ದೂಡಾ ಕಚೇರಿಗೆ ಬಿಜೆಪಿ ಮುತ್ತಿಗೆ ಹಾಕಿದ್ದ ವೇಳೆ ಪ್ರತಿಭಟನಾ ನಿರತ ಕೇಸರಿ ಪಡೆಗೆ ಹೂವು, ಜ್ಯೂಸ್ ನೀಡುವುದಕ್ಕೆ ಮುಂದಾಗಿದ್ದ ಯುವ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರನ್ನು ಪೊಲೀಸರು ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ದೂಡಾ ಕಚೇರಿಗೆ ಬಿಜೆಪಿ ಮುತ್ತಿಗೆ ಹಾಕಿದ್ದ ವೇಳೆ ಪ್ರತಿಭಟನಾ ನಿರತ ಕೇಸರಿ ಪಡೆಗೆ ಹೂವು, ಜ್ಯೂಸ್ ನೀಡುವುದಕ್ಕೆ ಮುಂದಾಗಿದ್ದ ಯುವ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರನ್ನು

ಪೊಲೀಸರು ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದರು.

ನಗರದ ದೂಡಾ ಕಚೇರಿ ಬಳಿ ಯಶವಂತರಾವ್ ಇತರರ ನೇತೃತ್ವದಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಮುತ್ತಿಗೆ ಹಾಕಿದ್ದ ವೇಳೆ ಯುವ ಕಾಂಗ್ರೆಸ್ಸಿನ ವರುಣ್ ಬೆಣ್ಣೆಹಳ್ಳಿ, ಎಸ್.ಕೆ.

ಪ್ರವೀಣ ಯಾದವ್, ಎಲ್.ಎಂ.ಎಚ್.ಸಾಗರ್‌, ಮುಜಾಹಿದ್ ಪಾಷಾ ಇತರರು ಪ್ರತಿಭಟನಾಕಾರರಿಗೆ ಜ್ಯೂಸ್ ಹಾಗು ಹೂವು ಕೊಡುವುದಕ್ಕೆ ಮುಂದಾಗಿದ್ದರು. ಆಗ ಕೆಲವರು ಬಿಜೆಪಿಯವರ ಮೇಲೆ ಹೂವುಗಳನ್ನು ಎಸೆದಿದ್ದರಿಂದ ಯುವ ಕಾಂಗ್ರೆಸ್ಸಿಗರವನ್ನು ಮುಂಜಾಗ್ರತಾ ಕ್ರಮವಾಗಿ ಪೊಲೀಸರು ವಶಕ್ಕೆ ಪಡೆದು, ತಮ್ಮ ವಾಹನದಲ್ಲಿ ಪೊಲೀಸ್ ಕವಾಯತು ಮೈದಾನಕ್ಕೆ ಕರೆದೊಯ್ದರು.

ಪ್ರತಿಭಟನಾಕಾರರು ಏಕ ನಿವೇಶನಕ್ಕೆ ಅನುಮೋದನೆ ನೀಡಿದ ವಿಚಾರದಲ್ಲಿ ಬಿಜೆಪಿ ಮುಖಂಡರ ಆರೋಪದಿಂದ ಆಕ್ರೋಶಗೊಂಡ ದೂಡಾ ಆಯುಕ್ತ ಹುಲ್ಮನಿ ತಿಮ್ಮಣ್ಣ ವಾಗ್ವಾದಕ್ಕಿಳಿದರು. ಮನವಿ ಪತ್ರ ಸ್ವೀಕರಿಸಲು ನಿರಾಕರಿಸಿ, ತಮ್ಮ ಕಚೇರಿಗೆ ನಡೆದರು. ನಂತರ ಪೊಲೀಸ್ ಅಧಿಕಾರಿಗಳು ದೂಡಾ ಆಯುಕ್ತರ ಮನವೊಲಿಸಿ, ಕರೆ ತಂದು ಬಿಜೆಪಿಯವರಿಂದ ಮನವಿ ಸ್ವೀಕರಿಸುವಂತೆ ನೋಡಿಕೊಂಡರು.

