿ ಗ್ರಾಮ ಪಂಚಾಯಿತಿ ಸೇರಿದಂತೆ ಇನ್ನಿತರರು ಸಹಾಯ ಮಾಡಿದ್ದು, ಅವರಿಗೆಲ್ಲ ಧನ್ಯವಾದ ತಿಳಿಸಿದರು.ಸಿದ್ದರಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಈ ರೀತಿ ಅವಘಡಗಳು ತುಂಬಾ ದುಃಖ ತರುತ್ತವೆ. ಗುಡಿಸಲು ಸುಟ್ಟು ಕುಟುಂಬಗಳಿಗೆ ಶ್ರೀ ಮಠದಂದ ಅಡುಗೆ ಪಾತ್ರೆ, ಬಟ್ಟೆ, ದಿನಸಿ ಸಾಮಗ್ರಿಗಳನ್ನು ನೀಡಲಾಗಿದೆ. ಈಗಾಗಲೆ ಗೃಹ ಸಚಿವರು ನೊಂದಕುಟುಂಬಗಳಿಗೆ ಶೀರ್ಘವಾಗಿ ಮನೆ ಕಟ್ಟಿಕೊಡುವ ಭರವಸೆ ನೀಡಿದ್ದು, ನೋಂದವರ ಪರವಾಗಿ ಶ್ರೀ ಮಠವು ಸದಾ ಇರುತ್ತದೆ ಎಂದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೊಡ್ಲಹಳ್ಳಿ ಅಶ್ವತ್ಥನಾರಾಯಣ, ಅರಕೆರೆ ಶಂಕರ್, ಮುಖಂಡರಾದ ಮಹಾಲಿಂಗಪ್ಪ, ಗ್ರಾಪಂ ಅಧ್ಯಕ್ಷ ನಾಗರಾಜು, ಜಯರಾಂ. ದೇವರಾಜು, ರಘು, ದರ್ಶನ್, ಕೆಂಪರಾಜು, ಶಿವಕುಮಾರ್ ಹಾಜರಿದ್ದರು.