ಅಧ್ಯಕ್ಷನಾಗಿ ಮಾಡಿದ್ದೇ ತಪ್ಪು:

ಶಾಮನೂರು ಕುಟುಂಬದ ಸೇವೆ ಮಾಡುವ ವ್ಯಕ್ತಿಗೆ ದೂಡಾ ಅಧ್ಯಕ್ಷನಾಗಿ ಮಾಡಿದ್ದೇ ತಪ್ಪಾಗಿದೆ. ದಾಖಲೆಗಳಿಲ್ಲದೆ ಸುಳ್ಳು ಆರೋಪ ಮಾಡುವುದು, ಉಡಾಫೆ ಮಾತು, ಪ್ರಶ್ನಿಸಿದರೆ ಓಡಿ ಹೋಗುವುದೇ ದಿನೇಶ ಶೆಟ್ಟಿ ಚಾಳಿಯಾಗಿದೆ. ಅದೆಷ್ಟೋ ಸಲ ಸೂಕ್ತ ದಾಖಲೆ ಸಮೇತ ಚರ್ಚೆಗೆ ನಾವು ಕರೆದರೂ ಬಂದಿಲ್ಲ. ಯಾವುದೇ ದಾಖಲೆ ಇಲ್ಲದೇ ನಮ್ಮ ವಿರುದ್ಧ ಆರೋಪವನ್ನು

ಮಾಡುವ ದೂಡಾ ಅಧ್ಯಕ್ಷ ಇನ್ನಾದರೂ ದಾಖಲೆ ಇಟ್ಟುಕೊಂಡು ಆರೋಪ ಮಾಡಲಿ ಎಂದು ಬಿಜೆಪಿ ಮುಖಂಡ, ದೂಡಾ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್ ಹೇಳಿದರು.

ಶಾಬನೂರು ರಿ.ಸ.ನಂ.127ರಲ್ಲಿನ ಪಾರ್ಕ್ ಜಾಗವನ್ನು ದೂಡಾ ಅಧ್ಯಕ್ಷ ದಿನೇಶ ಶೆಟ್ಟಿ ಸ್ವತಃ ಖಾಸಗಿ ವ್ಯಕ್ತಿಗಳಿಗೆ ಏಕ ನಿವೇಶನ ಮಾಡಿಕೊಟ್ಟಿದ್ದು, 1984ರಲ್ಲೇ ದೂಡಾದಿಂದ ಆ ಜಾಗವು

ಪಾರ್ಕ್ ಆಗಿ ಅನುಮೋದನೆಯಾಗಿದೆ. ಯೋಗ್ಯರಲ್ಲದವರಿಗೆ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ಸಿಕ್ಕರೆ ಏನಾಗುತ್ತದೆಂಬುದಕ್ಕೆ ಸ್ವಾಮಿ ವಿವೇಕಾನಂದ ಬಡಾವಣೆ ಪಾರ್ಕನ್ನು ಭೂ ಮಾಫಿಯಾದವರಿಗೆ ಮಾಡಿಕೊಟ್ಟಿರುವುದೇ ಸಾಕ್ಷಿ. ಇದರಲ್ಲಿ ಕೋಟಿಗಟ್ಟಲೇ ಭ್ರಷ್ಟಾಚಾರ ನಡೆದಿದ್ದು, ಏಕ ನಿವೇಶನ ರದ್ಧುಪಡಿಸಿ, ಪಾರ್ಕ್ ಜಾಗ ಉಳಿಸುವವರೆಗೆ ನಮ್ಮ ಹೋರಾಟ ನಿರಂತರ.

ರಾಜನಹಳ್ಳಿ ಶಿವಕುಮಾರ, ದೂಡಾ ಮಾಜಿ ಅಧ್ಯಕ್ಷ.